ಗಲ್ಫ್

ಜಗತ್ತಿನಲ್ಲೇ ಅತೀ ದುಬಾರಿ ಬಂಗಲೆ ಖರೀದಿಸಿದ ಸೌದಿ ದೊರೆ ಸಲ್ಮಾನ್‌

Pinterest LinkedIn Tumblr

ಲೌಸೆನ್ನೆಸ್‌: ಎರಡು ವರ್ಷಗಳ ಹಿಂದೆ ಭೂಲೋಕದ ಸ್ವರ್ಗದಂತಿದ್ದ ‘ಚಾತೇವು ಲೂಯಿಸ್‌XIV’ ಬಂಗಲೆ ಸುಮಾರು 1923 ಕೋಟಿ ರೂಪಾಯಿಗೆ ಮಾರಾಟವಾದಾಗ, ‘ಅದು ಜಗತ್ತಿನಲ್ಲೇ ಅತೀ ದುಬಾರಿ ಬಂಗಲೆ’ ಎಂದು ಫಾರ್ಚೂನ್‌ಮ್ಯಾಗಝಿನ್‌ಬಣ್ಣಿಸಿತ್ತು. ಬಂಗಲೆಯಲ್ಲಿದ್ದ ಚಿನ್ನದ ಎಲೆಗಳ ಕಾರಂಜಿ… ಅಮೃತಶಿಲೆಯಿಂದ ಕಡೆದ ಮೂರ್ತಿಗಳು… ಎಲುಬುಗಳು, ಹಾವಿನ ಪೊರೆಗಳು, ಅಲ್ಲಲ್ಲಿ ಗುಹೆ ಅಥವಾ ಒಳಕಿವಿಯಂತಹ ರಚನೆಗಳಿಂದ ವಿನ್ಯಾಸಗೊಳಿಸಿದ 57 ಎಕರೆ ವಿಸ್ತೀರ್ಣದ ಪಾರ್ಕ್‌… ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. ಬಂಗಲೆ ಖರೀದಿಯಾದ ಸಂದರ್ಭದಲ್ಲಿ ಇಂತಹ ಹತ್ತಾರು ಮಾಹಿತಿಗಳನ್ನು ಬಿಚ್ಚಿಡಲಾಗಿತ್ತು. ಆದರೆ, ಅಂದು ಆ ಮನೆಯನ್ನು ಖರೀದಿಸಿದವರಾರ‍ಯರು ಎಂಬ ಮುಖ್ಯ ಮಾಹಿತಿಯೇ ಮಿಸ್‌ಆಗಿತ್ತು.

ಈಗ, ಅದನ್ನು ಕೊಂಡುಕೊಂಡವರು ಸೌದಿ ಸಿಂಹಾಸನದ ದೊರೆ ಮೊಹಮ್ಮದ್‌ಬಿನ್‌ಸಲ್ಮಾನ್‌ಎಂಬ ಸಂಗತಿ ಬೆಳಕಿಗೆ ಬಂದಿದೆ. ಅಕ್ರಮ ಹೂಡಿಕೆ ಮೂಲಕ ಈ ಬಂಗಲೆ ಖರೀದಿಸಿದ್ದಾನೆ ಸಲ್ಮಾನ್‌. ಈತ ಅಂತಿಂಥವನಲ್ಲ. ಸೌದಿ ಅರೇಬಿಯಾದ ಪರಿವರ್ತನೆಗಾಗಿ ಚಾಲ್ತಿಗೆ ತರಲಾದ ಸರಣಿಯೋಪಾದಿಯ ಕ್ರಾಂತಿಕಾರಿ ಧೋರಣೆಗಳ ಹಿಂದಿನ ಚಾಲಕ ಶಕ್ತಿ ಈತ. ಮಧ್ಯಪ್ರಾಚ್ಯದ ಜಂಘಾಬಲ ಉಡುಗಿಸಿದ ಖ್ಯಾತಿಯೂ ಈತನಿಗೇ ಸೇರುತ್ತದೆ.

ಹಾಗೆ ನೋಡಿದರೆ, 2015ನೇ ಇಸವಿ ಸೌದಿ ದೊರೆಯ ಪಾಲಿಗೆ ದುಬಾರಿ ಖರೀದಿಗಳ ವರ್ಷವೆಂದರೂ ತಪ್ಪಾಗಲಾರದು. ಹೆಚ್ಚೂಕಡಿಮೆ 3200 ಕೋಟಿ ರೂಪಾಯಿ ಮೌಲ್ಯದ ವಿಹಾರ ನೌಕೆ, ಸುಮಾರು 2800 ಕೋಟಿ ರೂಪಾಯಿ ಮೌಲ್ಯದ ಲಿಯೊನಾರ್ಡೊ ಡಾ ವಿಂಚಿ ಪೇಂಟಿಂಗ್‌… ಹೀಗೆ ಸಾಲು ಸಾಲು ದುಬಾರಿ ಖರೀದಿಗಳ ಒಡೆಯನೆನಿಸಿಕೊಂಡಿದ್ದರು ಮೊಹಮ್ಮದ್‌ಬಿನ್‌ಸಲ್ಮಾನ್‌. ಆದರೆ ಇದೇ ಸಲ್ಮಾನ್‌ಅದಕ್ಕೂ ಮೊದಲು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಸ್ವಯಂ ಅಭಿವರ್ಧಕನೆಂದು ಸೌದಿ ಗಣ್ಯರಿಂದ ಪ್ರಶಂಸೆಗೊಳಗಾಗಿದ್ದರು. ದುಂದುವೆಚ್ಚದ ಕೆಡುಕಿನ ಬಗ್ಗೆ ಬೋಧನೆ ಮಾಡಿದ್ದರು. ಆದರೆ, ಇದೀಗ ಅವರ ಬಣ್ಣ ಬಯಲಾಗಿದೆ.

Comments are closed.