ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಮಾ.31: ನಗರದ ಶ್ರೀ ಗೋರ್ಕಣನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ (ಇಂಟರ್ ಕಾಲೇಜು) ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ (ನಿರ್ವಾಹಣಾ) ಉತ್ಸವ “ಸೃಷ್ಟಿ -2016 ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಅಸ್ಪಿನ್ವಾಲ್ ಎಂಡ್ ಕಂಪನಿಯ ಎ.ಜಿ.ಎಮ್ ಶ್ರೀ ಎಡ್ವರ್ಡ್ ಕೋಯ್ಲೋ ಅವರು ಉದ್ಘಾಟಿಸಿದರು. ಸೃಷ್ಠಿ ಎಂದರೆ ಸೃಜನ ಶೀಲತೆ. ವಿದ್ಯಾರ್ಥಿಗಳು ಸೃಜನ ಶೀಲತೆಯೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ಸಿಗುವ ಉತ್ತಮ ಅವಕಾಶಗಳನ್ನುಸದುಪಯೋಗಿಸಿಕೊಂಡು ಸಾಧನೆ ಮಾಡಬೇಕು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅವಕಾಶ ಶಿಕ್ಷಕರಿಗೆ ಮಾತ್ರ ಸಿಗುತ್ತದೆ. ಅಂತೆಯೇ ಈ ಶಿಕ್ಷಕರ ಮೂಲಕ ಉಜ್ವಲ ಭವಿಷ್ಯ ರೂಪಿಸುವ ಅವಕಾಶ ನಿಮಗೆ ಸಿಕ್ಕಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಶಿಕ್ಷಕರ ಮಾರ್ಗದರ್ಶನದಲ್ಲಿ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ಸಲ್ಲಿಸಬೇಕು ಎಂದು ಎಡ್ವರ್ಡ್ ಕೋಯ್ಲೋ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿ.ಎ. ಚಂದ್ರಕಾಂತ್ ಶೆಣೈ ಅವರು ಮಾತನಾಡಿ, ಹಿಂದಿನವರ ಪ್ರಯತ್ನದಿಂದ ಇಂದು ನಿಮಗೆ ಈ ಕಾಲೇಜಿನಲ್ಲಿ ಉತ್ತಮ ವಿದ್ಯಾಬ್ಯಾಸ ಸಿಗಲು ಕಾರಣವಾಗಿದೆ. ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಸತತ ಪರಿಶ್ರಮದಿಂದ ಸಾಧನೆ ಮಾಡಿ ನಿಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕು. ಜೊತೆಗೆ ನಿಮ್ಮಿಂದ ಸಮಾಜಕ್ಕೆ ಉತ್ತಮ ಕೆಲಸಗಳಾಗಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿ.ಎ.ನಂದಗೋಪಾಲ್ ಶೆಣೈ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಿಕ ಮಾತಗಳನ್ನಾಡಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರೇಣುಕ. ಕೆ.ಅವರು ಸ್ನಾತಕೋತ್ತರ (ನಿರ್ವಾಹಣಾ) ಉತ್ಸವ “ಸೃಷ್ಟಿ -2016ರ ಬಗ್ಗೆ ವಿವರ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಗಂಗಾಧರ್.ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿಧ್ಯಾರ್ಥಿ ಸಂಯೋಜಕರಾದ ಮೋಕ್ಷಿತ್ ಕುಮಾರ್, ಕವಿತಾ ಕೆ.ಎಲ್., ಮೊದಲಾವದರು ವೇದಿಕೆಯಲ್ಲ್ಲಿಉಪಸ್ಥಿತರಿದ್ದರು.
ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ರೀನು ಮಿತ್ತಲ್ ಸ್ವಾಗತಿಸಿದರು. ಸೌಮ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉತ್ಸವದ ಸಂಯೋಜಕಿ ಪ್ರೋ. ತನುಜಾ ವಂದಿಸಿದರು.
ನಗರದ ಶ್ರೀ ಗೋರ್ಕಣನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ (ಇಂಟರ್ ಕಾಲೇಜು) ರಾಷ್ಟ್ರೀಯ ಮಟ್ಟದ ಸ್ನಾತಕೋತ್ತರ (ನಿರ್ವಾಹಣಾ) ಉತ್ಸವ “ಸೃಷ್ಟಿ -2016 ರಲ್ಲಿ ಜಿಲ್ಲೆಯ 15ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಉಪ್ಪಿನಂಗಡಿ, ಬಂಟ್ವಾಳ, ದೇರಳಕಟ್ಟೆ, ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಮಾರೋಪ ; ಬಹುಮಾನ ವಿತರಣೆ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಕಾರ್ಯದರ್ಶಿ ಶ್ರೀ ವಸಂತ ಕಾರಂದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸ್ಫರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಗಂಗಾಧರ್.ಬಿ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ರೇಣುಕ. ಕೆ,, ಉತ್ಸವದ ಸಂಯೋಜಕಿ ಪ್ರೋ. ತನುಜಾ, ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ರೀನು ಮಿತ್ತಲ್, ವಿಧ್ಯಾರ್ಥಿ ಸಂಯೋಜಕರಾದ ಮೋಕ್ಷಿತ್ ಕುಮಾರ್, ಕವಿತಾ ಕೆ.ಎಲ್., ಮೊದಲಾವದರು ಉಪಸ್ಥಿತರಿದ್ದರು.