ರಾಷ್ಟ್ರೀಯ

ಗುಜರಾತ್‌ನಲ್ಲಿ ವಿಎಚ್‌ಪಿ ಮತಾಂತರ; 200ಕ್ಕೂ ಹೆಚ್ಚು ಕ್ರೈಸ್ತರ ಮತಾಂತರ

Pinterest LinkedIn Tumblr

vhp111

ವಲ್ಸದ್(ಗುಜರಾತ್), ಡಿ.21: ಕಳೆದ ಹಲವು ದಿನಗಳಿಂದ ಮತಾಂತರಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ-ಕೋಲಾಹಲಗಳು ನಡೆದಿರುವಂತೆಯೇ ಇತ್ತ ಗುಜರಾತ್‌ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತನ್ನ ಕಾಯಕವನ್ನು ಅಬಾಧಿತನಾಗಿ ಮುಂದುವರೆಸಿದ್ದು, 200ಕ್ಕೂ ಹೆಚ್ಚಿನ ಸಂಖ್ಯೆಯ ಕ್ರೈಸ್ತರನ್ನು ಹಿಂದೂಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಈ ಹಿಂದೆ ಕ್ರೈಸ್ತ ಮತಕ್ಕೆ ಹೋಗಿದ್ದ ಬುಡಕಟ್ಟು ಜನಾಂಗದ 200ಕ್ಕೂ ಅಧಿಕ ಸಂಖ್ಯೆಯ ಪರಿವರ್ತಿತ ಕ್ರೈಸ್ತರನ್ನು ನಿನ್ನೆ ಜಿಲ್ಲೆಯ ಅರನಾಯ್ ಗ್ರಾಮದಲ್ಲಿ ಹಿಂದೂ ವಿಧಿವಿಧಾನಗಳ ಮೂಲಕ ಪುನಃ ಹಿಂದೂಧರ್ಮಕ್ಕೆ ಮತಾಂತರ ಮಾಡಲಾಗಿದೆ. ಈ ಮತಾಂತರ ಸ್ವಪ್ರೇರಣೆಯೇ ಹೊರತು ಅವರಿಗೆ ಯಾವುದೇ ರೀತಿಯ ಬೆದರಿಕೆ ಹಾಕಲ್ಲ. ಬಲವಂತಪಡಿಸಿಲ್ಲ ಎಂದು ಸಂಘಟನೆಯ ಮುಖ್ಯಸ್ಥರು ಹೇಳಿದ್ದಾರೆ.

ವಿಎಚ್‌ಪಿ ಹಮ್ಮಿಕೊಂಡಿರುವ ಘರ್‌ವಾಪ್ಸಿ (ಮರಳಿ ಮನೆಗೆ) ಎಂಬ ಕಾರ್ಯಕ್ರಮದ ಅಂಗವಾಗಿ ಈ ಮತಾಂತರ ಕಾರ್ಯಕ್ರಮ ನಡೆದಿದ್ದು, 225 ಮಂದಿ ಕ್ರೈಸ್ತರನ್ನು ಹಿಂದೂಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷvನ ವಲ್ಸದ್ ಜಿಲ್ಲಾಧ್ಯಕ್ಷ ನಾಥೂ ಪಟೇಲ್ ಹೇಳಿದ್ದಾರೆ.

ಕ್ರೈಸ್ತರಾಗಿದ್ದ ಅವರನ್ನೆಲ್ಲ ಶುದ್ಧೀಕರಿಸಲು ಮಹಾಯಜ್ಞ ನೆರವೇರಿಸಲಾಯಿತು. ನಂತರ ಅವರಿಗೆಲ್ಲಾ ತಲಾ ಒಂದೊಂದು ಭಗವದ್ಗೀತೆ ಪ್ರತಿಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಜನ ಸೇರಿದ್ದರು ಎಂದು ಇನ್ನೊಬ್ಬ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಅಶೋಕ್ ಶರ್ಮಾ ಹೇಳಿದ್ದಾರೆ.

Write A Comment