ರಾಷ್ಟ್ರೀಯ

ಪ್ರತಿನಿತ್ಯ ಮಡದಿಯ ಕಾಲು ಮುಟ್ಟಿ ನಮಸ್ಕಾರ ಮಾಡ್ತಾರೆ ಈ ಸಚಿವ

Pinterest LinkedIn Tumblr

sandeep_kumar

ನವದೆಹಲಿ: ದೆಹಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಂದೀಪ್ ಕುಮಾರ್ ದಿನಾ ಪತ್ನಿಯ ಕಾಲಿಗೆ ಮುಟ್ಟಿ ನಮಸ್ಕಾರ ಮಾಡುತ್ತಾರಂತೆ. ಈ ವಿಷಯವನ್ನು ಸ್ವತಃ ಸಂದೀಪ್ ಅವರೇ ಬಹಿರಂಗ ಪಡಿಸಿದ್ದಾರೆ.

ಹರ್ಯಾಣದ ಸರಂಗಥಾಲ್ ಗ್ರಾಮದಲ್ಲಿ ಜನಿಸಿದ ಸಂದೀಪ್ ಅವರಿಗೆ ಈಗ 34ರ ಹರೆಯ. 2011 ಏಪ್ರಿಲ್ 5 ರಂದು ರಿತು ಎಂಬಾಕೆಯನ್ನು ಮದುವೆಯಾದ ಇವರು ಪ್ರತಿನಿತ್ಯ ಬೆಳಗ್ಗೆ ಹೆಂಡತಿ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾರೆ. ಮಾರ್ಚ್ 8ರಂದು ಮಹಿಳಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದೀಪ್ ಅವರು ತನ್ನ ಮಡದಿ ಮಾಡಿದ ತ್ಯಾಗಕ್ಕಾಗಿ ಧನ್ಯವಾದ ಹೇಳಿ, ನಾನು ಪ್ರತಿನಿತ್ಯ ಈಕೆಯ ಕಾಲಿಗೆ ಬೀಳುತ್ತೇನೆ ಎಂದಿದ್ದರು.

ಹೀಗೆ ಕಾಲುಮುಟ್ಟಿ ನಮಸ್ಕರಿಸುವಾಗ ಆಕೆ ಯಶಸ್ಸು ನಿಮ್ಮದಾಗಿರಲಿ ಎಂದು ಹೇಳುತ್ತಾಳೆ. ಹೆಚ್ಚಿನ ಸಂದರ್ಭಗಳಲ್ಲಿ ಆಕೆಯದ್ದು ಬರೀ ನಗು ಅಷ್ಟೇ. ಆಕೆ ನಿನಗೆ ಸದಾ ಸುಮಂಗಲಿಯಾಗಿರು ಅಂತ ಹಾರೈಸಲ್ವಾ? ಎಂದು ನನ್ನ ಗೆಳೆಯರು ತಮಾಷೆ ಮಾಡುವುದೂ ಉಂಟು ಎಂದು ಸಂದೀಪ್ ಹೇಳಿದ್ದಾರೆ.

Write A Comment