ಮಂಗಳೂರು : ಕಲ್ಕೂರ ಪ್ರತಿಷ್ಠಾನದಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿಸಪ್ಟಂಬರ್ 5ನೇ ಶನಿವಾರದಂದು ಮಧ್ಯಾಹ್ನ 1 ಗಂಟೆಯಿಂದ ಪುಟಾಣಿಗಳಿಗಾಗಿ ರಾಷ್ಟ್ರಮಟ್ಟದ ಶ್ರೀ ಕೃಷ್ಣವೇಷ ಸ್ಪರ್ಧೆ ಜರಗಲಿದೆ. ನವಜಾತ ಶಿಶುವಿನಿಂದ ಮೊದಲ್ಗೊಂಡು 7ನೇ ತರಗತಿ ವರೆಗಿನ ಮಕ್ಕಳಿಗೆ ಒಟ್ಟು 25 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ಸಾಂಪ್ರದಾಯಿಕಉಡುಗೆಯೊಂದಿಗೆ ಶಂಖನಾದ, ಸಾಂಪ್ರದಾಯಿಕಉಡುಗೆಯೊಂದಿಗೆ ಶಂಖಉದ್ಘೋಷ, ದೇವಕಿ ಕೃಷ್ಣ, ಯಶೋದ ಕೃಷ್ಣ (ಮುಕ್ತ ವಿಭಾಗ), ವಸುದೇವ ಕೃಷ್ಣ, ರಾಧಾ ಕೃಷ್ಣ (ಜೋಡಿ), ಯಕ್ಷ ಕೃಷ್ಣ, ನಂದಗೋಕುಲ (ಸಮೂಹ ವಿಭಾಗ), ಬಾಲಕೃಷ್ಣ ರಸಪ್ರಶ್ನೆ, ಶ್ರೀಕೃಷ್ಣ ಜೀನವನಾಧರಿತರಸಪ್ರಶ್ನೆ, ಛಾಯಾ ಕೃಷ್ಣ ,ಶ್ರೀ ಕೃಷ್ಣವರ್ಣ ವೈಭವ ಏಕಕಾಲದಲ್ಲಿ ೮ ವೇದಿಕೆಗಳಲ್ಲಿ ಈ ಮಕ್ಕಳ ಉತ್ಸವವನ್ನುಆಯೋಜಿಸಲಾಗಿದ್ದು, ಈ ಬಾರಿ ಶ್ರೀ ಕೃಷ್ಣ ವರ್ಣ ವೈಭವ ಮುಕ್ತ ಚಿತ್ರಕಲಾ ಸ್ಪರ್ಧೆಯನ್ನು(ಒಟ್ಟು 6 ವಿಭಾಗದಲ್ಲಿ) ಸೇರಿಸಿಕೊಳ್ಳಲಾಗಿದೆ.
ಪ್ರವೇಶ ಉಚಿತವಾಗಿದ್ದು ಪ್ರವೇಶ ಪತ್ರಗಳನ್ನು ದಯಾನಂದ ಕಟೀಲ್ ಶಾರದಾ ವಿದ್ಯಾಲಯ- 9448545578, ಸುಧಾಕರರಾವ್ ಪೇಜಾವರ 9448546051, ಗೋಕುಲ್ ಕದ್ರಿ ಕೆ. 9448549456, ಶ್ರೀ ಕೃಷ್ಣ ಜನ್ಮಮಹೋತ್ಸವ ಸಮಿತಿ ಮಲ್ಲಿಕಟ್ಟೆ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳು ಫಳ್ನೀರು,ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಹಾಗೂ ಕಲ್ಕೂರ ಪ್ರತಿಷ್ಠಾನ ಶ್ರೀಕೃಷ್ಣ ಕಾಂಪ್ಲೆಕ್ಸ್ ಕೊಡಿಯಾಲ್‌ಬೈಲ್ ಇಲ್ಲಿಂದ ಪಡೆದುಕೊಳ್ಳ ಬಹುದು ಎಂದು ಪ್ರತಿಷ್ಠಾನದ ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ 9845083736 ಅಥವಾ E mail : kalkuraadvt@gmail.com ಅನ್ನು ಸಂಪರ್ಕಿಸಲು ಕೋರಲಾಗಿದೆ.