ಮಂಗಳೂರು,ಆಗಸ್ಟ್.18 : ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಒಂದು ದಿನದ ಸ್ಕೌಟಿಂಗ್ ಮತ್ತು ಗೈಡಿಂಗ್ ಕಾರ್ಯಾಗಾರವನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಉದ್ಘಾಟಿಸಿ,ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೇತೃತ್ವದಲ್ಲಿ ರಾಷ್ಟ್ರಮಟ್ಟದ 18ನೇ ಜಾಂಬೂರಿ ಉತ್ಸವನ್ನು ಮಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಆ. 24ರಂದು ಮುಖ್ಯಮಂತ್ರಿ ಅವರೊಡನೆ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ವಿದ್ಯಾರ್ಥಿಗಳಲ್ಲಿ ಜೀವನಮೌಲ್ಯ ತುಂಬುವುದರೊಂದಿಗೆ, ದೇಶಪ್ರೇಮವನ್ನು ಮೂಡಿಸಬೇಕು. ಅನುಕಂಪ, ಪ್ರೀತಿ ವಿಶ್ವಾಸ ಪ್ರತಿಯೊಬ್ಬರಲ್ಲಿಯೂ ಇರಬೇಕು. ಇಲ್ಲವಾದಲ್ಲಿ ಸೇವಾ ಮನೋಭಾವ ಬೆಳೆಯಲು ಸಾಧ್ಯವಿಲ್ಲ. ಜೀವನದಲ್ಲಿ ಶಿಸ್ತು, ಮಾನವ ಧರ್ಮವನ್ನು ಕಲಿಸುವ ಕೆಲಸವನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಾಡುತ್ತಿದೆ ಎಂದು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು.
ಶಾಸಕ ಜೆ.ಆರ್. ಲೋಬೊ, ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ವಾಸುದೇವ ಬೋಳೂರು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಎನ್.ಜಿ. ಮೋಹನ್, ಪ್ರಮುಖರಾದ ಸಿಪ್ರಿಯನ್ ಮೊಂತೇರೊ ಮೊದಲಾದವರು ಉಪಸ್ಥಿತರಿದ್ದರು