ಅಂತೆಯೇ, ಒಂದು ವಾರದ ಹಿಂದೆ ಈ ರಸ್ತೆಯ ಕೊನೆಯ ಭಾಗವನ್ನು ಕಾಂಕ್ರೀಟೀಕರಣ ಮಾಡಲಾಯಿತು. ಈ ಸಂಧರ್ಭದಲ್ಲಿ ಗುತ್ತಿಗೆದಾರರ ದೊಡ್ಡ ದೊಡ್ಡ ಟಿಪ್ಪರ್ ಗಳು ಈ ರಸ್ತೆಯಲ್ಲಿ ಓಡಾಡಿ ಪಕ್ಕದಲ್ಲಿದ್ದ ಗ್ರೀನ್ ಹಿಲ್ ಅಪಾರ್ಟ್ ಮೆಂಟ್ ಬದಿಯ ಡ್ರೈನೇಜನ್ನು ಒಡೆದು ಹಾಕಿದವು. ಅಂದಿನಿಂದ ಈ ಡ್ರೈನೇಜ್ ಕೊಳಚೆ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಮೂಗು ಮುಚ್ಚಿಕೊಂಡ ಇರಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ.
ಇದನ್ನು ದುರಸ್ಥಿಗೊಳಿಸುವಂತೆ ನಗರಪಾಲಿಕೆಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯರಿಗೆ ಈ ವಾರ್ಡಿನ ಕಾರ್ಪೋರೇಟರ್ ಅಂತೂ ಇದ್ದಾರೋ, ಇಲ್ಲವೋ ಎಂಬುದೇ ತಿಳಿಯದಂತಾಗಿದೆ. ಈ ವಾರ್ಡಿನ ಬಹುತೇಕ ಚರಂಡಿಗಳ ನೀರು ರಸ್ತೆಯಲ್ಲೇ ಹರಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೂ ಇಲ್ಲಿನ ಕಾರ್ಪೋರೇಟರ್ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಮಂಗಳೂರು ನಗರ ಇದೇ ರೀತಿ ಮುಂದುವರಿದರೆ ಇಲ್ಲಿನ ಕಾರ್ಪೋರೇಟರ್ ಗಳು ಮಾತ್ರ ಖಂಡಿತವಾಗಿಯೂ ಮತ್ತಷ್ಟು `ಸ್ಮಾರ್ಟ್’ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ…!