ಗಲ್ಫ್

ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಶಾಂತಿ ಪ್ರಕಾಶನದ ಮಳಿಗೆಗೆ ಭೇಟಿ ನೀಡಿದ ಶಾಯರಿ ಸಾಮ್ರಾಟ್ ಅಸದುಲ್ಲಾ ಬೇಗ್

Pinterest LinkedIn Tumblr

ಶಾರ್ಜಾ: ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳ ಇದರ ಉತ್ಸವ ನಡೆಯುತ್ತಿರುವ ಎಕ್ಸ್ ಪೋ ಸೆ೦ಟರ್ ಶಾರ್ಜಾ ದಲ್ಲಿನ ಏಕೈಕ ಕನ್ನಡ ಪುಸ್ತಕಾಲಯವಾದ ಶಾಂತಿ ಪ್ರಕಾಶನದ ಮಳಿಗೆಗೆ ಕಳೆದ ದಿನಾ೦ಕ 4.11.2017 ರ ಶನಿವಾರದಂದು ಕನ್ನಡದ ಖ್ಯಾತ ಶಾಯರಿ ಗಾಯಕನೆ೦ದೇ ಪ್ರಸಿದ್ಧರಾದ ಶಾಯರಿ ಸಾಮ್ರಾಟ್ ಅಸದುಲ್ಲಾ ಬೇಗ್ ರವರು ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಉಪಸ್ಥಿತರಿದ್ದ ಶಾ೦ತಿ ಪ್ರಕಾಶನಾಲಯದ ಪ್ರತಿನಿಧಿಗಳಾದ ಅಬ್ದುಲ್ ಸಲಾಮ್ ಯು., ಅಬ್ದುಲ್ ಖಾದರ್ ಕುಕ್ಕಾಜೆ, ಜಾಫ಼ರ್ ಸಾದಿಕ್ ಉಪ್ಪಿನಂಗಡಿ, ಅಬ್ದುಲ್ ಲತೀಫ಼್ ವಿಟ್ಲ, ಅಬ್ದುಲ್ ಸಲಾಮ್ ದೇರಳಕಟ್ಟೆ, ಇಬ್ರಾಹಿಮ್ ಸಈದ್ ಕಲ್ಲಂಗಲ ಮುಂತಾದವರು ಬೇಗ್ ರವರನ್ನು ಅಂದಿನ ಅತಿಥಿ ಸಂದರ್ಶಕರನ್ನಾಗಿ ಬರಮಾಡಿಕೊಂಡರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆ ಯನ್ನು ಪ್ರತಿನಿಧಿಸುತ್ತಿರುವ ಶಾಂತಿ ಮಳಿಗೆಗೆ ಅಭಿನ೦ದಿಸಿ ಶುಭ ಕೋರಿದ ಬೇಗ್ ಸಾಹೇಬರು ಕೆಲವು ಕನ್ನಡ ಶಾಯರಿಗಳನ್ನು ವಾಚಿಸಿ ಸೇರಿದ್ದ ಜನರ ಮನಸೂರೆಗೊಂಡರು.

ಇದೇ ಸಂಧರ್ಭದಲ್ಲಿ ಅತಿಥಿ ಸಂದರ್ಶಕರಾಗಿ ಆಗಮಿಸಿದ್ದ ಅಬೂಬಕ್ಕರ್ ತು೦ಬೆ ಪ್ರಾಚಾರ್ಯರು ಸ್ಖೋಲರ್ ಸ್ಕೂಲ್ ರಾಸಲ್ ಖೈಮ, ಸುಲೈಮಾನ್ ಬೈತಡ್ಕ ಅಲ್ ಐನ್ ರವರುಗಳೂ ಕೂಡ ಶಾಂತಿ ಸ೦ಸ್ಥೆಯ ಕೈಂಕರ್ಯ ವನ್ನು ಶ್ಲಾಘಿಸಿ ಶುಭ ಕೋರಿದರು.

ಇದೇ ಬರುವ ನವೆಂಬರ್ ಹನ್ನೊಂದನೇ ತಾರೀಕಿನ೦ದು ಕೊನೆಗೊಳ್ಳಲಿರುವ ಈ ಪುಸ್ತಕೋತ್ಸವವನ್ನು ಸಂದರ್ಶಿಸಲು ಮತ್ತು ಎಲ್ಲಾ ಕನ್ನಡಿಗರು ಇದರಲ್ಲಿನ ಶಾಂತಿ ಮಳಿಗೆಗೆ ಭೇಟಿ ನೀಡುವಂತೆ ಪ್ರಕಾಶನಾಲಯದ ವಕ್ತಾರರು ಮನವಿ ಮಾಡಿರುವರು.

ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಮಳಿಗೆ ಉದ್ಘಾಟನೆ

ಗಲ್ಫ್ ಮೆಡಿಕಲ್ ಕಾಲೇಜು ಮತ್ತು ತುಂಬೆ ಗ್ರೂಪ್ ಅಜ್ಮಾನ್‌ನ ಸ್ಥಾಪಕಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮೊಯ್ದಿನ್ ತುಂಬೆ ಇತ್ತೀಚೆಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಬ್ಯಾರೀಸ್ ವೆಲ್ಫೇರ್ ಫಾರಮ್ ಅಬುದಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಬ್ಯಾರೀಸ್ ಕಲ್ಚರಲ್ ಫಾರಮ್ ದುಬೈ ಇದರ ಉಪಾಧ್ಯಕ್ಷ ಎಂ.ಇ. ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಲೇಖಕ ಇರ್ಶಾದ್ ಮೂಡುಬಿದಿರೆ, ಶಾರ್ಜಾ ಕನ್ನಡ ಸಂಘದ ಅಧ್ಯಕ್ಷ ಸುಂದರ್ ರಾಜ್ ಬೇಕಲ್, ಕೊಂಕಣಿ ಸಾಹಿತ್ಯ ಪರಿಷತ್‌ನ ನೋಯಲ್ ಡಿ. ಅಲ್ಮೇಡಾ, ಅಲ್ ತಾಯಿಫ್ ಕಿಚನ್ ಎಕ್ಯೂಪ್‌ಮೆಂಟ್ಸ್‌ನ ಮಾಲಕ ತೋನ್ಸೆ ಕುದೂರ್ ಮುಹಮದ್ ರಫೀಕ್, ಮಲ್ಟಿ ಬಿಝ್ ಟ್ರೇಡಿಂಗ್‌ನ ಇಸ್ಮಾಯೀಲ್ ಬಾಳೆಹೊನ್ನೂರು, ಎಚ್‌ಎಂಸಿ ನಿರ್ದೇಶಕ ಶಕೀಲ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಯುಎಇ ಇದರ ಮುಖ್ಯಸ್ಥ ಆರೀಫ್ ಶರೀಫ್ ಅಬುದಾಬಿ ಮತ್ತು ಪದಾಧಿಕರಿಗಳಾದ ಬಾಷಾ ಸಾಹೇಬ್, ಅಬ್ದುಲ್ ಖಾದಿರ್ ಸಾಹೇಬ್ ಭಾಗವಹಿಸಿದ್ದರು,

Comments are closed.