ದುಬೈ : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಹಾಗೂ ಕರ್ನಾಟಕ ಕಲ್ಚರಲ್ ಸೆಂಟರ್ ಅಧೀನದಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಬೃಹತ್ ಮೀಲಾದ್ ಸಮಾವೇಶ ಕಾರ್ಯಕ್ರಮ ಹಾಗೂ ಯು ಎ ಇ ರಾಷ್ಟ್ರೀಯ ದಿನಾಚರಣೆಯು ನಾಳೆ 2 ಡಿಸೆಂಬರ್ 2016 ರಂದು ಬನಿಯಾಸ್ ರಸ್ತೆಯಲ್ಲಿರುವ ದೇರಾ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಹಲವಾರು ಸಾಮಾಜಿಕ ದಾರ್ಮಿಕ ನೇತಾರರು , ಅನಿವಾಸಿ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು ಅರಬ್ ಸ್ವದೇಶಿಗಳು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.00 ಘಂಟೆಯಿಂದ ಅನಿವಾಸಿ ಕನ್ನಡಿಗರಿಗಾಗಿ ಹಿರಿಯ ಕಿರಿಯ ವಿಭಾಗಳಲ್ಲಿ ಇಸ್ಲಾಮಿಕ್ ಭಾಷಣ , ನಬಿ ಮದಹ್ ಗಾನ ಮೊದಲಾದ ಸ್ಪರ್ಧಾ ಕಾರ್ಯಕ್ರಮಗಳು ಆಯೋಜಿಸಿದ್ದು ಅನಿವಾಸಿ ಕನ್ನಡಿಗರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ಮೀಲಾದ್ ಸ್ವಾಗತ ಸಮಿತಿ ಪಧಾಧಿಕಾರಿಗಳು ಪ್ರಟಕಣೆಯಲ್ಲಿ ತಿಳಿಸಿರತ್ತಾರೆ . ಮಗ್ರಿಬ್ ನಮಾಜ್ಹಿನ ಬಳಿಕ ಸಂಜೆ 6.00 ಗಂಟೆಯಿಂದ ಮೌಲೂದ್ ಪಾರಾಯಣ ನಡೆಯಲಿದ್ದು ತದನಂತರ ಅತ್ಯಾಕರ್ಷಣೀಯ ದಫ್ಫ್ ಪ್ರಧರ್ಶಣೆಯು ನಡೆಯಲಿದೆ. ನಂತರ ರಾತ್ರಿ 7. ೦೦ ರಿಂದ ಸಭಾ ಕಾರ್ಯಕ್ರಮವು ನಡೆಯಲಿದ್ದು ವಿವಿಧ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗೈದ ನೇತಾರರು , ಅನಿವಾಸಿ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರು , ಅಕಾಡೆಮಿ ಪಧಾಧಿಕಾರಿಗಳು ಭಾಗವಹಿಸಲಿದ್ದು ಕೆ ಐ ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೆ ಐ ಸಿ ಗೌರವಧ್ಯಾಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೋಲ್ಪೆಯವರು ಪ್ರಾರ್ಥನೆಗೆ ನೇತೃತ್ವವನ್ನು ವಹಿಸಲಿದ್ದು ಅನಿವಾಸಿ ಉದ್ಯಮಿ ಕೆ ಐ ಸಿ ಪೋಷಕರಲ್ಲಿ ಓರ್ವರೂ ಆದ ಅಬ್ದುಲ್ ಖಾದರ್ ಹಾಜಿ ಅಂಚಿನಡ್ಕ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಸ್ತಾದ್ ಖಲೀಲ್ ರಹ್ಮಾನ್ ಖಾಶಿಫಿಯವರು ಪ್ರವಾದಿ ಸ್ನೇಹ ವಿಷಯದಲ್ಲಿ ದಿಕ್ಸೂಚಿ ಪ್ರಭಾಷಣೆ ಗೈಯಲಿದ್ದು ಉಸ್ತಾದ್ ಶೌಕತ್ತಲಿ ಹುದವಿ ಯವರು ಯು ಎ ಇ ರಾಷ್ಟ್ರೀಯ ದಿನಾಚರಣೆ ವಿಷಯದಲ್ಲಿ ವಿಷಯ ಮಂಡನೆ ಗೈಯಲಿದ್ದಾರೆ, ಎಂದು ಕೆ ಐ ಸಿ ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಕೌಡಿಚ್ಚಾರ್ ರವರು ತಿಳಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಪ್ರೇತ್ಯೇಕ ಆಸನದ ವ್ಯವಸ್ಥೆ ಗೊಳಿಸಲಾಗಿದ್ದು, ಅನಿವಾಸಿ ದೀನೀ ಪ್ರೇಮಿಗಳು ಕೆ ಐ ಸಿ ಹಿತೈಷಿಗಳೂ ಆದ ತಾವೆಲ್ಲರೂ ಅತೀ ಹೆಚ್ಚಿನ ಸಂಖ್ಯೆಯಯಲ್ಲಿ ಈ ಕಾರ್ಯಕಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವಂತೆ ಕೆ ಐ ಸಿ ಕೇಂದ್ರ ಸಮಿತಿಯು ವಿನಂತಿಸಿ ಕೊಂಡಿರುತ್ತಾರೆ.