ದುಬೈ: ‘ದುಬೈ ಕನ್ನಡಿಗರ ಬಳಗ’ ವಾಟ್ಸಾಪ್ ಗ್ರೂಪ್ ವತಿಯಿಂದ ಗಣರಾಜ್ಯೋತ್ಸವ, ಹೊಸ ವರ್ಷ, ಕ್ರಿಸ್ಮಸ್, ಸಂಕ್ರಾಂತಿ ಪ್ರಯುಕ್ತ ಗಲ್ಫ್ ಕನ್ನಡಿಗರ ಭಾವೈಕ್ಯತೆಯ ಕೂಟ, ನಮ್ಮ ನಡಿಗೆ ಸೌಹಾರ್ದದ ಕಡೆಗೆ ಎಂಬ ದ್ಯೇಯ ವಾಕ್ಯದೊಂದಿಗೆ ಫೆಬ್ರವರಿ 2ನೇ ತಾರೀಖಿನಂದು ಶುಕ್ರವಾರ ಸಂಜೆ ದೇರಾ ದುಬೈಯಲ್ಲಿರುವ ಬೆಸ್ಟ್ ವೆಸ್ಟೆರ್ನ್ ಪ್ಲಸ್ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಗಲ್ಫ್ ಕನ್ನಡಿಗರ ಭಾವೈಕ್ಯತೆಯ ಕೂಟ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತಮ ಶೆಟ್ಟಿಯವರು ಹಾಗೂ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸುಂಗಂಧರಾಜ್ ಬೇಕಲ್ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದರು.
ಹೊಸ ವರ್ಷ, ಕ್ರಿಸ್ಮಸ್, ಗಣರಾಜ್ಯೋತ್ಸವ ಮತ್ತು ಸಂಕ್ರಾಂತಿ ವಿಶೇಷ ಕಾರ್ಯಕ್ರಮಗಳು ಜರುಗಿತು. ಅದೇ ರೀತಿಯಲ್ಲಿ ಯುಎಇಯಲ್ಲಿ ನೆಲಸಿರುವ ಕನ್ನಡಿಗರ ಪುಟಾಣಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು. ಯುಎಇಯಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ವಿವಿಧ ಭಾಗಗಳಿಂದ ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಈ ಮೂಲಕ ಕನ್ನಡಿಗರ ಐಕ್ಯತೆಗೆ ಸಾಕ್ಷಿಯಾಗಿದ್ದಾರೆ.
ಈ ಕಾರ್ಯಕ್ರಮದ ಆಯೋಜಿಸಿದ್ದು ದುಬೈ ಕನ್ನಡಿಗರ ಬಳಗ ವಾಟ್ಸಾಪ್ ಗ್ರೂಪ್ ಅಡ್ಮಿನ್ಸ್ ಗಳಾದ ಪೀಟರ್ ಜೊಯ್ಸೊನ್, ಯಮುನಾ ಮನೋಜ್ ಕುಮಾರ್, ರಫೀಕ್ ಅಲಿ ಕೊಡಗು ಹಾಗೂ ನಾಸೀರ್ ಜಮಾದಾರ್ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.