ಕ್ರೀಡೆ

ಕನ್ನಡಿಗನ ಮಡಿಲಿಗೆ ಕೆಕೆಆರ್ ನಾಯಕ ಪಟ್ಟ !

Pinterest LinkedIn Tumblr

ಮುಂಬೈ: ಕೊಲ್ಕತಾ ನೈಟ್’ರೈಡರ್ಸ್(ಕೆಕೆಆರ್) ತಂಡ ಈ ಬಾರಿ ಸ್ಟಾರ್ ನಾಯಕ ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಎರಡು ಬಾರಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗಂಭೀರ್ ಈ ಬಾರಿ ಡೆಲ್ಲಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇದೇವೇಳೆ ಕನ್ನಡಿಗ ರಾಬಿನ್ ಉತ್ತಪ್ಪ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

2018ನೇ ಸಾಲಿನ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೆಕೆಆರ್ ಪ್ರಾಂಚೈಸಿಯು RTM ಕಾರ್ಡ್ ಬಳಸಿ 6.4 ಕೋಟಿ ನೀಡಿ ಉತ್ತಪ್ಪರನ್ನು ಉಳಿಸಿಕೊಂಡಿದೆ. ನಾಯಕತ್ವ ಅವಕಾಶದ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತಪ್ಪ, ಅಂತಹ ಅವಕಾಶ ಒದಗಿ ಬಂದರೆ ಖಂಡಿತ ಸ್ವೀಕರಿಸುತ್ತೇನೆ. ತಂಡ ನನ್ನಿಂದ ಏನನ್ನೂ ಬಯಸುತ್ತೋ ಅದನ್ನು ಶೇ.110ರಷ್ಟು ನೀಡಲು ಪ್ರಯತ್ನಿಸುತ್ತೇನೆಂದು ಉತ್ತಪ್ಪ ಹೇಳಿದ್ದಾರೆ.

ಈ ಮೊದಲು ಐಪಿಎಲ್’ನಲ್ಲಿ ಉತ್ತಪ್ಪ, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪುಣೆ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದರು. 2014ರಿಂದ ಕೆಕೆಆರ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

Comments are closed.