ಗಲ್ಫ್

“ಬಂಟ್ಸ್ ಬಹರೈನ್ ” ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ

Pinterest LinkedIn Tumblr

ಬಹರೈನ್ ; ಇಲ್ಲಿನ ಅನಿವಾಸಿ ಬಂಟ ಸಮುದಾಯದ ಒಕ್ಕೂಟವಾದ” ಬಂಟ್ಸ್ ಬಹರೈನ್” ಸಂಘಟನೆಯ 2018-19ರ ಸಾಲಿಗೆ ನೂತನ ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಗೊಂಡಿದ್ದು ,ನೂತನವಾಗಿ ಆಯ್ಕೆಗೊಂಡ ಆಡಳಿತ ಮಂಡಳಿಯ ಪಧಾದಿಕಾರಿಗಳ ಪದಗ್ರಹಣ ಸಮಾರಂಭವು ಇದೆ ತಿಂಗಳ 25ನೇ ತಾರೀಖಿನ ಗುರುವಾರದಂದು ಇಲ್ಲಿನ ಇಂಡಿಯನ್ ಕ್ಲಬ್ಬಿನ “ಸಂಸ್ಕಾರ್ ” ಸಭಾಂಗಣದಲ್ಲಿ ಸಂಜೆ 7ಘಂಟೆಗೆ ಜರುಗಲಿದೆ .

ಈ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯ್ಕ್ ,ಗೌರವ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಛೇರ್ಮನ್ ಶ್ರೀ ಬಸ್ರೂರು ರಾಜೀವ್ ಶೆಟ್ಟಿ ಯವರು ವಿಶೇಷವಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂಟ ಸಮುದಾಯದ ಪ್ರತಿಭಾವಂತ ಕಲಾವಿದರುಗಳಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಈ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿರುವುದು .

“ಹಳೆ ಬೇರು ಹೊಸ ಚಿಗುರು ಸೇರಿದೊಡೆ ಮರ ಸೊಬಗು ” ಎಂಬಂತೆ ಬಂಟ ಸಮುದಾಯದ ಯುವ ಪೀಳಿಗೆ ಹಾಗು ಅನುಭವೀ ಸದಸ್ಯರ ಸಮ್ಮಿಲನ ಈ ನೂತನ ಆಡಳಿತ ಮಂಡಳಿಯಾಗಿದ್ದು 15ರ ಹೊಸ್ತಿಲಲ್ಲಿರುವ ಸಂಘಟನೆಯ 15ನೇ ವರುಷದ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಲು ಇದಾಗಲೇ ಆಡಳಿತ ಸಮಿತಿಯು ರೂಪುರೇಷೆಗಳನ್ನು ಹಾಕಿಕೊಂಡಿದೆ .

ದ್ವೀಪದ ಅನಿವಾಸಿ ಬಂಟರ ಒಕ್ಕೂಟವಾದ ಬಂಟ್ಸ್ ಬಹರೈನ್ ಸುಮಾರು ಒಂದೂವರೆ ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು ಇದೀಗ 15ನೇ ವರುಷದ ಸಂಭ್ರಮದಲ್ಲಿದೆ . ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಮುದಾಯದ ನೋವು,ನಲಿವುಗಳಿಗೆ . ನಿರಂತರವಾಗಿ ಸ್ಪಂದಿಸುತ್ತಾ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ . ಪ್ರಸಕ್ತ ಸಾಲಿನ ಬಂಟ್ಸ್ ಬಹರೈನ್ ನ ಚುಕ್ಕಾಣಿಯನ್ನು ಸಮುದಾಯದ ಯುವ ಉತ್ಸಾಹಿ ಶ್ರೀ ಪ್ರದೀಪ್ ಆರ್ ಶೆಟ್ಟೆಯವರು ಹಿಡಿದಿದ್ದು ಉಪಾಧ್ಯಕ್ಷರಾಗಿ ಸುಕೇಶ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿಗಳಾಗಿ ಧನಂಜಯ್ ಶೆಟ್ಟಿ ,ಉಪಕಾರ್ಯದರ್ಶಿಯಾಗಿ ರಜತ್ ಶೆಟ್ಟಿ ,ಮನೋರಂಜನಾ ಕಾರ್ಯದರ್ಶಿಯಾಗಿ ಅಭಿಜಿತ್ ಶೆಟ್ಟಿ ,ಉಪಮನೋರಂಜನಾ ಕಾರ್ಯದರ್ಶಿಯಾಗಿ ಶರತ್ ಶೆಟ್ಟಿ ,ಕ್ರೀಡಾ ಕಾರ್ಯದರ್ಶಿಯಾಗಿ ಮನೀಶ್ ಶೆಟ್ಟಿ ,ಖಜಾಂಚಿಯಾಗಿ ಅಕ್ಷತ್ ಹೆಗ್ಡೆ ಹಾಗು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸುದೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ .

ಚಿತ್ರ-ವರದಿ-ಕಮಲಾಕ್ಷ ಅಮೀನ್

Comments are closed.