ರಿಯಾಧ್: ಸಾರ್ವಜನಿಕ ಸ್ಥಳದಲ್ಲಿ ಹಿಜಬ್ಧರಿಸದೆ ಕ್ಲಿಕ್ಕಿಸಿಕೊಂಡ ತನ್ನ ಫೋಟೋವನ್ನು ಟ್ವಿಟರ್ನಲ್ಲಿ ಹಾಕಿಕೊಂಡ 20ರ ಹರೆಯದ ಮಹಿಳೆಯನ್ನು ಸೌದಿ ರಾಜಧಾನಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ವಕ್ತಾರ ಫವಾಜ್ಅಲ್ಮೈಮಾನ್ಅವರು ಬಂಧಿತ ಮಹಿಳೆಯ ಹೆಸರು, ಗುರುತನ್ನು ಬಹಿರಂಗಪಡಿಸಿಲ್ಲ. ಆದರೂ ಅನೇಕ ವೆಬ್ಸೈಟ್ಗಳು ಮಹಿಳೆಯನ್ನು ಮಲಾಕ್ಅಲ್ಶೆಹರೀ ಎಂದು ಗುರುತಿಸಿವೆ.
ಕಳೆದ ತಿಂಗಳಲ್ಲಿ ರಿಯಾದ್ಮುಖ್ಯ ಬೀದಿಯಲ್ಲಿ ಹಿಜಬ್ಧರಿಸದೆ ತೆಗೆದ ತನ್ನ ಫೋಟೋವನ್ನು ಸಾಮಾಜಿಕ ಜಾಲ ತಾಣ ಟ್ವಿಟರ್ನಲ್ಲಿ ಅಪ್ಲೋಡ್ಮಾಡಿದ್ದ ಮಲಾಕ್ಅಲ್ಶೆಹರಿ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಶೆಹರೀ ಯನ್ನು ಬಂಧಿಸಿರುವ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿರುವ ವಕ್ತಾರ ಮೈಮಾನ್ಅವರು, “ಸಾರ್ವತ್ರಿಕ ನೈತಿಕತೆಯ ಉಲ್ಲಂಘನೆಯನ್ನು ಹದ್ದಿನ ಕಣ್ಣಿನಿಂದ ಅವಲೋಕಿಸುವ ಪೊಲೀಸರ ಕ್ರಮವು ಈ ಅತಿ-ಸಾಂಪ್ರದಾಯಿಕ ರಾಜ ಸಂಸ್ಥಾನದ ಕಾನೂನಿಗೆ ಅನುಗುಣವಾಗಿಯೇ ಇದೆ’ ಎಂದು ಹೇಳಿದ್ದಾರೆ.
ರಿಯಾದ್ನ ಜನಪ್ರಿಯ ಕೆಫೆಯೊಂದರ ಎದುರುಗಡೆ ನಿಂತುಕೊಂಡು, ಹಿಜಬ್ಧರಿಸದೇ ತೆಗೆದುಕೊಂಡ ಫೋಟೋವನ್ನು ಮಹಿಳೆ ಸಾಮಾಜಿಕ ಜಾಲ ತಾಣಕ್ಕೆ ಹಾಕಿ ಟ್ವೀಟ್ಮಾಡಿರುವುದು ಇಲ್ಲಿನ ಕಾನೂನು ಕಟ್ಟಳೆಗೆ ವಿರುದ್ಧವೆಂದು ಮೈಮಾನ್ಹೇಳಿದರು.
20ರ ಹರೆಯದ ತಪ್ಪುಗಾರ ಮಹಿಳೆಯನ್ನು ಜೈಲಿಗೆ ಕಳುಹಿಸಲಾಗಿದೆ. ಸಂಬಂಧಿಕನಲ್ಲದ ಪುರುಷನೊಂದಿಗೆ ನಿಷೇಧಿತ ಸಂಬಂಧ ಹೊಂದಿರುವ ಬಗ್ಗೆ ಬಂಧಿತ ಮಹಿಳೆಯು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ ಎಂದು ಮೈಮಾನ್ಹೇಳಿದರು.
ಸೌದಿಯಲ್ಲಿ ವಾಹನ ಚಲಾವಣೆಯೂ ಸೇರಿದಂತೆ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳಿರುವುದು ಗಮನಾರ್ಹವಾಗಿದೆ.
Comments are closed.