ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಅಗಸ್ಟ್.27 : ಹಲವಾರು ಪ್ರತಿಷ್ಠಿತ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಮತ್ತು ISO 9001:2008 ಪ್ರಮಾಣಿತ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‍ಸ್ ಡೆವಲಪರ್‍ಸ್ (ಪ್ರೈ) ಲಿಮಿಟೆಡ್ ಸಂಸ್ಥೆಯು ಯಶಸ್ವೀ 30ನೇ ವರ್ಷಕ್ಕೆ ಮುನ್ನುಗ್ಗುತ್ತಿರುವ ಈ ಶುಭ ಸಂದರ್ಭದಲ್ಲಿ ಮತ್ತೊಂದು ಮಹತ್ವದ ಯೋಜನೆಯನ್ನು ಆರಂಭಿಸಿದೆ.
ಈಗಾಗಲೇ ಹಲವಾರು ಸುಂದರ ಕಟ್ಟಡಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಸಮಾಜಕ್ಕೆ ಅರ್ಪಿಸಿರುವ ಇನ್‌ಲ್ಯಾಂಡ್ ಸಂಸ್ಥೆಯ ಇನ್ನೊಂದು ಮಹತ್ವದ ಕೊಡುಗೆ ಕೂಳೂರು ಕಾವೂರು ರಸ್ತೆಯ ಮಧ್ಯಭಾಗದಲ್ಲಿ ಮುಖ್ಯ ರಸ್ತೆಗೆ ತಾಗಿಕೊಂಡೇ ನಿರ್ಮಾಣಗೊಳ್ಳಲಿರುವ “ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್ ಅವಳಿ ವಸತಿ ಸಮುಚ್ಛಯ”ದ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಮುಂಜಾನೆ ಜರಗಿತ್ತು.
ನಗರದ ರಾಧಾಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಗಿರಿಧರ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕೂಳೂರು ಸೈಂಟ್ ಆ್ಯಂಟನಿ ಚರ್ಚ್‌ನ ಧರ್ಮಗುರು ಫಾ.ಹೆರಾಲ್ಡ್ ಡಿಸೋಜ ಆಶೀರ್ವಚನ ನೀಡಿದರು. ಅರ್ಕುಳ ಕೊಪ್ಪಳ ಜಾಮಿಯಾ ಮಸೀದಿಯ ಖತೀಬ್ ಪಿ.ಎಸ್.ಮುಹಮ್ಮದ್ ಕಾಮಿಲ್ ಸಖಾಫಿ ದುಆ ನೆರವೇರಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಮುಖ್ಯ ಅತಿಥಿಗಳಾಗಿದ್ದರು. ಇನ್‌ಲ್ಯಾಂಡ್ ಬಿಲ್ಡರ್‍ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಿರಾಜ್ ಆಹ್ಮದ್, ನಿರ್ದೇಶಕರಾದ ಮೆರಾಜ್ ಯೂಸುಫ್, ವಹಾಜ್ ಯೂಸುಫ್, ವಿನ್ಯಾಸಕಾರ ಅನಿಲ್ ಹೆಗ್ಡೆ, ಎಂಜಿನಿಯರ್ ಸುರೇಶ್ ಪೈ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಸುದ್ಧಿಗಾರರ ಜೊತೆ ಮಾತನಾಡಿದ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‍ಸ್ ಡೆವಲಪರ್‍ಸ್ (ಪ್ರೈ) ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸಿರಾಜ್ ಆಹ್ಮದ್ ಅವರು, ಇನ್‌ಲ್ಯಾಂಡ್ ಎಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಹೊಂದಬೇಕೆಂದು ಅನೇಕ ವರ್ಷಗಳಿಂದ ಹಂಬಲಿಸುತ್ತಿರುವ ನಮ್ಮ ಪ್ರೀತಿಯ ಗ್ರಾಹಕರಿಗಾಗಿ ಕೈಗೆಟಕುವ ರೀತಿಯಲ್ಲಿ ದರ ನಿಗದಿಪಡಿಸಿದ್ದು ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದು ನನ್ನ ಕೋರಿಕೆಯಾಗಿದೆ ಎಂದರು.
ಇನ್‌ಲ್ಯಾಂಡ್ ಸಂಸ್ಥೆ ನಿರ್ಮಾಣದ ಕಟ್ಟಡದಲ್ಲೇ ಫ್ಲಾಟ್‌ಗಳನ್ನು ಖರೀದಿಸಬೇಕೆಂದು ಗ್ರಾಹಕರು ಬಯಸುತ್ತಿದ್ದಾರೆ. ಆದರೆ ಗಗನಕ್ಕೇರಿದ ಜಮೀನಿನ ಬೆಲೆ, ಕಟ್ಟಡ ಸಾಮಗ್ರಿ ಮೊದಲಾದ ವೆಚ್ಚಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಬಯಸಿದ ದರದಲ್ಲಿ ಫ್ಲಾಟ್‌ಗಳು ದೊರೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರ ಬಯಕೆಯನ್ನು ಮನಗಂಡು ಕೈಗೆಟಕುವ ಬೆಲೆಯಲ್ಲಿ ಫ್ಲಾಟ್‌ಗಳನ್ನು ಒದಗಿಸಬೇಕೆಂಬ ಉದ್ದೇಶದೊಂದಿಗೆ ಈ ಅವಳಿ ವಸತಿ ಸಮುಚ್ಚಯವನ್ನು ನಿರ್ಮಿಸುತ್ತಿರುವುದಾಗಿ ಹೇಳಿದರು.
ಕೇವಲ 7 ಲಕ್ಷ ರೂ. ಪಾವತಿಸಿ ಫ್ಲಾಟ್‌ಗಳನ್ನು ಬುಕ್ ಮಾಡಬಹುದು. ಉಳಿದ ಮೊತ್ತವನ್ನು ಎರಡೂವರೆ ವರ್ಷಗಳಲ್ಲಿ ಕಂತುಗಳಲ್ಲಿ ಪಾವತಿಸುವ ಅವಕಾಶ ಸಹಿತ ಬ್ಯಾಂಕ್ ಸಾಲದ ಸೌಲಭ್ಯವನ್ನೂ ಒದಗಿಸುವುದಾಗಿ ಸಿರಾಜ್ ಅಹ್ಮದ್ ಹೇಳಿದರು.
ತಮ್ಮ ಸಂಸ್ಥೆಯೊಂದಿಗೆ ವಿಶ್ವಾಸನೀಯ ಬಾಂಧವ್ಯ ಬೆಳೆಸಿಕೊಂಡಿರುವ ಎಲ್ಲಾ ಗ್ರಾಹಕ ಮಿತ್ರರಿಗೂ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿವುದಾಗಿ ತಿಳಿಸಿರುವ ಶ್ರೀಯುತ ಸಿರಾಜ್ ಅಹಮ್ಮದ್‌ರವರು ಭವಿಷ್ಯದಲ್ಲೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿರುವುದಾಗಿ ತಿಳಿಸಿದರು.
ಮುಂದಿನ ಕೆಲವೇ ದಿನಗಳಲ್ಲಿ ಪುತ್ತೂರಿನಲ್ಲಿ ಇನ್‌ಲ್ಯಾಂಡ್ ಮಯೂರ ಶಿಲಾನ್ಯಾಸಗೊಳ್ಳಲಿದೆ ಹಾಗೂ ಬೆಂಗಳೂರಿನ ಇನ್‌ಲ್ಯಾಂಡ್ ಇಮಾದ್ ಉದ್ಘಾಟನೆಗೆ ಸಿದ್ಧವಾಗಿದೆ. ಜೊತೆಯಲ್ಲಿಯೇ ಬೆಂಗಳೂರಿನಲ್ಲಿ ಇನ್‌ಲ್ಯಾಂಡ್ ಎಡಿಲಾನ್, ಮಂಗಳೂರಿನಲ್ಲಿ ಇನ್‌ಲ್ಯಾಂಡ್ ಎವಿನ್ಸ್, ಇನ್‌ಲ್ಯಾಂಡ್ ಎಸ್ಟೋರಿಯಾ, ಇನ್‌ಲ್ಯಾಂಡ್ ಸಿಯಾನ್, ಇನ್‌ಲ್ಯಾಂಡ್ ಇಂಪಾಲ ವಸತಿ ಸಮುಚ್ಛಯಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಲಿದೆ. ಈ ಎಲ್ಲಾ ಯೋಜನೆಗಳಿಗೂ ಗ್ರಾಹಕರು ಸಂಪೂರ್ಣ ಪ್ರೋತ್ಸಾಹ ನೀಡ ಬೇಕು ಎಂದು ಸಿರಾಜ್ ಆಹ್ಮದ್ ಅವರು ಹೇಳಿದರು.
ದುಬ್ಯಾಲ್ಲಿ ಕೂಡ ಕಛೇರಿ ಆರಂಭ :
ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಸಿರಾಜ್ ಅಹಮ್ಮದ್‌ರವರ ದೂರದೃಷ್ಟಿಯಿಂದ 1986 ರಲ್ಲಿ ಹುಟ್ಟಿದ ಇನ್‌ಲ್ಯಾಂಡ್ ರಿಯಲ್ ಎಸ್ಟೇಟ್ ಎಂಬ ಪುಟ್ಟ ಸಂಸ್ಥೆ ಇಂದು ಅವರ ಸಮರ್ಥ ಆಡಳಿತದೊಂದಿಗೆ ಇನ್‌ಲ್ಯಾಂಡ್ ಗ್ರೂಪ್ ಆಗಿ ಬೆಳೆದು ನಿಂತಿದೆ. ಇನ್‌ಲ್ಯಾಂಡ್ ಬಿಲ್ಡರ್‍ಸ್‌ನಿಂದ ಆರಂಭಗೊಂಡು, ಈಗಾಗಲೇ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್‍ಸ್, ಇನ್‌ಲ್ಯಾಂಡ್ ರಿಯಲ್ ಎಸ್ಟೇಟ್ಸ್, ಇನ್‌ಲ್ಯಾಂಡ್ ಇಂಡೋರ್‍ಸ್, ಇನ್‌ಲ್ಯಾಂಡ್ ಸರ್ವೀಸ್ ಎಪಾರ್ಟ್‌ಮೆಂಟ್ ಎಂಬ ಕಂಪೆನಿಗಳನ್ನು ಹುಟ್ಟು ಹಾಕಿರುವ ಶ್ರೀಯುತ ಸಿರಾಜ್‌ರವರು ಇತ್ತೀಚೆಗೆ ದುಬ್ಯಾಲ್ಲಿ ಕೂಡ ತಮ್ಮ ಸಂಸ್ಥೆಯ ಕಛೇರಿಯನ್ನು ಆರಂಭಿಸಿರುತ್ತಾರೆ.
ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್ ವಿಶೇಷತೆ :
ನೆಲಅಂತಸ್ತು ಸೇರಿ ಒಟ್ಟು 12 ಅಂತಸ್ತುಗಳನ್ನು ಹೊಂದಿರುವ ಸನ್‌ಲೈಟ್ ಬಹುಮಹಡಿ ಕಟ್ಟಡ ಹಾಗೂ 5 ಅಂತಸ್ತುಗಳ ಮೂನ್‌ಲೈಟ್ TWIN ಕಟ್ಟಡಗಳಲ್ಲಿ ಒಟ್ಟು 75 ಫ್ಲ್ಯಾಟುಗಳಿರುತ್ತವೆ. 3 BHK – 1415 Sq.Ft., 2 BHK – 1025 Sq.Ft., 1055 Sq.Ft., 1095 Sq.Ft., ವಿಸ್ತೀರ್ಣವನ್ನು ಹೊಂದಿರುತ್ತದೆ. ಅನೇಕ ವಿಶಿಷ್ಟವಾದ ಸವಲತ್ತುಗಳನ್ನು ಹೊಂದಲಿರುವ ಇನ್‌ಲ್ಯಾಂಡ್ ಸನ್‌ಲೈಟ್ ಮೂನ್‌ಲೈಟ್ ಅತ್ಯುತ್ತಮ ಗುಣಮಟ್ಟದೊಂದಿಗೆ ನಿರ್ಮಿಸಲ್ಪಡುತ್ತಿದೆ.
ವಿಶೇಷ ಸವಲತ್ತುಗಳು:
1. 3 ಲೆವಲ್ ಕಾರ್ ಪಾರ್ಕಿಂಗ್ 2. ವಿಶಾಲವಾದ ಲಾಬಿ 3. ಸುಸಜ್ಜಿತ ಜಿಮ್ನಾಶಿಯಂ 4. ಮಕ್ಕಳ ಆಟದ ತಾಣ 5. Landscape ಗಾರ್ಡನ್ 6. ಫಯರ್ ಫೈಟಿಂಗ್ ಸಿಸ್ಟಮ್ಸ್ 7. ಇಂಟರ್‌ಕಾಂ ಸೌಲಭ್ಯ 8. ಮೊಡ್ಯುಲರ್ ಎಲೆಕ್ಟ್ರಿಕಲ್ ಸ್ವಿಚ್‌ಗಳು 9. ಎರಡು ಲಿಫ್ಟ್‌ಗಳು, ಇತ್ಯಾದಿ
ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.inlandbuilders.net ಅನ್ನು ಸಂಪರ್ಕಿಸ ಬಹುದಾಗಿದೆ.