ಕಾರ್ಕಳ : ಅಕ್ರಮವಾಗಿ ಕೇರಳಕ್ಕೆ ಸಾಗಿಸಲು ಗುಡ್ಡವೊಂದರಲ್ಲಿ ಕಟ್ಟಿದ 35 ಜಾನುವಾರುಗಳನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರ ಸಹಕಾರದಿಂದ ಪೊಲೀಸರು ರಕ್ಷಿಸಿದ್ದಾರೆ.ಕೇರಳಕ್ಕೆ ಮಾರಟ ಮಾಡಲು ಈ ಎತ್ತುಗಳನ್ನು ಬೆಳ್ಮಣ್ ಬಳಿ ಕಳ್ಳಮುಲ್ಕುರ್ ಶಂಕರಕರಿಯ ಬಳಿಯ ಗುಡ್ಡದಲ್ಲಿ ಕಟ್ಟಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ರಾಹಿಮ್ (45), ಹಾಗೂ ಇಲಿಯಾಸ್ (40) ಎಂಬುವರನ್ನು ಬಂಧಿಸಲಾಗಿದೆ.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್‌ನ ಸಂಕಲಕರಿಯದಲ್ಲಿ ಇಬ್ರಾಹಿಂ ಎಂಬವರು ಅಕ್ರಮವಾಗಿ ಕೂಡಿ ಹಾಕಿದ್ದ ಕೋಣಗಳ ಅಡ್ಡೆಗೆ ದಾಳಿ ನಡೆಸಿದ ಕಾರ್ಕಳ-ಕಿನ್ನಿಗೋಳಿಯ ಹಿಂದೂ ಸಂಘಟನೆಗಳ ಕಾರ್ಯಕರ್ತರು 35 ಕೋಣಗಳನ್ನು ವಶಪಡಿಸಿ ಕಾರ್ಕಳ ಗ್ರಾಮಾಂತರ ಪೊಲೀಸರ ಮೂಲಕ ನೀಲಾವರ ಗೋ ಶಾಲೆಗೆ ತಲುಪಿಸಿದ್ದಾರೆ.
ಹಲವಾರು ವರ್ಷಗಳಿಂದ ಕೋಣಗಳ ವ್ಯಾಪಾರ ನಡೆಸುತ್ತಿರುವ ಇಬ್ರಾಹಿಂ ಪ್ರಸ್ತುತ ವಿವಿಧ ಊರುಗಳಿಂದ ಕೋಣಗಳನ್ನು ಕೂಡಿ ಹಾಕಿ ಕೇರಳದ ಕಸಾಯಿಖಾನೆಗೆ ರವಾನಿಸುತ್ತಿದ್ದನೆಂಬ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಸಂಕಲಕರಿಯದ ಅಡ್ಡೆಗೆ ದಾಳಿ ನಡೆಸಿ ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ನೀಡಿದರು. ಘಟನಾ ಸ್ಥಳಕ್ಕಾಗಮಿಸಿದ ಕಾರ್ಕಳ ಪೊಲೀಸ್ ಠಾಣಾಧಿಕಾರಿ ಮಹದೇವ ಶೆಟ್ಟಿ ಕೋಣಗಳನ್ನು ವಶಪಡಿಸಿಕೊಂಡರಲ್ಲದೆ ನ್ಯಾಯಾಲಯದ ಮೂಲಕ ಹಿಂದೂ ಸಂಘಟನೆಗಳ ನೆರವಿನಿಂದ ನೀಲಾವರ ಗೋಶಾಲೆಗೆ ಕಳುಹಿಸುವುದಾಗಿ ತಿಳಿಸಿದರು. ಅಕ್ರಮ ಕೋಣಗಳ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಇಬ್ರಾಹಿಂ ಹಾಗೂ ಇಲಿಯಾಸ್‌ನ ವಿರುದ್ಧ ಕೇಸು ದಾಖಲಿಸುವುದಾಗಿ ತಿಳಿಸಿದ್ದಾರೆ.
ಕಾರ್ಕಳ ತಾಲೂಕು ಬಜರಂಗದಳ ಸಂಚಾಲಕ ಮಹೇಶ್ ಬೈಲೂರು ಮಾತನಾಡಿ,ಹಿಂದೂ ರಾಷ್ಟ್ರದಲ್ಲಿ ಗೋವುಗಳು, ಕೋಣಗಳು ಸ್ವೇಚ್ಛೆಯಿಂದ ಬದುಕಬೇಕಾಗಿದ್ದು, ಅಕ್ರಮವಾಗಿ ಕೋಣ, ದನಗಳನ್ನು ಮಾರಾಟ ಮಾಡುವ ದ್ರೋಹಿಗಳನ್ನು ಬಂಧಿಸಿ ಶಿಕ್ಷಿಸಬೇಕೆಂದರಲ್ಲದೆ, ಮುಂದೆ ಇಂತಹ ಅಕ್ರಮ ಗೋಸಾಗಾಟ, ಕೋಣಗಳ ವ್ಯವಹಾರ ಕಂಡುಬಂದಲ್ಲಿ ಹಿಂದೂ ಸಂಘಟನೆಗಳು ಉಗ್ರ ಹೋರಾಟ ನಡೆಸಿಲಿವೆಯೆಂದು ಎಚ್ಚರಿಸಿದರು.
ಮುಂಡ್ಕೂರು ಪಂಚಾಯತ್‌ನ ಸ್ಥಳೀಯ ವಾರ್ಡ್ ಸದಸ್ಯ ಸೋಮನಾಥ ಪೂಜಾರಿ ಮಾತನಾಡಿ, ಪಂಚಾಯತ್‌ನಲ್ಲಿ ಈವರೆಗೆ ಈ ವ್ಯವಹಾರಕ್ಕೆ ಯಾವುದೇ ಪರಮಾನಿಗೆ ನೀಡಿಲ್ಲ, ಹಿಂದೆ ಈ ಭಾಗದಲ್ಲಿ ಕಾಂಗ್ರೆಸ್ ಬೆಂಬಲಿತರಿದ್ದರು. ಇದೀಗ ಬಿಜೆಪಿ ಸದಸ್ಯರಿದ್ದು ಈ ಬಗ್ಗೆ ಪರವಾನಿಗೆ ನಿರಾಕರಿಸುತ್ತೇವೆಂದರು.
ಬಜರಂಗದಳದ ಜಿಲ್ಲಾ ಸಂಚಾಲಕ ಸುನಿಲ್ ಕೆ.ಆರ್., ತಾಲೂಕು ಸಹಸಂಚಾಲಕ ಗುರುಪ್ರಸಾದ್ ಶೆಟ್ಟಿ, ಬೈಲೂರು ಪಂಚಾಯತ್ ಮಾಜಿ ಆಧ್ಯಕ್ಷ ಸುರೇಶ್ ಸಾಲ್ಯಾನ್, ಸುದೀಪ್ ಬೈಲೂರು, ಮಂಗಳೂರು ತಾಲೂಕು ಸಂಚಾಲಕ ಹಳೆಯಂಗಡಿಯ ಸನತ್ ಕುಮಾರ್, ಕಿನ್ನಿಗೋಳಿ ಬಜರಂಗದಳದ ಅಧ್ಯಕ್ಷ ಸೂರಜ್ ಕೊಂಡೇಲ, ಕಿನ್ನಿಗೋಳಿ ಜಾಗರಣಾ ವೇದಿಕೆಯ ಅಧ್ಯಕ್ಷ ನವೀನ್, ಬಜರಂಗ ದಳದ ಬೆಳ್ಮಣ್ ಸಂಚಾಲಕ ಉಮೇಶ್ ಹಾಗೂ ಕಾರ್ಯಕರ್ತರಿದ್ದರು.