ಕನ್ನಡ ವಾರ್ತೆಗಳು

ಕೊಲ್ಲೂರು ಮೂಕಾಂಬಿಕೆ ಚಿನ್ನಕ್ಕೆ ಕನ್ನ ಪ್ರಕರಣ: ದೇವಳದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರೆಸ್ಟ್

Pinterest LinkedIn Tumblr

ಕುಂದಾಪುರ: ಕೋಟ್ಯಾನುಕೋಟಿ ಜನರ ಆರಾಧ್ಯ ದೇವಿಯಾಗಿರುವ ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕೆ ಚಿನ್ನಕ್ಕೆ ಕನ್ನ ಹಾಕಿದ ಖತರ್ನಾಕ್ ಐವರು ಕಿಡಿಗೇಡಿಗಳು ಕಂಬಿ ಎಣಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದ ವಿಚಾರ. ಶ್ರೀ ದೇವಿಯ ಆಲಯದಲ್ಲಿ ಜವಬ್ದಾರಿಯುತ ಸ್ಥಾನದಲಿದ್ದು ಸದ್ಯ ನಿವೃತ್ತಿಯಲ್ಲಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶನಿವಾರ ಬಂಧನವಾಗುವ ಮೂಲಕ ಚಿನ್ನಕ್ಕೆ ಕನ್ನಹಾಕಿ ಕಂಬಿ ಎಣಿಸಿದ ಐವರ ಆ ಸಾಲಿಗೆ ಸೇರಿದ್ದಾನೆ.

Kolluru_Mokkambike Temple_Theft Case (2)

(ಬಂಧನವಾದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ)

ಜವಬ್ದಾರಿಯುತ ಸ್ಥಾನದಲ್ಲಿದ್ದು ತನ್ನ ಕರ್ತವ್ಯದಲ್ಲಿ ಜವಬ್ದಾರಿ ಪ್ರದರ್ಶಿಸದೇ ಬೇಜವಬ್ದಾರಿ ವಹಿಸಿ ಬಂಧನವಾದವನೇ ಎಲ್.ಎಸ್. ಮಾರುತಿ (ವರ್ಷ 60 ದಾಟಿದೆ). ಜುಲೈ2012 ರಿಂದ 2015 ಜನವರಿವರೆಗೆ ದೇವಳದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದ ಈತನ ವಿರುದ್ಧ ಸೆಕ್ಷನ್ 409 ವಿರುದ್ಧ ಪ್ರಕರಣ ದಾಖಲಾಗಿದೆ.

ಕುಂದಾಪುರದಲ್ಲಿ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಸುದ್ದಿಗೋಷ್ಟಿ ನಡೆಸಿ ಎಲ್.ಎಸ್. ಮಾರುತಿ ಬಂಧನದ ಬಗ್ಗೆ ತಿಳಿಸಿದರು.

Kolluru_Mokkambike Temple_Theft Case (1)

(ಉಡುಪಿ ಎಸ್ಪಿ ಕೆ. ಅಣ್ಣಾಮಲೈ)

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಲಾಕರಿನಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಯಾಮಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆರದು ತಿಂಗಳ ಹಿಂದೆ ಶಿವರಾಮ ಎನ್ನುವ ನೌಕರನೋರ್ವ ಬಂಧಿತನಾಗಿದ್ದ. ಆತನ ಬಂಧನದ ಬಳಿಕ ಇನ್ನಷ್ಟು ವಂಚಕರ ಹೆಸರು ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿಯಂತೆ ಉಡುಪಿ ಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಪೊಲೀಸರು ಕಳವು ಮಾಲಿನಲ್ಲಿ 2 ಕೆ.ಜಿ 243ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ 4 ಜನ ದೇವಳದ ಸಿಬ್ಬಂದಿಗಳನ್ನು ಅರೆಸ್ಟ್ ಮಾಡಿದ್ದು ಪ್ರಕರಣದಲ್ಲಿ ಪ್ರಮುಖ ಆರೋಪಿ ಶಿವರಾಮ ಮಡಿವಾಳ ಜತೆಯಲ್ಲಿ ದೇವಳದ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ ಹೆಗ್ಡೆ, ಪ್ರಸಾದ ಆಚಾರ್, ಗಣೇಶ್ ಪೂಜಾರಿ ಹಾಗೂ ನಾಗರಾಜ್ ಶೇರುಗಾರ್ ಎನ್ನುವವರನ್ನು ಬಂಧಿಸಲಾಗಿತ್ತು.

ಅದೇ ಸಮಯದಲ್ಲಿ ದೇವಸ್ಥಾನದ ಹಾಗೂ ಸಾರ್ವಜನಿಕ ಸೊತ್ತುಗಳ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕರ್ತವ್ಯ ಲೋಪ ಎಸಗಿರುವ ದೇಗುಲದ 10 ಮಂದಿ ನೌಕರರ ವಿರುದ್ದ ಸೂಕ್ತ ಕ್ರಮಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ, ದೇವಸ್ಥಾನದ ಪ್ರಮುಖ ಹುದ್ದೆಯಲ್ಲಿ ಇರುವವರ ಕರ್ತವ್ಯ ಲೋಪಗಳ ಕುರಿತು ವಿಚಾರಣೆ ಸತತ ವಿಚಾರಣೆಯನ್ನು ಎಸ್ಪಿ ಅಣ್ಣಾಮಲೈ ಅವರ ತಂಡ ನಡೆಸಿತ್ತು. ಅದರಂತೆಯೇ ಶನಿವಾರ ಸಂಜೆ ಎಲ್.ಎಸ್. ಮಾರುತಿ ಎಂಬ ಮುದಿಯನನ್ನು ಬಂಧಿಸಲಾಗಿದೆ. ಈತ ದೇವಸ್ಥನದಲ್ಲಿರುವಾಗ ಮಾತನಾಡಲು ಹೋದರೇ ಎಲ್ಲರಿಗೂ ಸಿಕ್ಕ ಉತ್ತರ ಉಡಾಫೆಯಾದದ್ದು.

ಏತಕ್ಕಾಗಿ ಮಾರುತಿ ಬಂಧನ?
ರಾಜ್ಯ ಹಾಗೂ ಹೊರರಾಜ್ಯದ ಭಕ್ತಾಧಿಗಳ ಆರಾಧ್ಯ ದೇವತೆ ಶ್ರೀ ಮೂಕಾಂಬಿಕೆಗೆ ಹರಕೆ ರೂಪವಾಗಿ ಭಕ್ತರು ಕಾಣಿಕೆ ಅರ್ಪಿಸುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದ ರೂಢಿ. ಮೂಕಾಂಬಿಕೆ ದೇವಸ್ಥಾನದಲ್ಲಿ ಕಾಣಿಕೆ ಅರ್ಪಿಸಲು 2 ವಿಧಾನಗಳಿದ್ದು ಕೆಲವರು ಹುಂಡಿಯಲ್ಲಿ ನೆರವಾಗಿ ತಮ್ಮ ಕಾಣಿಕೆ ಅರ್ಪಿಸಿದರೆ, ಕೆಲವರು ಸೇವಾ ಕೌಂಟರ್ ನಂಬ್ರ 1 ರಲ್ಲಿ ಆಭರಣಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಕೌಂಟರಿನಲ್ಲಿ ನೀಡುವ ಕಾಣಿಕೆಗೆ ಸ್ವೀಕೃತಿ ರಸೀದಿ ನೀಡುವ ಕ್ರಮವಿದೆ, ಆದರೇ ಇದ್ಯಾವುದರ ಬಗ್ಗೆಯೂ ನಿಗಾ ಇಡದೇ ಇರುವುದು ಒಂದೆಡೆಯಾದರೇ ಈತ ದೆಅವಳಕ್ಕೆ ಬಂದಿರುವ ಎಲ್ಲಾ ರಶೀತಿಗಳಿಗೆ ಸಹಿ ಹಾಕಿದ್ದಾನೆ, ಆದರೇ ಈತ ಹಾಕಿದ ಸಹಿಗಳಿಗೆ ಬೇಕಾಗುವಷ್ಟು ಚಿನ್ನಾಭರಣ ಸಿಕ್ಕಿಲ್ಲ. ಮುಖ್ಯಸ್ಥಾನದಲ್ಲಿರುವ ಈ ಮಾರುತಿ ಇದಕ್ಕೆ ಜವಬ್ದಾರಿಯಾಗಬೇಕು. 2012-15ರಲ್ಲಿ ದೇವಳದಲ್ಲಿ ಬಾರೀ ಹಗರಣವಾಗಿರುವ ಕಾರಣ ಈತನೇ ಇದಕ್ಕೆ ಪರೋಕ್ಷ ಕಾರಣ ಯಾಕೆಂದರೇ ಮಾಡಬೇಕಾದ ಕರ್ತವ್ಯವನ್ನು ಮಾಡಿಲ್ಲ.

ಇನ್ನು ಕೆಲವರನ್ನು ವಿಚಾರಣೆ ನಡೆಸುತ್ತಿದ್ದೇವೆ, ತನಿಖೆಯನ್ನು ನಿಧಾನಗತಿಯಲ್ಲಿ ಎಲ್ಲಾ ವಿಚಾರದಲ್ಲಿಯೂ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಮಾಡುತ್ತಿದ್ದೇವೆ. ಇನ್ನು ಧಾರ್ನಿಕ ದತ್ತಿ ಇಲಾಖೆ ಕಾನೂನಿನಡಿಯಲ್ಲಿ ಬರುವ ಎಲ್ಲಾ ವಿಚಾರಾಗಳನ್ನು ಅಧ್ಯಯನ ನಡೆಸುತ್ತಿದ್ದು ಈ ಅವಧಿಯಲ್ಲಿ ದೇವಸ್ಥಾನದಲ್ಲಿದ್ದ ಆಡಳಿತ ಮಂಡಳಿಯ ಬಗ್ಗೆಯೂ ತನಿಖೆ ನಡೆಸುತ್ತೇವೆ ಎಂದರು.

Write A Comment