ಮಂಗಳೂರು/ಕೈಕಂಬ,ಆಗಸ್ಟ್.27 : ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಡಗಬೆಳ್ಳೂರು ಎಂಬಲ್ಲಿ ಯುವತಿಯೋರ್ವಳನ್ನು ಬೆಂಬತ್ತಿದ್ದ ಯುವಕ ನೋರ್ವ ಆಕೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈತನನ್ನು ಬಡಗಬೆಳ್ಳೂರು ವರಕೋಡಿ ನಿವಾಸಿ ಸಂತೋಷ್ ಲೂಯಿಸ್ (38) ಎಂದು ಗುರುತಿಸಲಾಗಿದೆ.
ಗುರುಪುರ ಕೈಕಂಬದ ಟೈಲಂರಿಂಗ್ ಅಂಗಡಿಯೊಂದರಲ್ಲಿ ಎಂದಿನಂತೆ ಕರ್ತವ್ಯ ಮುಗಿಸಿ ಯುವತಿ ಬಸ್ ಇಳಿದು ಕಲ್ಲಗುಡ್ಡೆಯಿಂದ ಮನೆಗೆ ಸಾಯಾಂಕಾಲ 6. 30ಕ್ಕೆ ಬಡಗಬೆಳ್ಳೂರು ಈಶನಗರದಲ್ಲಿ ಮನೆ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ . ಈಕೆಯ ಮನೆ ರಸ್ತೆಯಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವುದರಿಂದ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಸಂತೋಷ್ ಲೂಯಿಸ್ ಯುವತಿಯನ್ನು ಬೆನ್ನತ್ತಲು ಶುರು ಮಾಡಿದ್ದಾನೆ. ಯುವತಿ ಭಯದಿಂದ ವೇಗವಾಗಿ ಹೋದಾಗ ಅಲ್ಲಿಗೂ ಬಂದ ಸಂತೋಷ್ ಆಕೆಯ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದ.
ಭಯಗೊಂಡ ಯುವತಿ ಅಲ್ಲೇ ಸಮೀಪದ ಮನೆಯೊಂದಕ್ಕೆ ತೆರಳಿ ಆತ ಹೋಗುವುದನ್ನೇ ಕಾಯತೊಡಗಿದ್ದಳು. ಆತ ಅಲ್ಲಿಂದ ಹೋಗಿರಬಹುದೆಂದು ಭಾವಿಸಿದ್ದ ಯುವತಿ ಮತ್ತೆ ಮನೆಕಡೆಗೆ ಹೆಜ್ಜೆಹಾಕಿದಾಗ ಎಲ್ಲೋ ತಲೆಮರೆಸಿದ್ದ ಆರೋಪಿ ಆಕೆಯನ್ನು ಮತ್ತೆ ಬೆನ್ನತ್ತಿದ್ದಾನೆ. ಸ್ವಲ್ಪ ದೂರ ಹೋದ ಮೇಲೆ ಆಕೆಯ ಭುಜಗಳಿಗೆ ಕೈ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದು ಭಯಗೊಂಡ ಆಕೆ ಮನೆಗೆ ಓಡಿ ಹೋಗಿದ್ದಾಳೆ.
ಯುವತಿ ತನಗಾದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದು, ಸುದ್ದಿ ಹರಡಿ ಊರವರೆಲ್ಲಾ ಮನೆಯತ್ತ ಜಮಾಯಿಸಿದ್ದರು. ಕೊನೆಗೆ ಮಾಹಿತಿ ಪಡೆದುಕೊಂಡ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಐ ರಕ್ಷಿತ್ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ಸ್ಥಳೀಯರಲ್ಲಿ ಗಲಾಟೆ ನಡೆಸದಂತೆ ಎಚ್ಚರಿಕೆ ನೀಡಿದ್ದರು.
ಈ ಬಗ್ಗೆ ಯುವತಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾಳೆ. ಕೊನೆಗೆ ಆರೋಪಿಯನ್ನು ಬಡಗಬೆಳ್ಳೂರು ಸಮೀಪದ ಬ್ಯೂಟಿಪಾರ್ಲರ್ ಕೆಲಸ ಮಾಡಿಕೊಂಡಿದ್ದ ಮಹಿಳೆಯೋರ್ವರ ಮನೆಯಿಂದ ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿ ಸಂತೋಷ್ ಎರಡು ಮಕ್ಕಳ ತಂದೆಯಾಗಿದ್ದು, ಈ ಹಿಂದೆಯೂ ಹಲವಾರು ಹುಡುಗಿಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಎಂಬ ಆರೋಪವಿದೆ.