ಕನ್ನಡ ವಾರ್ತೆಗಳು

ದ್ವಿತೀಯ ಪಿಯುಸಿಯ ಪ್ರಶ್ನೆ ಪತ್ರಿಕೆ ದ್ವಿತೀಯ ಬಾರಿಯೂ ಸೋರಿಕೆ : ಆಕ್ರೋಷಿತ ವಿದ್ಯಾರ್ಥಿಗಳಿಂದ ಬೀದಿಗಿಳಿದು ಪ್ರತಿಭಟನೆ

Pinterest LinkedIn Tumblr

Abvp_protest_pic_1ಮಂಗಳೂರು,ಮಾ.31: ದ್ವಿತೀಯ ಪಿಯುಸಿಯ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ 2 ನೇ ಬಾರಿಯೂ ಸೋರಿಕೆಯಾದ ಹಿನ್ನೆಲೆಯಲ್ಲಿ ಕಾರ್ ಸ್ಟ್ರೀಟ್ ಕಾಲೇಜು ಆವರಣದಲ್ಲಿರವ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಕರ ಕಚೇರಿ ಎದುರು ಇಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಎಬಿವಿಪಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಜೊತೆ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೇ ಸರ್ಕಾರ ಮತ್ತು ಬೋರ್ಡ್‌ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ಘೋಷಣೆ ಕೂಗಿದರು.

ಮಾ.21ರಂದು ನಡೆದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ರದ್ದುಗೊಳಿಸಿ, ಇಂದು ಮರು ಪರೀಕ್ಷೆ ನಡೆಸಲು ಆದೇಶ ನೀಡಲಾಗಿತ್ತು. ಆದರೆ ಇಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬಾರದು.ಮುಂದಿನ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಪಲ್ಲವಿ ಮಾಧ್ಯಮಗಳಿಗೆ ತಿಳಿಸಿದ್ದರು.

Abvp_protest_pic_2 Abvp_protest_pic_3 Abvp_protest_pic_4 Abvp_protest_pic_5 Abvp_protest_pic_6 Abvp_protest_pic_7 Abvp_protest_pic_8 Abvp_protest_pic_9 Abvp_protest_pic_10

ಕೆಮಸ್ಟ್ರಿ ಪೇಪರ್‌ ಲೀಕ್‌ ಆಗುತ್ತಿರುವುದು ಇದು ಎರಡನೇ ಸಲ. ಇದರಿಂದ ನಮಗೆ ತುಂಬಾ ತೊಂದರೆಯಾಗಿದ್ದು, ಮತ್ತೊಮ್ಮೆ ಸರ್ಕಾರ ಈ ಪರೀಕ್ಷೆಯನ್ನು ನಡೆಸಿದರೂ ನಾವು ಬರೆಯುವುದಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ನಮ್ಮ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ. ಇನ್ನೂ ಮೂರನೇ ಸಲವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದಿಲ್ಲ ಎಂದು ಯಾವ ಗ್ಯಾರಂಟಿ.ಅದುದ್ದರಿಂದ ನಾವು ಇನ್ನೊಮ್ಮೆ ನಾವು ಯಾವ ಪರೀಕ್ಷೆಯನ್ನೂ ಬರೆಯೋದಿಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆ ನಾವು ಮೊದಲು ಬರೆದ ಪರೀಕ್ಷೆಯನ್ನೇ ಗಣನೆಗೆ ತೆಗೆದುಕೊಂಡು ನಮ್ಮನ್ನು ಈ ಸಂಕಟದಿಂದ ಪಾರು ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Write A Comment