ಗಲ್ಫ್

ಮುಹಮ್ಮದ್ ಪೈಗಂಬರರ ಜೀವನದ ಪ್ರತಿಯೊಂದು ಕ್ಷಣಗಳೂ ವಿಶ್ವಕ್ಕೇ ಮಾದರಿ: ಕೆ.ಐ.ಸಿ ಮಿಲಾದ್ ಕಾರ್ಯಕ್ರಮದಲ್ಲಿ ಖಲೀಲ್ ರಹಮಾನ್ ಕಾಷಿಫಿ

Pinterest LinkedIn Tumblr

kic-meelaad-program-15241255_1198278693576233_1496028651619937993_n-022

ದುಬೈ: ಪ್ರವಾದಿಯವರ ಜೀವನದ ಪ್ರತಿಯೊಂದು ಘಟನೆಗಳು ಇತಿಹಾಸದ ಪುಟ ಗಳಲ್ಲಿ ಧಾಖಲಿಸಲ್ಪಟ್ಟಿದೆ. ಅತ್ಯಂತ ನಿಕೃಷ್ಟ ವಾಗಿದ್ದ ಸಮುದಾಯವೊಂದನ್ನು ಆಧರ್ಮ ದಿಂದ ಧರ್ಮದೆಡೆಗೆ, ಅಶಾಂತಿಯಿಂದ ಶಾಂತಿಯೆಡೆಗೆ , ಮೌಢ್ಯದಿಂದ ನೈಜತೆಯೆಡೆಗೆ ಸಮುದ್ಧೀಕರಿಸಿ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಟ ಸಮಾಜವೆಂದು ಕುರ್-ಆನ್ ಘೋಷಿಸುವ ತನಕ ಸಂಸ್ಕರಿಸಿದ ಕೀರ್ತಿ ಪ್ರವಾದಿಯವರಿಗೆ ಸಲ್ಲುತ್ತದೆ. ಇಷ್ಟೊಂದು ವಿವರ ಲಭ್ಯವಿರುವ ಮಹಾನ್ ಪುರುಷ ಈ ವರೆಗೆ ಜಗತ್ತಿನಲ್ಲೇ ಅವತರಿಸಲ್ಪಟ್ಟಿಲ್ಲ. ಮಹಿಳಾ ಸಮಾಜವನ್ನು ಅತ್ಯಂತ ಕೀಳು ಮಟ್ಟದಿಂದ ಕಾಣುತ್ತಿದ್ದ ಕಾಲದಲ್ಲಿ ಹೆಣ್ಣಿಗೆ ಉನ್ನತ ಸ್ಥಾನವನ್ನು ನೀಡಿದ ಪರಿಶುದ್ಧ ಇಸ್ಲಾಮ್ ಧರ್ಮದ ಕೊನೆಯ ಪ್ರವಾದಿ ವರ್ಯರಾಗಿರುತ್ತಾರೆ ಮುತ್ತು ರಸೂಲ್ (ಸ ಅ ) . ಅವರ ಚರ್ಯೆಯಂತೆ ಜೀವಿಸಿ ಪರಲೋಕ ಪ್ರಾಪ್ತರಾಗೋಣ ಎಂದು ದೇರಾ ಬನಿಯಾಸ್ ರಸ್ತೆಯಲ್ಲಿರುವ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ ಅಧೀನದಲ್ಲಿ ಕರ್ನಾಟಕ ಕಲ್ಚರಲ್ ಸೆಂಟರ್ ಹಮ್ಮಿಕೊಂಡ ಬೃಹತ್ ಮಿಲಾದುನ್ನಬಿ ಮತ್ತು 45ನೇ ಯು.ಎ.ಇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಯು.ಎ.ಇ ಸಮಿತಿಯ ಧಾರ್ಮಿಕ ಸಲಹೆಗಾರರಾದ ಖ್ಯಾತ ವಾಗ್ಮಿ ಉಸ್ತಾದ್ ಖಲೀಲ್ ರಹ್ಮಾನ್ ಕಾಷಿಫಿಯವರು ಪುಣ್ಯ ರಸೂಲ್ (ಸ ಅ ) ರವರ ಜೀವನ ಚರಿತ್ರೆಯನ್ನು ಎಳೆ ಎಳೆ ಯಾಗಿ ಬಿಡಿಸಿ ಹೇಳಿದರು .

kic-meelaad-program-15202555_1196031627134273_4141543612378088972_n-017

kic-meelaad-program-15202678_1198279480242821_1210752692231962101_n-018

kic-meelaad-program-15220113_1196031697134266_7530832166822032408_n-019

kic-meelaad-program-15220241_1198279476909488_2897466955650870660_n-020

kic-meelaad-program-15232272_1198279736909462_1042265907036543464_n-021

kic-meelaad-program-15241815_1198278626909573_954416600480307351_n-023

kic-meelaad-program-15267566_1198279293576173_7310774623099335380_n-024

ಇದೆ ಸಂಧರ್ಭದಲ್ಲಿ ಯು ಎ ಇ ರಾಷ್ಟ್ರೀಯ ದಿನಾಚರಣೆಯ ಕುರಿತು ಈ ರಾಷ್ಟ್ರವು ಅನಿವಾಸಗಳಾದ ನಮ್ಮಂತಹ ಬಡಪಾಯಿಗಳಿಗೆ ಅನ್ನದಾತ ರಾಷ್ಟ್ರವಾಗಿದ್ದು , ಉದ್ಯೋಗ ಬಯಸಿ ಬಂದವರಿಗೆ ಮುಗುಳುನಗೆಯೊಂದಿಗೆ ಆಸರೆ ನೀಡಿದ ರಾಷ್ಟ್ರ ಇದಾಗಿದ್ದು ಈ ರಾಷ್ಟ್ರವನ್ನು ಪ್ರೀತಿಸಿ ಗೌರವಿಸಬೇಕಾಗಿರುವುದು ನಮ್ಮೆಲ್ಲರ ಮೇಲಿನ ಆದ್ಯ ಕರ್ತವ್ಯವಾಗಿದ್ದು ಸರ್ವರಿಗೂ ಯುಎ ಇ ರಾಷ್ಟ್ರೀಯ ದಿನಾಚರಣೆಯ ಶುಭ ಹಾರೈಸಿದರು .

kic-meelaad-program-15267650_1198279496909486_2338994935740231347_n-025

kic-meelaad-program-15267775_1198278906909545_7930964927953303104_n-026

kic-meelaad-program-15284022_1198278483576254_7771530215690212850_n-027

kic-meelaad-program-15319119_1198279216909514_320225780393030582_n-028

kic-meelaad-program-15326326_1198279140242855_212254943688211281_n-029

kic-meelaad-program-15326592_1198278370242932_1248395942672787787_n-030

kic-meelaad-program-15327385_1198279110242858_2185676821089117846_n-031

kic-meelaad-program-15337401_1198278726909563_3890630419361712297_n-032

kic-meelaad-program-15355650_1198279780242791_3659013819495333873_n-033

kic-meelaad-program-15355764_1198279823576120_5959477770767880229_n-034

kic-meelaad-program-img-20161207-wa0054-001

kic-meelaad-program-img-20161207-wa0060-002

ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಹಿಯಿದ್ದೀನ್ ಕುಟ್ಟಿ ದಿಬ್ಬರವರು ಸಭಾಧ್ಯಕ್ಷತೆ ವಹಿಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೋಲ್ಪೆ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಿದರು . ಹುದವಿ ಉಸ್ತಾದ್ ರವರು ಕಾರ್ಯಕ್ರಮವನ್ನು ಉದ್ಗಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿ ನಬಿ (ಸ ಅ ) ಜೀವನ ಚರ್ಯೆಯನ್ನು ವಿವವರಿಸಿದರು . ನಂತರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಕೌಡಿಚ್ಚಾರ್ ರವರು ಸ್ವಾಗತ ಭಾಷಣದಲ್ಲಿ ಮಾತನಾಡುತ್ತಾ ಕೆ ಐ ಸಿ ಎಂಬ ಈ ಸ್ಥಾಪನೆಯು ಕಳೆದ ಹದಿನೇಳು ವರ್ಷಗಳಿಂದ ಯು ಎ ಇ ಯಲ್ಲಿ ಕಾರ್ಯಾಚರಿಸುತ್ತಿದ್ದು ನಿಸ್ವಾರ್ಥತೆಯಿಂದ ಕೂಡಿದ ತಮ್ಮಂತಹ ಹಿತೈಷಿ ವರ್ಗದ ಸಹಕಾರದೊಂದಿಗೆ ತಾಯಿನಾಡಿನ ಕುಂಬ್ರ ಪ್ರದೇಶದಲ್ಲಿ ಸಮನ್ವಯ ವಿದ್ಯಾ ಕೇಂದ್ರವನ್ನು ಮುನ್ನಡೆಸುತ್ತಿದ್ದು ದೀನೀ ಪ್ರೇಮಿಗಳಾದ ತಾವೆಲ್ಲರೂ ಸಂಸ್ಥೆಯ ಪ್ರಗತಿಯಲ್ಲಿ ಕೈಜೋಡಿಸಿಕೊಂಡು ಯಶಸ್ಸಿನ ಹಾದಿಯೆಯಲ್ಲಿ ಮುನ್ನುಗ್ಗುವಂತೆ ಕೇಳಿಕೊಂಡು ಅಥಿತಿ ಗೌರವಾನ್ವಿತರನ್ನು ಸ್ವಾಗತಿಸಿದರು.

ಖಾಸಗೀ ಕಾರ್ಯಕ್ರಮಗಳಿಗಾಗಿ ಯು ಎ ಇ ಗೆ ಆಗಮಿಸಿ ದ ಇನ್ನೊರ್ವ ಮುಖ್ಯ ಅತಿಥಿ ಗಡಿನಾಡು ಮಾಸಪತ್ರಿಕೆಯ ಸಂಪಾದಕ ಜನಾಬ್ ಅಬೂಬಕ್ಕರ್ ಆರ್ಲಪದವು ರವರು ಮಾತನಾಡಿ ಅನಾಚಾರ ಅಧರ್ಮದ ಕಡೆಗೆ ಆಕರ್ಷಿತರಾಗಿ ಸಮುದಾಯದಿಂದ ಅವಗಣಿಸಲ್ಪಟ್ಟು ಶಿಕ್ಷಣ ದಿಂದ ವಂಚಿತರಾಗುತ್ತಿದ್ದ ಯುವ ಸಮುದಾಯವನ್ನು ಉಚಿತ ಶಿಕ್ಷಣವನ್ನು ನೀಡಿ ಅವರ ಬಾಳಲ್ಲಿ ಬೆಳಕನ್ನು ಚೆಲ್ಲಿದ ಕೆ ಐ ಸಿ ಕಾರ್ಯಕರ್ತರ ಪರಿಶ್ರಮವೂ ಪ್ರಶಂಸನೀಯ ಎಂದು ಕೆ ಐ ಸಿ ಅಕಾಡೆಮಿಗೆ ಭೇಟಿ ನೀಡಿದ ಅನುಭವವನ್ನು ಸ್ಮರಿಸಿಕೊಂಡರು .

kic-meelaad-program-img-20161207-wa0064-003

kic-meelaad-program-img-20161207-wa0066-004

kic-meelaad-program-img-20161207-wa0067-005

kic-meelaad-program-img-20161207-wa0068-006

kic-meelaad-program-img-20161207-wa0070-007

kic-meelaad-program-img-20161207-wa0071-008

kic-meelaad-program-img-20161207-wa0072-009

kic-meelaad-program-img-20161207-wa0073-010

kic-meelaad-program-img-20161207-wa0074-011

kic-meelaad-program-img-20161207-wa0075-012

kic-meelaad-program-img-20161207-wa0076-013

kic-meelaad-program-img-20161207-wa0077-014

kic-meelaad-program-img-20161207-wa0079-015

kic-meelaad-program-img-20161207-wa0080-016

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಡಾ. ಹಾರೀಸ್ , ಜನಾಬ್ ಜುಮಾ ಹಸನ್ , ಜನಾಬ್ ಸೈಫ್ ಅಹಮ್ಮದ್ ಖಾನ್ ಡೆಲ್ಲಿ , ಜನಾಬ್ ಮುಹಮ್ಮದ್ ಅತ್ತರ್ , ಜನಾಬ್ ಯೂಸುಫ್ ಹಾಜಿ ಬೆರಿಕೆ , ಜನಾಬ್ ಸುಲೈಮಾನ್ ಬೈತಡ್ಕ ಅಲ್ ಐನ್ , ಷರೀಫ್ ಕಾವು (ಅಧ್ಯಕ್ಷರು ನೂರುಲ್ ಹುದಾ ) ಅಬ್ದುಲ್ ಖಾದರ್ ಬೈತಡ್ಕ ( ಅಧ್ಯಕ್ಷರು ಶಂಸುಲ್ ಉಲಾಮ ಅಕಾಡೆಮಿ ತೋಡಾರ್ ) , ಶಂಸುದ್ದೀನ್ ಹನೀಫಿ ಮರ್ಧಾಳ , ಅಬ್ದುಲ್ ಸಲಾಂ ಬಪ್ಪಳಿಗೆ ( ಕೋಶಾಧಿಕಾರಿ ಕೆ ಐ ಸಿ ಕೇಂದ್ರ ಸಮಿತಿ ) ಜನಾಬ್ ಅಶ್ರಫ್ ಖಾನ್ ಮಾಂತೂರ್ ( ಅಧ್ಯಕ್ಷರು ಕೆ ಐ ಸಿ ದುಬೈ ಸಮಿತಿ ) ರಫೀಕ್ ಆತೂರ್ ( ಗೌರವಾಧ್ಯಕ್ಷರು ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ) ರಝಾಕ್ ಮಣಿಲ ( ಅಧ್ಯಕ್ಷರು ಕೆ ಐ ಸಿ ಶಾರ್ಜ್ ಸಮಿತಿ ) ನವಾಜ್ ಬಿ ಸಿ ರೋಡ್ ( ಅಧ್ಯಕ್ಷರು ಕೆ ಐ ಸಿ ಅಲ್ ಕೌಸರ್ ಯೂತ್ ವಿಂಗ್ ) , ಮುಸ್ತಫಾ ಗೂನಡ್ಕ ( ಪ್ರಧಾನ ಕಾರ್ಯದರ್ಶಿ ಕೆ ಐ ಸಿ ದುಬೈ ) ಅಶ್ರಫ್ ಅರ್ತಿಕೆರೆ ( ಕೋಶಾಧಿಕಾರಿ ಕೆ ಐ ಸಿ ದುಬೈ ) ಮುಂತಾದವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .

ಸಭಾ ಕಾರ್ಯಕ್ರಮದ ಆರಂಭದಲ್ಲಿ ಪುಟಾಣಿ ಮಕ್ಕಳ ಕಿರಾಅತ್ ಸ್ಪರ್ಧೆ, ಯುವಕರ ನೆಬಿ ಮದ್ಹ್ ಭಾಷಣ, ಗಾಯನ ಸ್ಪರ್ಧೆ ಮತ್ತು ಆಕರ್ಷಣೀಯ ದಫ್ಫ್ ಪ್ರದರ್ಶನಗಳ ಕಲಾ ಸಾಹಿತ್ಯ ಸ್ಪರ್ಧೆಗಳು ವಿಶೇಷ ಆಕರ್ಷಣೀಯವಾಗಿತ್ತು.

ಕಾರ್ಯಕ್ರಮದಲ್ಲಿ ಕ.ಐ.ಸಿ ಹೊರ್ ಅಲ್ ಅಂಝ್ ಶಾಖೆ ಹೊರತಂದ ಮಿಲಾದ್ ವಿಶೇಷ ಪುರವಣಿ ಹೊಂಗಿರಣವನ್ನು ಹೋರ್ ಅಲ್ ಅಂಝ್ ಶಾಖೆ ಅಧ್ಯಕ್ಷರು ಹಾಗೂ ಪಧಾಧಿಕಾಗಳು ಗಣ್ಯ ಅತಿಥಿಗಳ ಕೈಯಲ್ಲಿ ಬಿಡುಗಡೆ ಮಾಡಲಾಯಿತು. ಮಿಲಾದ್ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಮತ್ತು ಕೆ.ಐ.ಸಿ ಅಲ್ ಕೌಸರ್ ಯೂತ್ ವಿಂಗ್ ವತಿಯಿಂದ ನಡೆದ ಸ್ಪೋರ್ಟ್ಸ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೆ.ಐ.ಸಿ ಕೇಂದ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಕಾರ್ಯಕ್ರಮದ ಸ್ವಾಗತ ಸಮಿತಿ ಕಾರ್ಯದರ್ಶಿ ಆಸೀಫ್ ಮರೀಲ್ ರವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮಹಮ್ಮದ್ ನೀರ್ಕಜೆಯವರು ಧನ್ಯವಾದ ಸಲ್ಲಿಸಿದರು. ಸ್ವಯಂ ಸೇವಕರಾಗಿ ಕೆ.ಐ.ಸಿ ಅಲ್ ಕೌಸರ್ ಯೂತ್ ವಿಂಗ್ ಸದಸ್ಯರು ಹಾಗೂ ವಿವಿಧ ಸಮಿತಿ ಪಧಾಧಿಕಾರಿಗಳು ಸಹಕರಿಸಿದ್ದರು

Comments are closed.