ಕನ್ನಡ ವಾರ್ತೆಗಳು

ನಿಟ್ಟೆ ಸಂಸ್ಥೆಯಲ್ಲಿ ‘ಪಶ್ಚಿಮ ಘಟ್ಟ ಮತ್ತು ಪುನರ್ವಸತಿ ಸಮಸ್ಯೆ’ ಕುರಿತು ಅತಿಥಿ ಉಪನ್ಯಾಸ

Pinterest LinkedIn Tumblr

Nitte_grnary_photo_1

ಮಂಗಳೂರು,ಸೆ.10 : ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ನಿಕೋ), ಇಂದು ದೇರಳಕಟ್ಟೆಯ ಪಾನಿರಿನ ಕಾಲೇಜು ಸಭಾಂಗಣದಲ್ಲಿ ‘ಪಶ್ಚಿಮ ಘಟ್ಟ ಮತ್ತು ಪುನರ್ವಸತಿ ಸಮಸ್ಯೆ’ ಎಂಬ ವಿಷಯದ ಮೇಲೆ ಅತಿಥಿ ಉಪನ್ಯಾಸವನ್ನು ಏರ್ಪಡಿಸಿತ್ತು.

ಖ್ಯಾತ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಕ ಶ್ರೀ ನಿರೇನ್ ಜೈನ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ “ಮಾನವರು ಪರಿಸರಕ್ಕೆ ಸ್ಪಂದಿಸದೇ ಇರುವುದರಿಂದ ವಾತಾವರಣದಲ್ಲಿ ನಡೆಯುತ್ತಿರುವ ವಿವಿಧ ಬದಲಾವಣೆಗಳಿಗೆ ನಾವೇ ಮುಖ್ಯ ಕಾರಣಕರ್ತರಾಗಿದ್ದೇವೆ. ಸಮಯಪ್ರಜ್ಞೆ ಹಾಗೂ ಜವಾಬ್ದಾರಿಯ ಮುಖಾಂತರ ನಾವು ಪರಿಸರವನ್ನು ರಕ್ಷಿಸಬಹುದು” ಎಂಬ ಅಭಿಪ್ರಾಯವನ್ನು ನೀಡಿದರು.

Nitte_grnary_photo_2 Nitte_grnary_photo_3

ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಹಾಗೂ ಪಶ್ಚಿಮ ಘಟ್ಟದಲ್ಲಿ ಪುನರ್ವಸತಿ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅತಿಥಿಗಳು ಗಿಡಗಳನ್ನು ವಿತರಿಸಿ ಸಾಂಕೇತಿಕವಾಗಿ ‘ನೀ-ಇಕೋ’ ಎಂಬ ವಿದ್ಯಾರ್ಥಿ ಪರಿಸರ ಸಂಘವನ್ನು ಉದ್ಘಾಟಿಸಿದರು.

ಸಿಬ್ಬಂದಿ ಸಂಯೋಜಕಿ ಕು. ಅನೀಷಾ ‘ನೀ-ಇಕೋ’ ಸಂಘವನ್ನು ಪರಿಚಯಿಸುತ್ತಾ “ಪರಿಸರಕ್ಕೆ ಸಂಭದಪಟ್ಟ ವಿವಿಧ ವಿಷಯಗಳಾದ, ‘ಹಸಿರು ಉಳಿಸಿ’, ‘ಪ್ಲಾಸ್ಟಿಕ್ ಮುಕ್ತ ಪರಿಸರದ’ ಬಗ್ಗೆ ಜಾಗ್ರ ತಿಯನ್ನು ಸಿನಿಮಾ, ವಿಚಾರ ಸಂಕೀರ್ಣ ಹಾಗೂ ಜನಸಮೂಹ ಕಾರ್ಯಕ್ರಮದ ಮುಖಾಂತರ ನೀಡಲಾಗುವುದು” ಎಂದು ತಿಳಿಸಿದರು.

ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಶ್ರೀ ರವಿರಾಜ್ ಕಿಣಿ ಸ್ವಾಗತಿಸಿದರು, ವಿದ್ಯಾರ್ಥಿ ಸಂಯೋಜಕಿ ಕು. ಆಷಿಕ ಅಪ್ಪಯ್ಯ ವಂದಿಸಿದರು. ವಿಧ್ಯಾರ್ಥಿನಿ ನಿಧಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಹ್ಯಾದ್ರಿ ಸಂಚಯ ಸಂಘದ ಸದಸ್ಯೆ ಸ್ವಪ್ನ ನೊರೊನ್ಹ, ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರಸ್ತುತರಿಸಿದ್ದರು.

Write A Comment