ಅಂತರಾಷ್ಟ್ರೀಯ

ಬ್ರಿಟನ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಭಾರತೀಯನಿಗೆ 3 ತಿಂಗಳು ಜೈಲು

Pinterest LinkedIn Tumblr

jail-prison-inmate-web-generic1ದುಬೈ: ಬ್ರಿಟನ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 23 ವರ್ಷ ವಯಸ್ಸಿನ ಭಾರತೀಯ ನಾಗರಿಕನಿಗೆ ಮೂರು ತಿಂಗಳು ಜೈಲು ವಾಸದ ಶಿಕ್ಷೆಯನ್ನು ನೀಡಲಾಗಿದ್ದು, ಶಿಕ್ಷೆ ಪೂರ್ಣಗೊಳಿಸಿದ ನಂತರ ದುಬೈನಿಂದ ಗಡಿಪಾರು ಮಾಡುವಂತೆ ಕೋರ್ಟ್ ಆದೇಶ ನೀಡಿದೆ.

ಆರೋಪಿಗೆ ಮೂರು ತಿಂಗಳುಗಳ ಕಾಲ ಜೈಲು ಶಿಕ್ಷೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

35 ವರ್ಷದ ಬ್ರಿಟನ್ ಮಹಿಳೆಯೊಬ್ಬಳು ಕಿರಾಣಿ ಅಂಗಡಿಯಿಂದ ಕೆಲ ದಿನಸಿ ವಸ್ತುಗಳನ್ನು ಹೋಂ ಡೆಲೆವರಿ ಮಾಡುವಂತೆ ಬುಕ್ ಮಾಡಿದ್ದಳು. ಮನೆಗೆ ಡೆಲಿವರಿ ವಸ್ತುಗಳನ್ನು ತಂದ ಆರೋಪಿ ಆಕೆಯನ್ನು ಹಿಡಿದು ಚುಂಬಿಸಿದ್ದಲ್ಲದೇ ಆಕೆಯನ್ನು ತಬ್ಬಿಹಿಡಿದಿದ್ದ. ನಂತರ ಪೊಲೀಸರಿಗೆ ಕರೆ ಮಾಡುವುದಾಗಿ ಮಹಿಳೆ ಬೆದರಿಕೆಯೊಡ್ಡಿದ್ದರಿಂದ ಆರೋಪಿ ಪರಾರಿಯಾಗಿದ್ದ.

ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಆರೋಪಿ, ತಾನು ಯಾವುದೇ ತಪ್ಪು ಮಾಡಿಲ್ಲ. ಮಹಿಳೆಯೇ ನನಗೆ ಮದ್ಯ ಸೇವಿಸುವಂತೆ ಆಹ್ವಾನಿಸಿದ್ದಳು. ಆದರೆ ನಾನು ನಿರಾಕರಿಸಿದಾಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಹೇಳಿಕೆ ನೀಡಿದ್ದಾನೆ.

ಫಾರೆನ್ಸಿಕ್ ತಜ್ಞರ ಪ್ರಕಾರ ಮಹಿಳೆಯ ಕತ್ತಿನ ಬಳಿ ಆರೋಪಿಯ ಡಿಎನ್‌ಎ ಪತ್ತೆಯಾಗಿದ್ದರಿಂದ ಇಬ್ಬರ ನಡುವೆ ಸಂಪರ್ಕವಾಗಿದೆ ಎನ್ನುವುದು ಸಾಬೀತಾಗುತ್ತದೆ ಎಂದು ತಿಳಿಸಿದ್ದಾರೆ.

ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರೋಪಿಗೆ 15 ದಿನಗಳ ಕಾಲವಕಾಶವಿದೆ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ಮಾಹಿತಿ ನೀಡಿದ್ದಾರೆ.

Comments are closed.