ಕನ್ನಡ ವಾರ್ತೆಗಳು

ಅಗಸ್ಟ್ 23ರಂದು ದುಬ್ಯಾ ಬಿಸಿ‌ಎಫ್‌ನಿಂದ ಮಂಗಳೂರಿನಲ್ಲಿ ವಿದ್ಯಾರ್ಥಿ ವೇತನ ಹಾಗೂ ವೀಲ್‌ಚಯರ್ ವಿತರಣೆ

Pinterest LinkedIn Tumblr

BCF_Press_Meet_1

ಮಂಗಳೂರು,ಆಗಸ್ಟ್.20: ಆರ್ಥಿಕವಾಗಿ ಹಿಂದುಳಿದಿರುವ ಕೌಟುಂಬಿಕ ಹಿನ್ನಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿದುಬಾನ ಬ್ಯಾರೀಸ್‌ ಕಲ್ಚರಲ್ ಫೋರಂ (ಬಿಸಿ‌ಎಫ್) ಕಳೆದ ಹದಿಮೂರು ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿಯ ತನಕದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ‌ಅಗಸ್ಟ್ 23ರಂದು ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬ್ಯಾರೀಸ್‌ ಕಲ್ಚರಲ್ ಫೋರಂ, ದುಬ್ಯಾ ಇದರ ಅಧ್ಯಕ್ಷ ಡಾ. ಬಿ.ಕೆ. ಯೂಸುಫ್ ತಿಳಿಸಿದ್ದಾರೆ.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಲ್ಲಿ ಮಾತನಾಡಿದ ಅವರು, ಮದ್ಯಾಹ್ನ 1.30ಕ್ಕೆ ಬಿಸಿ‌ಎಫ್ ಶೈಕ್ಷಣಿಕ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ನಡೆಯಲಿದೆ. ‌ಅಲ್‌ಹಾಜ್‌ ಕೆ.ಎಸ್. ಆಟಕೋಯ ತಂಙಳ್‌ರವರು ದು‌ಅ ನೆರವೇರಿಸಲಿದ್ದಾರೆ. ಆರೋಗ್ಯ ಸಚಿವ ಯು.ಟಿ. ಖಾದರ್ ಕಾರ್ಯಕ್ರಮದ‌ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಡಾ. ಮೋಹನ್ ಆಳ್ವ, ಚೆಯರ್‌ಮ್ಯಾನ್ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದ್ರೆ, ಹಸನ್‌ದರ್‌ವೇಶ್, ಚೆಯರ್‌ಮ್ಯಾನ್‌ ದರ್‌ವೇಶ್‌ ಗ್ರೂಪ್‌ ಯು‌ಎ‌ಇ ,ಫಿಝ್ಝಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಹಾಗೂ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸೈಯ್ಯದ್ ಬ್ಯಾರಿರವರು ಭಾಗವಹಿಸಲಿದ್ದಾರೆ. ಸಮಾರಂಭದ‌ ಅಧ್ಯಕ್ಷತೆಯನ್ನು ಬಿಸಿ‌ಎಫ್ ಅಧ್ಯಕ್ಷಡಾ.ಬಿ.ಕೆ ಯೂಸುಫ್ ವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ‌ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 6 0 ಅಂಗವಿಕಲ ವ್ಯಕ್ತಿಗಳಿಗೆ ಗಾಲಿ ಕುರ್ಚಿಗಳನ್ನು‌ ಉಚಿತವಾಗಿ ವಿತರಿಸಲಾಗುವುದು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ.ರಮಾನಾಥರೈ, ಅರಣ್ಯ ಹಾಗೂ ಪರಿಸರ ಸಚಿವರು ಕರ್ನಾಟಕ ಸರಕಾರ. ವಿನಯಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರು ಕರ್ನಾಟಕ ಸರಕಾರ, ಮಂಗಳೂರು ಲೋಕಸಭಾ ಸದಸ್ಯರಾದ ನಳಿನ್ ಕುಮಾರ್‌ಕಟೀಲ್, ಮೊದೀನ್ ಬಾವ ಶಾಸಕರು ಮಂಗಳೂರು ಉತ್ತರ ವಲಯ, ಜೆ.ಆರ್ ಲೋಬೊ, ಶಾಸಕರು ಮಂಗಳೂರು ದಕ್ಷಿಣ ವಲಯ, ಕ್ಯಾ. ಗಣೇಶ್‌ ಕಾರ್ಣಿಕ್ ಎಮ್‌ಎಲ್‌ಸಿ ಕರ್ನಾಟಕ ಸರಕಾರ, ಐವನ್‌ ಡಿ ಸೋಜಾ ಎಮ್‌ಎಲ್‌ಸಿ ಕರ್ನಾಟಕ ಸರಕಾರ, ಎ.ಬಿ. ಇಬ್ರಾಹಿಂ ಜಿಲ್ಲಾಧಿಕಾರಿ ದ.ಕ. ಜಿಲ್ಲೆ, ಡಾ. ಎಮ್. ವಿಜಯಕುಮಾರ್ ಉಪಕುಲಪತಿಗಳು ಯೆನೆಪೋಯ ಯುನಿವರ್ಸಿಟಿ, ಡಾ. ತುಂಬೆ ಮೊದಿನ್ ಅಧ್ಯಕ್ಷರು ಗಲ್ಫ್ ಮೆಡಿಕಲ್‌ ಯುನಿವರ್ಸಿಟಿ, ಝಕರಿಯಾ ಜೋಕಟ್ಟೆ ಮುಝೈನ್‌ಗ್ರೂಪ್ ಸೌದಿ ಅರೇಬಿಯಾ, ಎಸ್.ಎಮ್. ಶರೀಫ್, ಖುಶಿ ಗ್ರೂಪ್‌ದುಬಾ, ಬಿ.ಎ. ಮೊದಿನ್ ಮಾಜಿ ಶಿಕ್ಷಣ ಸಚಿವರು ಕರ್ನಾಟಕ ಸರಕಾರ, ಇಬ್ರಾಹಿಮ್‌ ಕೋಡಿಜಾಲ್ ಮೂಡಾ‌ ಅಧ್ಯಕ್ಷರು, ಎಸ್.ಎಮ್.ರಶೀದ್ ಜಿಲ್ಲಾ ವಕ್ಫ್‌ಅಧ್ಯಕ್ಷರು, ಬಿ.ಮೊಹಮ್ಮದ್ ಹನೀಫ್‌ ಕರ್ನಾಟಕ ಬ್ಯಾರಿ ಸಾಹಿತ್ಯ‌ ಅಕಾಡೆಮಿ‌ ಅಧ್ಯಕ್ಷರು, ಅಬ್ದುಸ್ಸಲಾಮ್ ಪುತ್ತಿಗೆ, ಕೆ ಮೊಹಮ್ಮದ್ ಹಾರಿಸ್, ಅಬ್ದುಲ್‌ರವೂಫ್ ಪುತ್ತಿಗೆ, ಹಮೀದ್‌ಕಂದಕ್, ಮೊಹಮ್ಮದ್ ಬ್ಯಾರಿ, ಅಬೂಬಕ್ಕರ್ ಸಜಿಪ, ಎಮ್.ಬಿ. ನೂರ್ ಮುಹಮ್ಮದ್ ಮುಲ್ಕಿ ಮುಂತಾದವರು ಭಾಗವಹಿಸಲಿರುವರು

ಈ ಸಂದರ್ಭದಲ್ಲಿ ಜ| ಹಸನ್‌ದರ್‌ವೇಶ್ ಮತ್ತು‌ಎಸ್ ಎಂ ಶರೀಫ್‌ ಖುಶಿ ಗ್ರೂಪ್‌ರವರಿಗೆ ‌ಸಿಎಸ್‌ಆರ್ ವಿಶೇಷ ಪ್ರಶಸ್ತಿ ಹಾಗೂ ಕೆ.ಎಸ್. ಸಯೀದ್‌ ಕರ್ನಿರೆರವರಿಗೆ ಸ್ಟಾರ್‍ಸ್‌ಆಫ್ ಬ್ಯಾರೀಸ್ 2015 ಪ್ರಶಸ್ತಿಯನ್ನು ನೀಡಲಾಗುವುದು.ಪಿಯುಸಿ ಯ ಮೂರು ವಿಭಾಗಗಳಲ್ಲಿ ಜಿಲ್ಲೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ‌ ಇಬ್ಬರು ಕ್ರೀಡಾಪಟುಗಳನ್ನು ಅಭಿನಂದಿಸಲಾಗುವುದು ಎಂದು ಅವರು ವಿವರಿಸಿದರು.

Career Guidence Symposium :

ಇದೇ ದಿನ ಬೆಳಿಗ್ಗೆ 9.00 ಗಂಟೆಗೆ‌ Career Guidence Symposiumನಡೆಯಲಿದ್ದು. ಈ ಕಾರ್ಯಕ್ರಮವನ್ನು ಯು‌ಎ‌ಇ ಲಂಡನ್‌ ಅಮೇರಿಕನ್ ಸಿಟಿಕಾಲೇಜಿನ ನಿರ್ದೇಶಕರಾದ ಡಾ.ಪ್ರೊ. ಕಾಪು ಮೊಹಮ್ಮದ್‌ ನಡೆಸಲಿದ್ದಾರೆ, ಹಾಗೂ ಅಲ್ಪಸಂಖ್ಯಾತರಿಗೆ ದೊರಕುವ ಸ್ಕಾಲರ್‌ಶಿಪ್ ಬಗ್ಗೆ ಮಂಗಳೂರು ಟ್ಯಾಲೆಂಟ್‌ರಿಸರ್ಚ್ ಫೌಂಡೇಶನ್‌ನ‌ ಅಧ್ಯಕ್ಷ ರಿಯಾಝ್‌ ಅಹಮ್ಮದ್‌ ಮಾಹಿತಿ ನೀಡಲಿದ್ದಾರೆ ಎಂದು ಡಾ. ಬಿ.ಕೆ. ಯೂಸುಫ್ ತಿಳಿಸಿದರು..

ಪತ್ರಿಕಾಗೋಷ್ಠಿಯಲ್ಲಿ ಬಿಸಿ‌ಎಫ್ ಸ್ಕಾಲರ್‌ಶಿಫ್ ಕಮಿಟಿ, ದುಬ್ಯಾ ಇದರ ಅಧ್ಯಕ್ಷ ಉಸ್ಮಾನ್ ಮೂಳೂರು, ಬ್ಯಾರೀಸ್‌ಕಲ್ಚರಲ್ ಫೋರಂ, ದುಬ್ಯಾ ಇದರ ಉಪಾಧ್ಯಕ್ಷ ಎಮ್. ಇ. ಮೂಳೂರು, ಫೋರಂನ ಪೋಷಕರಾದ ಬಿ.ಎಂ. ಮಮ್ತಾಝ್ ಅಲಿ, ಕಾರ್ಯಕ್ರಮಸಂಯೋಜಕ ಬಿ.ಎ. ನಝೀರ್ ಮುಂತಾದವರು ಉಪಸ್ಥಿತರಿದ್ದರು.

Write A Comment