ಕೊಲ್ಲಿನಾಡಿನ ತುಳುಭಾಷಾ ಅಭಿಮಾನಿಗಳ ಬಹು ನಿರಿಕ್ಷೆಯ “ಬಲೆ ತೆಲಿಪಾಲೆ” ಅದ್ಧೂರಿಯ ಹಾಸ್ಯ ಹಬ್ಬಕ್ಕೆ ದುಬಾಯಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಸಕಲ ರೀತಿಯಲ್ಲಿ ಸಜ್ಜಾಗಿದೆ.
2014 ಡಿಸೆಂಬರ್ 12 ಶುಕ್ರವಾರ ಮಧ್ಯಾಹ್ನ 2.30. ಗಂಟೆಗೆ ದುಬಾಯಿಯಲ್ಲಿ ನಡೆಯಲಿರುವ ತುಂಬೆ ಸಮೂಹ ಸಂಸ್ಥೆ, ತುಂಬೆ ಹಾಸ್ಪಿಟಲ್ ಅಜ್ಮಾನ್ ಅರ್ಪಿಸುವ ಬಲೆ ತೆಲಿಪಾಲೆ ಹಾಸ್ಯ ಹಬ್ಬ ನಮ್ಮ ಟಿ.ವಿ. ಮತ್ತು ಮಂಗಳೂರು ಬಡಗ ಎಡ ಪದವು ಮಿಜಾರು ಭೂತನಾಥೇಶ್ವರ ದೇವಾಸ್ಥಾನದ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸೀಸನ್ 1 ಸೀಸನ್ 2 ಪ್ರಶಸ್ತಿ ವಿಜೇತ ತಂಡ ಪ್ರಸಂಸ – ಕಾಪು, ಪ್ರಖ್ಯಾತ ಕನ್ನಡ ಚಲನ ಚಿತ್ರ ಸಂಗೀತ ನಿರ್ದೇಶಕರಾದ ಗುರು ಕಿರಣ್, ಡ್ಯಾನ್ ಇಂಡಿಯಾ ಡ್ಯಾನ್ ಪ್ರಖ್ಯಾತಿ ಕಿಶೋರ್ ಅಮಾನ್, ನಮ್ಮಟಿ. ವಿ. ನಿರೂಪಕ ನವೀನ್ ಶೆಟ್ಟಿ ಭಾಗವಹಿಸಲಿದ್ದಾರೆ.
ಬಹು ದಿನ ಮುಂಚಿತವಾಗಿಯೆ ಎಲ್ಲಾ ವಿಭಾಗದ ಟಿಕೆಟ್ ಗಳು ಮುಂಗಡವಾಗಿ ಮಾರಾಟವಾಗಿದ್ದು ಆಯೋಜಕರ ಉತ್ಸಾಹ ಹಿಮ್ಮಡಿಯಾಗಿದೆ. ನಮ್ಮ ಟಿ. ವಿ. ದುಬಾಯಿ ಪ್ರತಿನಿಧಿ ವಿನಯ ಕುಮಾರ್ ನಾಯಕ್ ಕೊಲ್ಲಿನಾಡಿನ ಎಲ್ಲಾ ತುಳು ಭಾಷಾ ಅಭಿಮಾನಿಗಳ ಬೆಂಬಲ, ಪೊತ್ಸಾಹಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾ ನೀಡುತ್ತಾ ಎಲ್ಲಾ ತುಳುವ ಬಂದು ಬಾಂಧವರಿಗೆ ಮಾಧ್ಯಮದ ಮೂಲಕ ಹೃತ್ಪೂರ್ವಕವಾದ ಸ್ವಾಗತವನ್ನು ನೀಡಿದ್ದಾರೆ.