ಗಲ್ಫ್

ದುಬೈ: ಯಶಸ್ವಿಯಾಗಿ ನಡೆದ ಬಿಲ್ಲವ ಸ್ಪೋರ್ಟ್ಸ್ ಮೀಟ್

Pinterest LinkedIn Tumblr

Photo: Ashok Belman

ಬಿಲ್ಲವ ದುಬೈ ಸ್ಪೋರ್ಟ್ಸ್ ಮೀಟ್ ಶುಕ್ರವಾರದಂದು ದುಬೈ ಕಿಸೆಸ್’ನ ಬಿಲ್ವ ಇಂಡಿಯನ್ ಸ್ಕೂಲಿನ ಮೈದಾನದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.

ಓಟ, ಹಗ್ಗಜಗ್ಗಾಟ, ಲೆಮನ್-ಸ್ಪೂನ್ ರೇಸ್, ರಿಲೇ, ಟಗ್ ಆಫ್ ವಾರ್ ಸೇರಿದಂತೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆಯಿತು. ಪುರುಷರು, ಮಹಿಳೆಯರು, ಮಕ್ಕಳು ಈ ಸ್ಪರ್ಧಾ ಕೂಟದಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿದ್ದರು. ಕೊನೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಿ ಗೌರವಿಸಲಾಯಿತು.

ಸ್ಪೋರ್ಟ್ಸ್ ಮೀಟ್’ನಲ್ಲಿ ಬಿಲ್ಲವ ದುಬೈಯ ಅಧ್ಯಕ್ಷ ಸತೀಶ್ ಪೂಜಾರಿ, ಗೌರವ ಅಧ್ಯಕ್ಷ ಜೀತೆಂದ್ರ ಸುವರ್ಣ, ವಿಠ್ಠಲ್ ಪೂಜಾರಿ, ಅಶೋಕ್ ಪೂಜಾರಿ, ಜಯಂತ್, ಶಾಮಲಾ ಪೂಜಾರಿ, ಸ್ಮಿತಾ ಅಶೋಕ್ ಹಾಜರಿದ್ದರು. ದೀಪಕ್ ಯಸ್.ಪಿ.ಕಾರ್ಯಕ್ರಮ ನಿರೂಪಿಸಿದರು.

 

Comments are closed.