ದುಬೈ: ನಮ್ಮ ಮಣ್ಣಿಗೆ ನಮ್ಮ ಗೌರವ ಎಂಬ ಶೀರ್ಷಿಕೆಯೊಂದಿಗೆ ಕನ್ನಡಿಗರು ದುಬೈ ಸಂಘವು ಇದೇ ನವೆಂಬರ್ ತಿಂಗಳ 24ನೇ ತಾರೀಕಿನಂದು ಜುಮೇರಾ ವಿಲೇಜಿನಲ್ಲಿ ಇರುವ ಜೆ ಎಸ್ ಎಸ್ ಇಂಟೆರ್ ನ್ಯಾಷನಲ್ ಸ್ಕೂಲಿನ ಸಭಾಂಗಣದಲ್ಲಿ ಅದ್ದೂರಿಯಾಗಿ 62ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ, ಕನ್ನಡಿಗರು ದುಬೈ ಸಂಘದ ವತಿಯಿಂದ ಇದು 10ನೇ ವರ್ಷದ ಕನ್ನಡರಾಜ್ಯೋತ್ಸವವಾಗಿದೆ.
ಈ ವರ್ಷ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಲವು ಕವಿಗಳು , ಲೇಖಕರು, ಚಿಂತಕರು ಹಾಗೂ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಕ್ಷೇತ್ರದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಭಾಗಿಯಾಗಲಿದ್ದಾರೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕನ್ನಡಿಗರು ದುಬೈ ಸಂಘದ ವತಿಯಿಂದ ನಡೆಸಲ್ಪಡುವ 62ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಘದ ಅಧ್ಯಕ್ಷರಾದ ವೀರೇಂದ್ರ ಬಾಬು ಅವರ ಅಧ್ಯಕ್ಷತೆಯಲ್ಲಿ ಸಂಜೆ 6 ಘಂಟೆಗೆ ಜರುಗಲಿದೆ , ಕಾರ್ಯಕ್ರಮಕ್ಕೆ ಆಗಮಿಸುವ ಮುಖ್ಯ ಅತಿಥಿಗಳು ದೀಪ ಬೆಳಗಿಸಿ ನಾಡಗೀತೆ ಹಾಡುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ತದನಂತರ ಮುಖ್ಯ ಅತಿಥಿಗಳ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ,
ಎಲ್ಲಾ ವರ್ಷವೂ ಕನ್ನಡಿಗರು ದುಬೈ ಸಂಘವು ಕನ್ನಡಕ್ಕೆ ಮತ್ತು ಕರ್ನಾಟಕಕ್ಕೆ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ಕನ್ನಡ ರತ್ನ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದ್ದು ಈ ವರ್ಷ ಕರ್ನಾಟಕ ವಿದ್ಯಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿರುವ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದೇವೆ.ಈ ಹಿಂದೆ ಈ ಪ್ರಶಸ್ತಿಯನ್ನು ಚಲನಚಿತ್ರ ನಟ ದ್ವಾರಕೀಶ್ ಹಾಗೆ ಕವಿ ಲೇಖಕ ಚಿಂತಕರು ಆದ ಪ್ರೊಫೆಸರ್ ಕೆ ಎಸ್ ನಿಸಾರ್ ಅಹ್ಮದ್ ಅವರಿಗೆ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ವರ್ಷದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕನ್ನಡಿಗರ ಹೆಮ್ಮೆಯ ಯು ಎ ಇ ರಾಜ್ಯದಲ್ಲಿ ತಮ್ಮದೇ ಖ್ಯಾತಿ ಹೊಂದಿರುವ ಹಾಗು ಎನ್ ಎಮ್ ಸಿ ಗ್ರೂಪಿನ ಚೇರ್ಮ್ಯಾನ್ ಹಾಗು ಹತ್ತು ಹಲವು ಕಂಪನಿಗಳ ಮಾಲಿಕರಾದ ಡಾ ಬಿ ಆರ್ ಶೆಟ್ಟಿ, ಎಸ್ ಎಸ್ ಗಣೇಶ್ ( ಮಾಲಿಕರು – ದಾವಣೆಗೆರೆ ಸುಗರ್ ಕೋ ಮತ್ತು ಲಕ್ಷ್ಮಿ ಫ್ಲೋರ್ ಮಿಲ್ಸ್ , ಎಸ್ ಎಸ್ ಏವಿಯೇಶನ್ ಅಧ್ಯಕ್ಷರು- ಸೌತ್ ಇಂಡಿಯನ್ ಸುಗರ್ ಮಿಲ್ಸ್ ಅಸೋಸಿಯೇಷನ್ ದಾವಣಗೆರೆ – ಕರ್ನಾಟಕ ), ಹಾಸ್ಯ ಚಿತ್ರ ನಟ ನಿರೂಪಕ ಮಾಸ್ಟರ್ ಆನಂದ್, ಗಾಯಕಿ ಅಂಜಲಿ ಹಳ್ಳಿಯಾಲ್, ಗಾಯಕಿ ವೀಣಾ ಹಾನಗಲ್ ಮುಂತಾದವರು ಭಾಗವಹಿಸಲಿದ್ದಾರೆ. ಯು ಎ ಇ ಯಲ್ಲಿ ನೆಲಸಿರುವ ಮಕ್ಕಳಿಂದ ಕನ್ನಡ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ವೀರೇಂದ್ರ ಬಾಬು , ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಉಮಾ ವಿಧ್ಯಾದರ್, ಶ್ರೀ ಸದನ್ ದಾಸ್, ಶ್ರೀ ಮಲ್ಲಿಕಾರ್ಜುನ ಗೌಡ, ಸಂಘದ ಸದಸ್ಯರುಗಳಾದ ದೀಪಕ್ ಸೋಮಶೇಖರ್, ಬಾಲಕೃಷ್ಣ, ಶ್ರೀಮತಿ ಮಮತಾ ರಾಘವೇಂದ್ರ , ಶ್ರೀಮತಿ ವಿಜಯ ಶಿವರುದ್ರಪ್ಪ, ಅರುಣ್ ಕುಮಾರ್ , ಶ್ರೀನಿವಾಸ್ ಅರಸ್, ಚಂದ್ರಕಾಂತ್ ಮತ್ತು ರಫೀಕ್ ಕೊಡಗು ಮುಂತಾದವರು ಉಪಸ್ಥಿತರಿದ್ದರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ –
050 4587390, 050 7576238, 050 8892487, 050 2433263