ಕನ್ನಡ ವಾರ್ತೆಗಳು

ಬೆಂಕಿಗಾಹುತಿಯಾದ 7 ಕೆಎಸ್​ಆರ್​ಟಿಸಿ ಬಸ್​ಗಳ ಶವಯಾತ್ರೆ

Pinterest LinkedIn Tumblr

ny_bus_ksrtc

ಬೆಂಗಳೂರು,ಮೇ.10: ಪ್ರತಿಭಟನೆಯ ನೆಪದಲ್ಲಿ ಪ್ರತಿಭಟನಾಕಾರರು ಬಸ್ಸುಗಳಿಗೆ ಬೆಂಕಿ ಇಟ್ಟು ಸುಟ್ಟು ಹಾಕುತ್ತಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ಬಸ್ಸುಗಳನ್ನು ಸುಟ್ಟು ಹಾಕದಂತೆ ಜನರಲ್ಲಿ ಜಾಗೃತಿ ಮೂಡಿಸುವಸಲುವಾಗಿ ಕೆಎಸ್’ಆರ್’ಟಿಸಿ ‘ಇದು ನನ್ನ ಬಸ್ಸು’ ಅಭಿಯಾನವನ್ನು ಆಯೋಜಿಸುತ್ತಿದೆ.

ಪ್ರತಿತಿಭಟನಾಕಾರರಿಂದ ಬೆಂಕಿಗೆ ಆಹುತಿಯಾದಂತಹ ಕೆಎಸ್ಆರ್ಟಿಸಿ ಬಸ್ಗಳನ್ನು ಉಳಿಸಲು ಜನರಲ್ಲಿ ಜಾಗೃತಿ ಮೂಡಿಸಲು ಈ ಅಭಿಯಾನ ನಡೆಯುತ್ತಿದೆ. ಪೀಣ್ಯದಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದವರೆಗೂ ಜಾಥಾ ನಡೆಯಲಿದ್ದು, ಬೆಂಕಿಗೆ ಆಹುತಿಯಾದ ಬಸ್ಸುಗಳ ಅಣುಕು ಶವಯಾತ್ರೆ ಪ್ರದರ್ಶನ ನಡೆಸಲಾಗುತ್ತಿದೆ.

ಪಿಎಫ್ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಕೆಎಸ್ಆರ್ಟಿಸಿ ಬಸ್ಸುಗಳಿಗೆ ಬೆಂಕಿಹಚ್ಚಿದ್ದರು. ಈ ಸಂದರ್ಭದಲ್ಲಿ ಬೆಂಕಿಗಾಹುತಿಯಾದ 7 ಕೆಎಸ್ಆರ್ಟಿಸಿ ಬಸ್ಗಳ ಶವಯಾತ್ರೆ ನಡೆಯಲಿದ್ದು, ಅಲ್ಲದೇ ಬಸ್ಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು. ಪ್ರದರ್ಶನದಲ್ಲಿ ರಾಜಕೀಯ ಮುಖಂಡರು ಸಂಘಟನೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಜಾಥಾದ ಪ್ರಮುಖ ಉದ್ದೇಶ ಸಾರ್ವಜನಿಕ ಆಸ್ತಿಯನ್ನು ಕಾಪಾಡಿಕೊಳ್ಳಬೇಕು ಎಂದು ಈ ಜಾಥಾದ ಉದ್ದೇಶವಾಗಿದೆ.

Write A Comment