ರಾಷ್ಟ್ರೀಯ

ಅಂಕ ಕೊಡ್ತೀನಿ ಎಂದು ವಿದ್ಯಾರ್ಥಿನಿಯನ್ನು ಹಾಸಿಗೆಗೆ ಕರೆದು ಮಗು ಕರುಣಿಸಿದ ಶಿಕ್ಷಕ !

Pinterest LinkedIn Tumblr

7460Delhi-gang-rape

ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಸಹಕರಿಸುವುದಾಗಿ ಆಸೆ ಹುಟ್ಟಿಸಿ ವಿದ್ಯಾರ್ಥಿನಿಯ ಜತೆ ಸತತ ಮೂರು ವರ್ಷಗಳ ಕಾಲ ಹಾಸಿಗೆ ಹಂಚಿಕೊಂಡು ಆಕೆಯ ಮಗುವಿಗೆ ಅಪ್ಪನಾದ ಘಟನೆ ಛತ್ತಿಸ್​ಗಡದಲ್ಲಿ ನಡೆದಿದೆ.

ಕೊಂಡಗೌನ್ ಜಿಲ್ಲೆಯ ಭೀಮಬೇಡ ಗ್ರಾಮ ನಿವಾಸಿ, ಬುಡಗಟ್ಟು ಜನಾಂಗದ 15 ವರ್ಷದ ಬಾಲಕಿ ಜಖರಪಾರಾದ ಹೈಸ್ಕೂಲಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದು ಇದೇ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯಸ್ಥನಾಗಿ ಮಾಧವ ನಾಗ್‌ ಕಾರ್ಯ ನಿರ್ವಹಿಸುತ್ತಿದ್ದ. ಈಕೆಯ ಮೇಲೆ ಕಾಮ ದೃಷ್ಟಿ ಬೀರಿದ್ದ ಈ ಕಾಮುಕ ಶಿಕ್ಷಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ನೀಡಿ ಪಾಸ್ ಮಾಡುವುದಾಗಿ ಆಮಿಷವೊಡ್ಡಿ  ಮೂರು ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ.

ಇದೀಗ ಆಕೆ ಮಗುವನ್ನು ಹೆತ್ತಿದ್ದು, ಈ ಮೂಲಕ ವಿಷಯ ಬೆಳಕಿಗೆ ಬಂದಿದೆ. ಈಗಾಗಲೇ ಬಾಲಕಿಯ ಪಾಲಕರು 52 ವರ್ಷದ ಈ ಕಾಮುಕ ಶಿಕ್ಷಕನ ಮೇಲೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ಶಿಕ್ಷಕನ ಪತ್ತೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment