ವರದಿ ಹಾಗೂ ಚಿತ್ರ ಸತೀಶ್ ಕಾಪಿಕಾಡ್
ಮಂಗಳೂರು,ಫೆ.14: ಪ್ರಾಮಾಣಿಕತೆ, ಪಾರಾದರ್ಶಕತೆ ಹಾಗೂ ಪರಿಶ್ರಮ ಈ ಮೂರು ತತ್ವಗಳನ್ನು ಅಳವಡಿಸಿಕೊಂಡರೆ ಅ ಸಂಸ್ಥೆ ಉನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳ್ಳುವುದರಲ್ಲಿ ಯಾವೂದೇ ಸಂಶಯವಿಲ್ಲ. ಈ ಮೂರು ತತ್ವಗಳನ್ನು ಅಳವಡಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಇದೀಗ ಸಣ್ಣ ಸಮುದಾಯದ ಈ ಮಂಗಳ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಸಂಸ್ಥೆ ಕೂಡ ಇಷ್ಟೊಂದು ಮಟ್ಟದ ಏಳಿಗೆ ಕಾಣಲು ಸಾಧ್ಯವಾಯಿತು ಎಂದು ಸಂಸದ ಡಾ. ಎಂ.ವೀರಪ್ಪ ಮೊಯಿಲಿ ಹರ್ಷ ವ್ಯಕ್ತಪಡಿಸಿದರು.
ರಜತ ಮಹೋತ್ಸವದ ಸಂಭ್ರಮ ಆಚರಿಸುತ್ತಿರುವ ಮಂಗಳ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಸಂಸ್ಥೆ ಇದರ ಸ್ಮರಣಾರ್ಥ ಸೊಸೈಟಿಯ ಪ್ರಧಾನ ಕಚೇರಿ ಮತ್ತು ಕೊಡಿಯಾಲ್ ಬೈಲು – ಬಿಜೈ ಶಾಖೆಯ ಸ್ವಂತ ಕಚೇರಿಯನ್ನು ಬಿಜೈ ಕಾಪಿಕಾಡ್ ರಸ್ತೆಯ ಪ್ಲಾಮಾ ಸೆಂಟರ್ ನ 1ನೇ ಮಹಡಿಯಲ್ಲಿ ಸ್ಥಾಪಿಸಿದ್ದು ಇದರ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.
ಯಾವೂದೇ ಅವ್ಯವಹಾರಗಳಲ್ಲಿ ಭಾಗಿಯಾಗದೇ ಒಂದೆ ಒಂದು ಕಪ್ಪುಚುಕ್ಕೆಯಿಲ್ಲದೆ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಮಂಗಳ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿಗೆ ಅಭಿನಂದನೆ ಸಲ್ಲಿಸುವುದಾಗಿ ಮೊಯ್ಲಿ ಹೇಳಿದರು.ಕಡಿಮೆ ಅವಧಿಯಲ್ಲಿ 200 ಕೋಟಿಗೂ ಅಧಿಕ ವ್ಯವಹಾರ ಮಾಡಿರುವ ಈ ಸಂಸ್ಥೆ ನಿಗದಿತ ಗುರಿ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ 1000 ಕೋಟಿ ವ್ಯವಹಾರ ನಡೆಸುವ ಮೂಲಕ ಸಾಧನೆ ಮಾಡಲಿದೆ ಎಂದು ಶುಭನುಡಿದರು.
ಗ್ರಾಮೀಣ ಪ್ರದೇಶದ ಬಡ ಸಮುದಾಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದ್ದು, ಇಂತಹ ಗ್ರಾಮೀಣ ಪ್ರದೇಶದವರನ್ನು ಮುಖ್ಯವಾಹಿನಿಯಲ್ಲಿ ತರುವಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಮ್ಮ ಬ್ಯಾಂಕುಗಳು ಮಾಡಬೇಕು ಎಂದು ಸಲಹೆ ನೀಡಿದ ಅವರು, ಜನರ ಅವಶ್ಯಕತೆಗಳನ್ನು ಮನಗಂಡು ಹಾಗೂ ಗ್ರಾಹಕರ ಬೇಡಿಕೆಗಳ ಬಗ್ಗೆ ಸೂಕ್ಷ್ಮವಾಗಿ ಅರಿತುಕೊಂಡು ಬ್ಯಾಂಕ್ ಕಾರ್ಯ ನಿರ್ವಾಹಿಸಿದರೆ ಬ್ಯಾಂಕಿನ ಬೆಳವಣಿಗೆಗೂ ಸಹಾಯಕವಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀಮತಿ ಮಾಲತಿ ವಿ.ಮೊಯ್ಲಿ, ಸ್ಥಳೀಯ ಕಾರ್ಪೋರೇಟರ್ ರಜನೀಶ್ ಕಾಪಿಕಾಡ್, ನ್ಯೂರೋ ಸರ್ಜನ್ ಡಾ..ಕೆ.ವಿ ದೇವಾಡಿಗ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ವಾಮನ ಮರೋಳಿ ಮೊದಲಾದವರು ಅತಿಥಿಗಳಾಗಿದ್ದರು.
ಸಮ್ಮಾನ :
ಸಮಾರಂಭದಲ್ಲಿ ಸಂಸ್ಥೆಗೆ ಸಹಕಾರ ನೀಡಿದ ಪ್ಲಾಮಾ ಡೆವೆಲಪರ್ಸ್‌ನ ಆಡಳಿತಾ ನಿರ್ದೇಶಕ ಪಿ.ಎಂ. ಅಬ್ದುಲ್ ರಜಾಕ್, ಶ್ರೀಮತಿ ದಿವ್ಯ ಜೆ.ಡಿಸೋಜ ( ಕಟ್ಟಡದ ಮಾಲ್ಹಕರು), ಇಂಟಿಟರಿಯರ್ ಡಿಸೈನರ್ (ಕಟ್ಟಡದ ವಿನ್ಯಾಸಗಾರ) ಇಡ್ಯಾ ಸುರೇಶ್, ಭಾಗ್ಯಜ್ಯೋತಿ ಇಂಡಸ್ಟ್ರೀಸ್ ಪಾಲುದಾರ ಕಿರಣ್ ಎಲ್.ದೇವಾಡಿಗ, ಜೋಗಿ ಸಮಾಜದ ಅಧ್ಯಕ್ಷ ( ಇಂದಿನ ಕಾರ್ಯಕ್ರಮಕ್ಕೆ ಉಚಿತ ಪುಷ್ಪಾಲಂಕರ ಮಾಡಿದ) ಕಿರಣ್ ಜೋಗಿ ಮೊದಲಾದವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನೆನೆಪಿನ ಕಾಣಿಕೆ :
ಸಂಸ್ಥೆಯ ಮೊದಲ ಷೇರುದಾರರಾದ ಗೋಪಾಲ ದೇವಾಡಿಗ ನಾಗುರಿ, ಪ್ರಥಮ ಉಳಿತಾಯ ಖಾತೆ ಗ್ರಾಹಕ ಲೋಹಿತಾಕ್ಷ, ಹೊಸ ಕಚೇರಿಯ ಪ್ರಥಮ ಠೇವಣಿದಾರರಾದ ಡಾ.ಭಾಸ್ಕರ್ ಶೆಟ್ಟಿ ( ಮಾಲ್ಹಕರು ಸಿಟಿ ಆಸ್ಪತ್ರೆ) ಹಾಗೂ ಹಿಲರಿ ಕುಟಿನ್ಹ ಮೊದಲಾದವರಿಗೆ ನೆನಪಿಣ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಎಲ್ಲಾ ನಿರ್ದೇಶಕರು ಹಾಗೂ ಎಲ್ಲಾ ಶಾಖಾಧಿಕಾರಿಗಳಿಗೆ ಸ್ಮರಣಿಕೆ ನೀಡಲಾಯಿತು.
ಸೊಸೈಟ್ಯ ಪ್ರಭಾರ ಮಹಾಪ್ರಬಂಧಕ ಟಿ.ಸಂಜೀವ ಮೊಯಿಲಿ ಪ್ರಸ್ತಾವನೆಗೈದರು. 382 ಸದಸ್ಯರು ಹಾಗೂ 2,00,000 ರೂ ಪಾಲು ಬಂಡವಾಳದೊಂದಿಗೆ ಡಾ.ಕೆ.ವಿ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅಣ್ಣಯ್ಯ ಶೇರಿಗಾರರು ಹಣಕಾಸಿನ ನಿರ್ದೇಶಕರಾಗಿ ಸೊಸೈಟಿ ಸ್ಥಾಪನೆಗೊಂಡಿತ್ತು. ಅಗ ಶಿಕ್ಷಣ ಸಚಿವರಾಗಿದ್ದ ಎಂ.ವೀರಪ್ಪ ಮೊಯಿಲಿ ಉದ್ಘಾಟಿಸಿದ್ದರು.
ಪ್ರಸುತ್ತ ದ.ಕ ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡು ಒಟ್ಟು 11 ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 11ರಲ್ಲಿ 8 ಶಾಖೆಗಳು ಹಾಗೂ ಕೇಂದ್ರ ಕಛೇರಿಗೆ ಸ್ವಂತ ಕಚೇರಿ ಇದೆ. ಸಂಪೂರ್ಣ ಕಂಪ್ಯೂಟರೀಕೃತಗೊಂಡಿದ್ದು, ಗ್ರಾಹಕರಿಗೆ ಶೀಘ್ರ ಹಾಗೂ ಅಧುನಿಕ ಸೇವೆ ಸಲ್ಲಿಸುತ್ತಿದೆ.
ಸೊಸೈಟಿ ಪ್ರಸ್ತುತ 2 ಕೋಟಿ ರೂ ಪಾಲು ಬಂಡವಾಳದೊಂದಿಗೆ 200ಕೋಟಿ ರೂ ವಾರ್ಷಿಕ ವಹಿವಾಟು ನಡೇಸುತ್ತಿದೆ. 45 ಕೋಟಿ ರೂ ಠೇವಣಿ ಹೊಂಡಿದ್ದು, 38 ಕೋಟಿ ರೂ ಸಾಲ ನೀಡಿದೆ. 55 ಮಂದಿ ಸಿಬ್ಬಂದಿ ಹಾಗೂ 25 ಮಂದಿ ಕಮಿಷನ್ ಎಜೆಂಟ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಜೀವ ಮೊಯಿಲಿ ತಿಳಿಸಿದರು.
ಮಂಗಳ ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೆ.ದೇವಾಡಿಗ ಸ್ವಾಗತಿಸಿದರು. ಸೊಸೈಟಿ ನಿರ್ದೇಶಕ ಬಾಬು ದೇವಾಡಿಗ ಅಂಬ್ಲಮೊಗರು ವಂದಿಸಿದರು. ಮಂಜುಳಾ ಶೆಟ್ಟಿ ಹಾಗೂ ಉಮೇಶ್ ಕೆ.ಆರ್, ಕಾರ್ಯಕ್ರಮ ನಿರೂಪಿಸಿದರು.
1 Comment
Congratulations to Board Members of Mangala Credit Cooperative Society Limited (MCCSL)on their 25th Anniversary and opening of Head office in newly owned Premises, today. It’s a remarkable resurgence. The Duo Dr. K.V.Devadiga and Mr. K.J.Devadiga instilled the renewed spirit of Dependability. The MCCSL is one of the leading financial institutions of Devadigas and we are proud of it. Best wishes .