ಕರಾವಳಿ

ಡೆಂಗ್ಯೂ ಜ್ವರಕ್ಕೆ ಪಪ್ಪಾಯಿ ಎಲೆ ರಸ ಅತ್ಯುತ್ತಮ ಮನೆ ಮದ್ದು.. !

Pinterest LinkedIn Tumblr

ಈಗ ಎಲ್ಲಾ ಕಡೆ ಡೆಂಗ್ಯೂ ಜ್ವರ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತಿದೆ, ಈ ನಡುವೆ ಈ ಜ್ವರ ಬಂದವರು ಚಿಕಿತ್ಸೆ ಪಡೆಯುವುದರ ಜತೆಗೆ ತಿನ್ನುವ ಆಹಾರ ಜೊತೆಗೆ ಸಹ ಗಮನ ಹರಿಸಿದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ಡೆಂಗ್ಯೂ ಜ್ವರದಿಂದ ನಾವು ಗುಣ ಮುಖರಾಗಬಹುದು.

ಡೆಂಗ್ಯೂ ಜ್ವರ ಬಂದವರು ವೈದ್ಯರ ಸಲಹೆ ಮೇರೆಗೆ ಈ ಟಿಪ್ಸ್ ಪಾಲಿಸಿದರೆ ಬೇಗನೆ ಗುಣ ಮುಖರಾಗುವುದರಲ್ಲಿ ಸಂಶವಿಲ್ಲ.

* ತಾಜಾ ಕಿತ್ತಳೆ ತಿನ್ನಿ. ಇದು ದೇಹಕ್ಕೆ ಶಕ್ತಿಯನ್ನು ತುಂಬುವುದು.
* ಡೆಂಗ್ಯೂ ಜ್ವರ ಬಂದರೆ ಕೈ ಕಾಲುಗಳಲ್ಲಿ ತುಂಬಾ ನೋವು ಇರುತ್ತದೆ. ಪಪ್ಪಾಯಿ, ಸೀಬೆಕಾಯಿ, ಕಿವಿ ಹಣ್ಣು, ವಿಟಮಿನ್ ಸಿ ಇರುವ ಆಹಾರಗಳನ್ನು ತಿನ್ನುವುದರಿಂದ ಮೈಗೆ ಶಕ್ತಿ ಬರುವುದು.
* ಬಿಸಿ ನೀರು ಅಥವಾ ಕುದಿಸಿ ಆರಿಸಿದ ನೀರನ್ನು ಕುಡಿಯಿರಿ ಸಾಕಷ್ಟು ನೀರು ಕುಡಿಯಬೇಕು
* ಬಾಯಿ ಚಪಲಕ್ಕೆ ಖಾರ ಹಾಗೂ ಎಣ್ಣೆ ಪದಾರ್ಥಗಳನ್ನು ತಿನ್ನಲು ಹೋಗಲೇ ಬೇಡಿ
* ದಿನಾ ಎರಡು ಚಮಚ ಪಪ್ಪಾಯಿ ಎಲೆ ರಸ ಕುಡಿಯಿರಿ. ಇದು ಡೆಂಗ್ಯೂಯಿಂದ ಗುಣಮುಖ ಮಾಡುವ ಅತ್ಯುತ್ತಮ ಮನೆ ಮದ್ದಾಗಿದೆ.
*ಎಳನೀರು ಕುಡಿಯುವುದು ಕೂಡ ಒಳ್ಳೆಯದು.
*ಡೆಂಗ್ಯೂ ಜ್ವರ ಬಂದರೆ ಇತರ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ವೆಜಿಟೆಬಲ್ ಸೂಪ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.
* ಹೆಚ್ಚು ನೀರು ಕುಡಿಯಿರಿ ಇದು ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
* ದಾಳಿಂಬೆ ಹಣ್ಣನ್ನು ತಿನ್ನಿ ಇದು ರಕ್ತದ ಪ್ಲೇಟೆಟ್ಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿರುತ್ತದೆ.
*ಡೆಂಗ್ಯೂ ಜ್ವರ ಬಂದವರಿಗೆ ಆದಷ್ಟು ವಿಶ್ರಾಂತಿ ನೀಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಅವರಿಗೆ ವಿಶ್ರಾಂತಿ ಅಗತ್ಯ
* ಜೊತೆಗೆ ವೈದ್ಯರು ಹೇಳುವ ಸಲಹೆ ಸೂಚನೆಗಳನ್ನು ಪಾಲಿಸಿ

Comments are closed.