ಮಂಗಳೂರು, ಅಗಸ್ಟ್ . 20 : ಎಂಸಿಎಫ್ ವತಿಯಿಂದ ಕಾವೂರು ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ 30 ಸಾವಿರ ರೂ. ಮೌಲ್ಯದ ಸಿಸಿಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.
ಎಂಸಿಎಫ್ ನಿರ್ದೇಶಕ ಕೆ.ಪ್ರಭಾಕರ ರಾವ್ ಸಿಸಿಟಿವಿಯನ್ನು ಶಾಲಾ ಮುಖ್ಯೋಪಾಧ್ಯಾಯ ಮಲ್ಲೇಶ್ ನಾಯಕ್ ಎ.ಸಿ.ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎಂಸಿಎಫ್ ಅಧಿಕಾರಿಗಳಾದ ಪಿ.ಜಿ. ರೈ, ಸುರೇಶ್ ಪಿ., ಡಾ.ಯೋಗೀಶ್, ಮೇಜರ್ ವರ್ಮಾ ಮತ್ತಿತರರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ನಾಗೇಶ್ ನಾಯಕ್ ವಂದಿಸಿ, ಸಹಶಿಕ್ಷಕಿ ಗೌರಿ ಕಾರ್ಯಕ್ರಮ ನಿರೂಪಿಸಿದರು.