ರಾಷ್ಟ್ರೀಯ

ಇನ್ನು ಮುಂದೆ 36 ಹಳೆ ಕಾನೂನುಗಳು ಕಣ್ಮರೆಯಾಗಲಿವೆ…?!

Pinterest LinkedIn Tumblr

par

ನವದೆಹಲಿ: ಈ ಹಿಂದೆ ಜಾರಿಗೊಳಿಸಲಾಗಿದ್ದ ಕೆಲವು ಹಳೆಯ ಕಾನೂನುಗಳನ್ನು ಶಾಶ್ವತವಾಗಿ ರದ್ದುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಇನ್ನು ಮುಂದೆ ದೇಶದ ಶಾಸನ ಪುಸ್ತಕದಲ್ಲಿ ಕೆಲವು ಪುಟಗಳು ಕಡಿಮೆಯಾಗಲಿವೆ.

ಅನಗತ್ಯವಾಗಿವೆ ಎಂದು ಕಂಡು ಬಂದ ಸುಮಾರು 36 ಕಾನೂನುಗಳು ಶಾಸನ ಪುಸ್ತಕದಿಂದ ಕಣ್ಮರೆಯಾಗಲಿದ್ದು, ಈಗಾಗಲೇ ಈ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾದೆ.

ಈ ಮಸೂದೆಯನ್ನು ಕಳೆದ ಡಿಸೆಂಬರ್‍ನಲ್ಲಿಯೇ ಅಂಗೀಕರಿಸಿದ್ದ ಲೋಕಸಭೆ, ಮೇಲ್ಮನೆಯ ಒಪ್ಪಿಗೆಗಾಗಿ ಕಳಿಸಿ ಕೊಟ್ಟಿತ್ತು. ಆದರೆ ಕೆಲವು ತಿದ್ದುಪಡಿ ಸೂಚನೆಗಳೊಂದಿಗೆ ರಾಜ್ಯಸಭೆಯೂ ಸಮ್ಮತಿ ಸೂಚಿಸಿತ್ತು. ಸರ್ಕಾರದ ನಿಯಮಗಳ ಪ್ರಕಾರ, ತಿದ್ದುಪಡಿ ಆದ ಬಳಿಕ ಮತ್ತೊಮ್ಮೆ ಲೋಕಸಭೆಯಲ್ಲಿ ಅಂಗೀಕರಿಸಬೇಕಿತ್ತು. ಆದ್ದರಿಂದ ಇದಕ್ಕೆ ಕಳೆದ ಬುಧವಾರ ಲೋಕಸಬೆಯಲ್ಲಿ ಅಂಗೀಕರ ಸಿಕ್ಕಿದ್ದು, ರಾಜ್ಯಸಭೆ ಹಾಗೂ ರಾಷ್ಟ್ರಪತಿ ಅವರ ಒಪ್ಪಿಗೆ ಸೂಚಿಸಿದ ಬಳಿಕ ರದ್ದಾಗಲಿವೆ.

Write A Comment