ಮೂಡುಬಿದಿರೆ:ಮಂಗಳೂರಿನಿಂದ ಮೂಡಬಿದ್ರೆಗೆ ಬೈಕ್ನಲ್ಲಿ ಬರುತ್ತಿದ್ದ ಇಬ್ಬರು ಯುವಕರ ಮೇಲೆ ಆರು ಮಂದಿಯ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮೂಡಬಿದಿರೆ ಸಮೀಪದ ಪುತ್ತಿಗೆ ಗ್ರಾಮದ ಹಂಡೇಲುಸುತ್ತು ಎಂಬಲ್ಲಿ ಬಾನುವಾರ ಮುಂಜನೆ ನಡೆದಿದೆ.
ಅಪರಿಚಿತ ತಂಡದ ದಾಳಿಗೊಳಗಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಯುವಕರನ್ನು ನಾರಾವಿ ನಿವಾಸಿ ವಾಸು ಆಚಾರ್ಯ (32) ಹಾಗೂ ಅಶೋಕ್ (30) ಎಂದು ಗುರುತಿಸಲಾಗಿದೆ.
ಶನಿವಾರ ಮಂಗಳೂರು ಸಮೀಪದ ಕುಲಶೇಖರದ ಗಣೇಶ ವಿಸರ್ಜನಾ ಮೆರವಣಿಗೆ ಬ್ಯಾಂಡ್ ವಾದನಕ್ಕೆ ಹೋದ ಈ ಇಬ್ಬರು ಯುವಕರು ಭಾನುವಾರ ಮುಂಜಾನೆ ಮನೆಗೆ ಮರಳುತ್ತಿದ್ದ ಸಂದರ್ಭ ಇವರನ್ನು ಮೂರು ಬೈಕ್ ಗಳಲ್ಲಿ ಹಿಂಬಾಲಿಸಿಕೊಂಡು ಬಂದ ಆರು ಮಂದಿಯ ತಂಡವು, ಪುತ್ತಿಗೆ ಗ್ರಾಮದ ಹಂಡೇಲುಸುತ್ತು ಬಳಿ ಅಡ್ಡಗಟ್ಟಿ ಮಾರಕಾಯುಧಗಳಿಂದ ತಲೆ ಹಾಗೂ ಕೈಗೆ ಹಲ್ಲೆ ನಡೆಸಿ ಪರಾರಿಯಾಗಿದೆ.
ತಕ್ಷಣ ಸ್ಥಳೀಯರು ಬೇರೆ ವಾಹನ ಸವಾರರ ನೆರವಿನೊಂದಿಗೆ ಗಾಯಗೊಂಡ ಯುವಕರನ್ನು ಮಂಗಳೂರಿನ ಆಸ್ಪತ್ರೆ ಸಾಗಿಸಿ ದಾಖಲಿ ಪಡಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ಪ್ರಕರಣ ದಾಖಲಿಸಿರುವ ಮೂಡುಬಿದಿರೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.