ಕನ್ನಡ ವಾರ್ತೆಗಳು

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹರೀಶ್ ಅಂತ್ಯಕ್ರಿಯೆ : ಸಾವಿರಾರು ಮಂದಿಯಿಂದ ಮೃತರ ಅಂತಿಮ ದರ್ಶನ

Pinterest LinkedIn Tumblr

Harish_Funaral_Pics_1

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿಯಾಲ ಬಳಿಯ ಜಕ್ರಿಬೆಟ್ಟುವಿನಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದ ಹರೀಶ್ ಅವರ ಅಂತ್ಯಕ್ರಿಯೆ ಶುಕ್ರವಾರ ನಡೆಯಿತು.

ಉಸ್ತುವಾರಿ ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ನಿಕ್, ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಆರ್.ಎಸ್.ಎಸ್.ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಮಾಜಿ ಶಾಸಕ ರುಕ್ಮಯ ಪೂಜಾರಿ, ತುಳು ಸಾಹಿತ್ಯಾ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಬಜರಂಗ ದಳದ ಸಂಚಾಲಕ ಶರಣ್ ಪಂಪ್‌ವೆಲ್ ಸಹಿತಾ ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದು, ಮೃತರ ಅಂತಿಮ ದರ್ಶನ ಪಡೆದರು.

ಇದೇ ಸಂದರ್ಭದಲ್ಲಿ ನೂರಾರು ಗಣ್ಯರು ಮೃತರ ಮನೆಗ ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸೆಕ್ಷನ್ 144 ನಿಷೇದಾಜ್ಞೆ ಜಾರಿಯಲ್ಲಿದ್ದರೂ ಸಾವಿರಾರು ಮಂದಿ ಆಗಮಿಸಿ ಹರೀಶ್ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು.

Harish_Funaral_Pics_3 Harish_Funaral_Pics_4 Harish_Funaral_Pics_5 Harish_Funaral_Pics_6 Harish_Funaral_Pics_7

ಹರೀಶ್ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ ಪರಿಹಾರ ಘೋಷಣೆ :

ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಮೃತಪಟ್ಟ ಹರೀಶ್ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಘೋಷಿಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ ಎಂದು ಗಾಳಿ ಸುದ್ದಿಗಳು ಹರಡಿದ್ದು, ಈ ಬಗ್ಗೆ ಸ್ಪಷ್ಟವಾದ ಯಾವುದೇ ಮಾಹಿತಿಗಳು ದೊರೆತಿಲ್ಲ. ಕಾಂಗ್ರೇಸ್ ಪಕ್ಷದಿಂದ ಪರಿಹಾರ ನೀಡುವ ಭರವಸೆಯನ್ನು ಕೆಲವು ಕಾಂಗ್ರೆಸ್ ಮುಖಂಡರು ನೀಡಿದ್ದಾರೆ.

ಆರೋಪಿಗಳ ವಿರುದ್ಧ ನಿರ್ಧಾಕ್ಷಿನ್ಯ ಕ್ರಮಕ್ಕೆ ಸೂಚನೆ :

ಹರೀಶ್ ಮೇಲೆ ಹಲ್ಲೆ ನಡೆಸಿ ಹರೀಶ್ ಸಾವಿಗೆ ಕಾರಣರಾದವರು ಯಾಮದೇ ಜಾತಿ ಧರ್ಮಕ್ಕೆ ಸೇರಿದ್ದರು ಅವರ ವಿರುದ್ಧ ನಿರ್ಧಾಕ್ಷಿನ್ಯ ಕ್ರಮ ಕೈಗೊಳ್ಳುವಂತೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

Write A Comment