ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಶ್ರೀ ವಿಧ್ಯಾ ಗಣಪತಿ ಸೇವಾ ಟ್ರಸ್ಟ್ (ರಿ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ ವತಿಯಿಂದ 30ನೇ ವರ್ಷದ ಶ್ರೀ ಗಣೇಶೋತ್ಸವವು ಕಳೆದ ಐದು ದಿನಗಳಿಂದ ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಿಜೈ ಬಸ್ಸು ನಿಲ್ದಾಣದ ಅವರಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಪೂಜಾ ಕಾರ್ಯಕ್ರಮಗಳೊಂದಿಗೆ ಜರಗಿತು.
ಶ್ರೀ ವಿಧ್ಯಾ ಗಣಪತಿ ಸೇವಾ ಟ್ರಸ್ಟ್ ಅಶ್ರಯದಲ್ಲಿ 30ನೇ ವರ್ಷದ ಶ್ರೀ ಗಣೇಶೋತ್ಸವವದಲ್ಲಿ ಪೂಜಿಸಲ್ಪಟ್ಟ ಶ್ರೀ ವಿಧ್ಯಾ ಗಣಪತಿ ದೇವರ ವೈಭವದ “ಶೋಭಾಯಾತ್ರೆ”ಯು ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಸ್ಯಾಕ್ಸಫೋನ್ ವಾದನ, ಚೆಂಡೆವಾದನ, ಯಕ್ಷಗಾನ ಗೊಂಬೆಗಳು, ಬಂಟ್ವಾಳ ನವಿಲು ನೃತ್ಯ, ಗೊಂಬೆ ಕುಣಿತ, ತಾಲೀಮು ಪ್ರದರ್ಶನ, ಸಿಡಿಮದ್ದು ಪ್ರದರ್ಶನ ಹಾಗೂ ಇನ್ನಿತರ ಟ್ಯಾಬ್ಲೋಗಳೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಪ್ರಾರಂಭಗೊಂಡ ವೈಭವದ ಶೋಭಾಯಾತ್ರೆಯು ಲಾಲ್ಭಾಗ್, ಸಿಟಿ ಕಾರ್ಫೋರೇಶನ್, ಹಿಂದಿ ಪ್ರಚಾರ ಸಮಿತಿ, ಮಣ್ಣಗುಡ್ಡ, ಗುರ್ಜಿ, ಆಳಕೆ, ನ್ಯೂಚಿತ್ರಾ ಮಾರ್ಗವಾಗಿ ರಥಬೀದಿಯಿಂದ ಸಾಗಿ ಶ್ರೀ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆಗೊಂಡಿತ್ತು.