ಮುಂಬೈ, ಡಿ.21: ಸದಾ ಹೊಸತನದ ತುಡಿತದಲ್ಲಿರುವ ಬಾಲಿವುಡ್‌ನ ಪರ್ಫೆಕ್ಟ್ ನಟ ಎಂದೇ ಹೆಸರಾಗಿರುವ ಅಮೀರ್‌ಖಾನ್ ಕ್ರಿಸ್‌ಮಸ್ ಮತ್ತು ಹೊಸ ವರ್ಷಗಳ ಪರ್ವಕಾಲದಲ್ಲಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಜನತೆಗೆ ಭಯೋತ್ಪಾದನೆ ವಿರುದ್ಧ ಸೆಟೆದು ನಿಲ್ಲಲು ಸ್ಫೂರ್ತಿ ತುಂಬುವ ಕಾರ್ಯಕ್ರಮವೊಂದನ್ನು ಯೋಜಿಸಿದ್ದಾರೆ.
ಇತ್ತೀಚೆಗೆ ತೆಹ್ರಿಕ್-ಇ-ತಾಲಿಬಾನ್ ಉಗ್ರರು ನಡೆಸಿದ ಪೈಶಾಚಿಕ ಮಕ್ಕಳ ಹತ್ಯಾಕಾಂಡದಲ್ಲಿ ನಲುಗಿ ಹೋಗಿರುವ ಪೇಶಾವರದ ಸೈನಿಕರ ಶಾಲೆಯ ಪುನಶ್ಚೇತನಕ್ಕಾಗಿ ಅಮೀರ್‌ಖಾನ್ ಕೊಡುಗೆಯನ್ನು ನೀಡಿದ್ದಾರೆ. ಇತ್ತೀಚೆಗೆ ಅಂದರೆ ಡಿ.13 ರಂದು ಲಾಸ್‌ವೆಗಾಸ್‌ನಲ್ಲಿ ದೇವನ್ ಅಲೆಗ್ಸಾಂಡರ್ ಯಶಸ್ಸಿನ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಧರಿಸಿದ್ದ ಚಿನ್ನದ ಕುಸುರಿಯ ಎರಡು ಶರ್ಟ್‌ಗಳನ್ನು ಅಮೀರ್‌ಖಾನ್ ಪೇಶಾವರದ ಆರ್ಮಿ ಪಬ್ಲಿಕ್ ಶಾಲೆಯ ದುರಸ್ತಿಗೆ ನೀಡಿದ್ದಾನೆ. ಈ ಎರಡು ಚಿನ್ನದ ಅಂಗಿಗಳ ಬೆಲೆ ಬರೋಬ್ಬರಿ 30 ಸಾವಿರ ಪೌಂಡ್‌ಗಳು. ಅಂದರೆ 30 ಲಕ್ಷ ರೂ.ಗಳು!
132 ಮಕ್ಕಳು ಹಾಗೂ 9 ಸಿಬ್ಬಂದಿಯನ್ನು ಬಲಿ ಪಡೆದ ಘಟನೆಯ ನಂತರ ಆ ಶಾಲೆಯನ್ನು ಪುನರ್ ನಿರ್ಮಾಣ ಮಾಡಲು ನಾನು ಇನ್ನೂ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇನೆ. ಅಲ್ಲದೆ ಶಾಲೆಯ ಸುಧಾರಣೆಗೂ ಕ್ರಮ ಕೈಗೊಳ್ಳಲಿದ್ದೇನೆ ಎಂದು ಅಮೀರ್ ಹೇಳಿದ್ದಾರೆ. ವಿಶೇಷವೆಂದರೆ ಪೇಶಾವರ ಈ ಪಿಕೆ ನಟನ ಅಜ್ಜ-ಮುತ್ತಜ್ಜಂದಿರು ಬದುಕಿದ್ದ ಊರು. ಬಾಲಿವುಡ್‌ನಲ್ಲಿ ಎಂಥೆಂಥಾ ನಟ-ನಟಿಯರಿದ್ದರೂ ಇಂಥಾ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಈ ರೀತಿಯ ಆಲೋಚನೆಗಳು ಅಮೀರ್‌ಖಾನ್ ಒಬ್ಬನ ಮನಸ್ಸಿನಲ್ಲೇ ಮೂಡುವುದು ಅಪರೂಪದ ವಿಷಯ.
One Comment
mmh
Fake news