ಅಂತರಾಷ್ಟ್ರೀಯ

ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ಜಬಾವ್ದಾರಿ ಹೊತ್ತುಕೊಂಡ ಸೌದಿ ರಾಜ

Pinterest LinkedIn Tumblr


ವಾಷಿಂಗ್ಟನ್​: ಪತ್ರಕರ್ತ ಜಮಾಲ್​ ಖಶೋಗ್ಗಿ ಕೊಲೆಯ ಸಂಪೂರ್ಣ ಜವಾಬ್ದಾರಿಯನ್ನು ಸೌದಿ ಅರೇಬಿಯಾದ ರಾಜ ಒಪ್ಪಿಕೊಂಡಿದ್ದಾರೆ. ಅಮೆರಿಕ ಟೆಲಿವಿಷನ್​ಗೆ ಕೆಲವು ತಿಂಗಳ ಹಿಂದೆ ಎಲ್ಲವೂ ನನ್ನ ಕಣ್ಗಾವಲಿನ ಅಡಿಯಲ್ಲಿ ನಡೆದಿರುವುದರಿಂದ ಇದರ ಜಬಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಎಲ್ಲ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ ಏಕೆಂದರೆ ಎಲ್ಲವೂ ನನ್ನ ಕಣ್ಗಾವಲಿನ ಅಡಿಯಲ್ಲಿಯೇ ನಡೆಯಿತು ಎಂದು ಸೌದಿ ರಾಜ ಮೊಹಮ್ಮದ್​ ಬಿನ್ ಸಲ್ಮಾನ್ ಕಳೆದ ಡಿಸೆಂಬರ್​ನಲ್ಲಿ ವರದಿಗಾರರಿಗೆ ಹೇಳಿರುವ ಈ ಸಣ್ಣ ತುಣುಕು ಇದೀಗ ಬಿಡುಗಡೆಯಾಗಿದ್ದು, ಅ.1ರಂದು ಇದರ ಪೂರ್ಣ ಡಾಕ್ಯುಮೆಂಟರಿ ಪ್ರಸಾರವಾಗಲಿದೆ.

2018ರ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್​ನಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯಾಗಿತ್ತು. ಖಶೋಗ್ಗಿ ಹತ್ಯೆಗೆ ಸೌದಿ ರಾಜ ಮಹಮ್ಮದ್​ ಬಿನ್ ಸಲ್ಮಾನ್​ ಆದೇಶ ನೀಡಿದ್ದಾರೆ ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ಮತ್ತು ವಿದೇಶಿ ಮಾಧ್ಯಮಗಳು ಆರೋಪ ಮಾಡಿದ್ದವು. ಆದರೆ, ಈ ಆರೋಪದ ಬಗ್ಗೆ ರಾಜ ಸಲ್ಮಾನ್​ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ವರ್ಷದ ಬಳಿಕ ಕೊಲೆಯ ಜಬಾಬ್ದಾರಿಯನ್ನು ತಾನೇ ಹೊತ್ತುಕೊಂಡಿದ್ದಾರೆ.

Comments are closed.