ಕನ್ನಡ ವಾರ್ತೆಗಳು

ಪ್ರದರ್ಶನ ಕಲೆಗಳ ಬೇರು ರಂಗಭೂಮಿ : ಭಾಸ್ಕರ ರೈ ಕುಕ್ಕುವಳ್ಳಿ

Pinterest LinkedIn Tumblr

ranga_bhumi_pic

ಮಂಗಳೂರು, ಮೇ.13 : ‘ರಂಗಭೂಮಿ ನಮ್ಮ ಸಾಂಸ್ಕೃತಿಕ ಮನಸ್ಸುಗಳನ್ನು ಅರಳಿಸುವ ಕ್ಷೇತ್ರ. ಅದು ಎಲ್ಲಾ ಪ್ರದರ್ಶನಕಲೆಗಳ ಬೇರು. ಅದರಿಂದಲೇ ಕಲೆಯೆಂಬ ವಟವೃಕ್ಷದ ಕೊಂಬೆರೆಂಬೆಗಳು ನೀರುಂಡು ಬೆಳೆಯುತ್ತವೆ’ ಎಂದು ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಹಾಗೂ ಜಾನಪದ ವಿದ್ವಾಂಸ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದರು.

ಪ್ರಕೃತಿ ಕಲಾವಿದರು ಮಂಗಳೂರು ಇವರ ಆಶ್ರಯದಲ್ಲಿ ರಮೇಶ್-ಪ್ರಕಾಶ್ ಸಾದರ ಪಡಿಸಿದ ಎಂಟನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಡಾನ್ ಬಾಸ್ಕೋ ಹಾಲ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಿ ಶ್ರೀಕರ ಪ್ರಭು ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ತುಳುರಂಗಭೂಮಿಯ ಪ್ರಬುದ್ಧ ಕಲಾವಿದರಾದ ರಾಜೇಶ್ ಅಳಪೆ ಮತ್ತು ರೂಪಶ್ರೀ ವರ್ಕಾಡಿ ಅವರನ್ನು ಲ| ಕಿಶೋರ್ ಡಿ. ಶೆಟ್ಟಿ ಬಿರುದು ನೀಡಿ ಸನ್ಮಾನಿಸಿದರು. ಮಧುಕರಮಲ್ಲಿ, ಸುರೇಶ್ ಭಂಡಾರಿ, ಮಹೇಂದ್ರ ಕುಮಾರ್, ಮೋಹನ್‌ದಾಸ್ ರೈ, ಜಿ.ಕೆ. ಶ್ರೀನಿವಾಸ ಸಾಲ್ಯಾನ್, ರತ್ನಾಕರ ಸುವರ್ಣ, ರವಿಚಂದ್ರ ಶೆಟ್ಟಿ, ಮಹಮ್ಮದ್ ಕುಕ್ಕುವಳ್ಳಿ, ಜಯಶೀಲ ಮುಖ್ಯ ಅತಿಥಿಗಳಾಗಿದ್ದರು.

ಪ್ರಕೃತಿ ಕಲಾವಿದರು ತಂಡದ ಸಂಚಾಲಕರಾದ ರಂಗನಟ ರಮೇಶ್ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಶಿವಪ್ರಕಾಶ್ ಪೂಂಜ ಹರೇಕಳ ವಂದಿಸಿದರು. ಪ್ರಮೀಳಾ ದೀಪಕ್ ಪೆರ್ಮುದೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ವಿದ್ಯಾತ್ರಿ ಕಲಾವಿದೆರ್ ಕೈಕಂಬ ಇವರಿಂದ ನಿಕ್ಕ್ ಗೊತ್ತುಂಡಾ…?’ ತುಳು ಹಾಸ್ಯನಾಟಕ ಜರಗಿತು.

Write A Comment