ರಾಷ್ಟ್ರೀಯ

ಉದ್ಯಮಿ ಕೊಲೆಗೆ ಸಂಚು: ಷಾರ್ಪ್ ಶೂಟರ್ ಬಂಧನ

Pinterest LinkedIn Tumblr

firing

ನವದೆಹಲಿ,ಮಾ.25: ಉದ್ಯಮಿಯೊಬ್ಬನ ಕೊಲೆಗೆ ಸಂಚು ರೂಪಿಸಿದ್ದ ಷಾರ್ಪ್ ಶೂಟರ್‌ವೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಪಾತಕಿಯ ಸಂಚು ವಿಫಲವಾಗಿದ್ದು, ಅನಾಹುತವೊಂದು ತಪ್ಪಿದಂತಾಗಿದೆ.

ಬಂಧಿತ ಷಾರ್ಪ್ ಶೂಟರ್‌ನನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪರಮಾಪ್ತ ಲಕ್ಡಾ ವಾಲಾನ ಸಹಚರ ಎಂದು ಗುರುತಿಸಲಾಗಿದೆ. ಈ ಹಂತಕ ದೆಹಲಿಯ ಉದ್ಯಮಿಯೊಬ್ಬನನ್ನು ಹತ್ಯೆ ಮಾಡಲು ಸುಫಾರಿ ಪಡೆದು ದೆಹಲಿಗೆ ಬಂದಿದ್ದ. ಉದ್ಯಮಿಯನ್ನು ಕೊಲೆ ಮಾಡಲು ಸಂಚನ್ನೂ ರೂಪಿಸಿದ್ದ. ಆದರೆ ಪಾತಕಿಯ ಸಂಚು ಕಾರ್ಯರೂಪಕ್ಕೆ ಬರುವ ಮುನ್ನವೇ, ಸ್ವತಃ ಹಂತಕನ್ನೇ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Write A Comment