ಅಂತರಾಷ್ಟ್ರೀಯ

ಅಮೆರಿಕಾದಲ್ಲಿ ಹಿಂದು ಜನಸಂಖ್ಯೆ ಹೆಚ್ಚಳ; ನಾಲ್ಕನೆ ಅತಿ ದೊಡ್ಡ ಧಾರ್ಮಿಕ ಸಮುದಾಯ; “ಕ್ರಿಶ್ಚಿಯನ್ ಜನಸಂಖ್ಯೆ ಕುಸಿಯುತ್ತಿದೆ ಎಂದ ವರದಿ

Pinterest LinkedIn Tumblr

Hindu-temple

ನ್ಯೂಯಾರ್ಕ್: ವಲಸಿಗರ ಹೆಚ್ಚಳದಿಂದ ಅಮೆರಿಕಾದಲ್ಲಿ ಹಿಂದೂಗಳ ಸಂಖ್ಯೆ 2.23 ದಶಲಕ್ಷಕ್ಕೆ ಏರಿದೆ. 2007ರಿಂದೀಚೆಗೆ ಹಿಂದುಗಳ ಜನಸಂಖ್ಯೆ ಶೇಕಡಾ 85.8 ಏರಿಕೆ ಕಂಡಿದೆ. ಇದು ಅಮೆರಿಕಾದಲ್ಲಿ ಹಿಂದುಗಳನ್ನು ನಾಲ್ಕನೇ ಅತಿ ದೊಡ್ಡ ಧಾರ್ಮಿಕ ಸಮುದಾಯವನ್ನಾಗಿಸಿದೆ.

ಹಿಂದುಗಳ ಅನುಪಾತದ ಏರಿಕೆ 2007 ರಲ್ಲಿ 0.4 ಇದ್ದರೆ ಕಳೆದ ವರ್ಷ ಇದು 0.7 ಇದೆ ಎಂದು ಧಾರ್ಮಿಕ ಜನಸಂಖ್ಯೆಯ ಅಧ್ಯಯನವೊಂದು ತಿಳಿಸಿದೆ. 2007 ರಲ್ಲಿ ಅಮೆರಿಕಾದ ಒಟ್ಟು ಜನಸಂಖ್ಯೆ 201.2 ದಷಲಕ್ಷವಿದ್ದು ಅದರಲ್ಲಿ ಹಿಂದೂಗಳ ಸಂಖ್ಯೆ 1.2 ದಶಲಕ್ಷ ಇತ್ತು. 2014 ರಲ್ಲಿ ಅಮೆರಿಕಾದ ಜನಸಂಖ್ಯೆ 318.88 ದಶಲಕ್ಷಕ್ಕೆ ಏರಿದ್ದು ಹಿಂದುಗಳ ಸಂಖ್ಯೆ 1.03 ದಶಲಕ್ಷ ಏರಿಕೆಯನ್ನು ಕಂಡಿದೆ.

“ಕ್ರಿಶ್ಚಿಯನ್ ಜನಸಂಖ್ಯೆ ಅಮೇರಿಕಾದಲ್ಲಿ ಅತಿ ಹೆಚ್ಚಿನದ್ದಾಗಿದ್ದರೂ ಈ ಸಂಖ್ಯೆ ಕುಸಿಯುತ್ತಿದೆ” ಎಂದು ವರದಿ ತಿಳಿಸಿದೆ.
ಇದಲ್ಲದೆ ಹಿಂದು ಸಮುದಾಯದ ಬಗ್ಗೆ ಇತರ ಮಾಹಿತಿಯನ್ನೂ ಈ ವರದಿ ನೀಡಿದೆ. ಅದರ ಮುಖ್ಯಾಂಶಗಳು ಇಂತಿವೆ.

ಹಿಂದೂಗಳಲ್ಲಿ ವಿವಾಹ ವಿಚ್ಚೇಧನ ಅತಿ ಕಡಿಮೆ ಅಂದರೆ 5% ಇದೆ. ಹಿಂದುಗಳು ಅನ್ಯಧರ್ಮೀಯರನ್ನು ಮದುವೆಯಾಗುವ ಸಂಭವ ಅತ್ಯಲ್ಪ. 91% ಹಿಂದುಗಳ ಸಂಗಾತಿಗಳು ಹಿಂದು ಧರ್ಮದವರೇ ಆಗಿದ್ದಾರೆ.
ಹಿಂದುಗಳ ಸರಾಸರಿ ವಯಸ್ಸು 33 ವರ್ಷ. ಸ್ಯಾನ್ ಫ್ರಾನ್ಸಿಸ್ಕೋದ 5% ಜನಸಂಖ್ಯೆ ಹಾಗೂ ನ್ಯೂಯಾರ್ಕ್ ನ 3% ಜನಸಂಖ್ಯೆ ಹಿಂದುಗಳು. ಬಹುತೇಕ ಹಿಂದುಗಳು ಪಶ್ಚಿಮದಲ್ಲೂ(38%) ಹಾಗೂ ಈಶಾನ್ಯದಲ್ಲೂ(33%) ವಾಸಿಸುತ್ತಾರೆ.

Write A Comment