ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು,ಆಗಸ್ಟ್.18: ಸೀಮಿತ ಪ್ರಕ್ಷಕ ವರ್ಗದ ನಡುವೆಯೂ ಬೆಳೆಯುತ್ತಿರುವ ತುಳು ಚಿತ್ರರಂಗ ಇದೀಗ ಹೊಸತನದ ಸಿನಿಮಾಗಳಿಗೂ ತೆರೆದುಕೊಳ್ಳುತ್ತಿದ್ದು, ಅದರ ಫಲವೇ ಐಸ್‌ಕ್ರೀಮ್ ಚಿತ್ರ. ಕೋಸ್ಟಲ್ ವುಡ್‌ನಲ್ಲಿ ಹೊಸಬರ ಹೊಸತನದೊಂದಿಗೆ ಬಿಡುಗಡೆಗೆ ಸಿದ್ದವಾಗಿದೆ ಐಸ್‌ಕ್ರೀಮ್ ಸಿನಿಮಾ. ಆಗಸ್ಟ್ 22 ರಂದು ಮಂಗಳೂರಿನಲ್ಲಿ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯಲಿದ್ದು, ಸಪ್ಟೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಚಿತ್ರದ ನಿರ್ದೇಶಕ ಹಾಗೂ ಕಥೆ ಚಿತ್ರಕಥೆ, ಸಾಹಿತ್ಯ ಬರೆದ ಪ್ರೀತಮ್ ಸಾಗರ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ಯಾಮಿಲಿ, ಲವ್‌ಸ್ಟೋರಿಯನ್ನು ಮೀರಿರುವ ಈ ಸಿನಿಮಾದಲ್ಲಿ ಹಾರರ್…, ಯಾಕ್ಷನ್, ಕಾಮಿಡಿ, ಲವ್ ಎಲ್ಲವನ್ನು ಹದವಾಗಿ ಬೆರೆಸಲಾಗಿದೆ. ಸ್ನೇಹಿತರ ಜೊತೆ ಛಾಲೆಂಜ್ ಸ್ವೀಕರಿಸಿದ ನಾಯಕ ಹೊಸ ಸಾಹಸಕ್ಕೆ ಕೈ ಹಾಕ್ತಾನೆ, ಮುಂದೇನಾಗುತ್ತೇ ಅನ್ನೋದೆ ಸಿನಿಮಾದ ಸಸ್ಪೆನ್ಸ್, ಸಿನಿಮಾ ಪತ್ರಕರ್ತನಾಗಿರುವ ವೇಣೂಗೋಪಾಲ್ ಶೆಟ್ಟಿ ಮತ್ತು ಮಂಗಳೂರಿನ ಪ್ರೀತಮ್ ಸಾಗರ್ ಮೊದಲ ಬಾರಿ ಈ ಚಿತ್ರವನ್ನು ನಿರ್ದೇಶನ ಮಾಡಿರುತ್ತಾರೆ ಎಂದು ಹೇಳಿದರು.
ಇಡೀ ಸಿನಿಮಾದಲ್ಲಿ ಕರಾವಳಿ ಫೇಮಸ್ ತಿನಿಸು ಐಸ್‌ಕ್ರೀಮ್ ಕೂಡ ಮುಖ್ಯ ಪಾತ್ರ ವಹಿಸಿದೆ. ಈ ಕಾರಣಕ್ಕೆ ಚಿತ್ರಕ್ಕೆ ಐಸ್‌ಕ್ರೀಮ್ ಅನ್ನುವ ಟೈಟಲ್ ಬಳಸಲಾಗಿದೆ. ಬೇರೆಯದ್ದೇ ಸ್ತರದಲ್ಲಿ ಗುರುತಿಸಿಕೊಳ್ಳುವುದರಿಂದ ಈ ಚಿತ್ರಕ್ಕೆ “ಟೇಸ್ಟ್‌ದ ಗೊಬ್ಬು ನನ ಸುರು ” ಅನ್ನುವ ಆಡಿಬರಹ ಇದೆ. ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ತೆಲುಗಿನ ಐಸ್‌ಕ್ರೀಮ್ ಚಿತ್ರಕ್ಕೂ ತುಳುವಿನ ಈ ಚಿತ್ರಕ್ಕೂ ಯಾವೂದೇ ಸಂಬಂಧ ಇಲ್ಲ. ಈ ಚಿತ್ರದ ಕಥೆ – ಚಿತ್ರಕಥೆ – ಸಾಹಿತ್ಯ ಪ್ರೀತಮ್ ಸಾಗರ್ ಅವರದ್ದು,
ಚಿತ್ರದ ನಾಯಕನಾಗಿ ಮಂಗಳೂರಿನ ಲವ್ ಲೀ ಬಾಯ್ (ಆರ್ ಜೆ) ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಹಾಗೂ ಚಿತ್ರದ ನಾಯಕಿ ಪಾತ್ರದಲ್ಲಿ ಮಾಡೆಲ್ ಮೂಲಕ ಚಿರಪರಿಚಿತಳಾಗಿ ಸುವರ್ಣ ಚಾನೇಲ್‌ನ “ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪ್” ಜನಪ್ರಿಯ ರಿಯಾಲಿಟಿ ಷೋ ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಂತಹ ಬೆಡಗಿ ( Beauty Queen) ಅನ್ವಿತ ರಾವ್ ಅಭಿನಯಿಸುತ್ತಿದ್ದಾರೆ.
ತುಳು ಭಾಷೆಯಲ್ಲಿ ಇದು ಅನ್ವಿತ ಅವರ ಪ್ರಥಮ ಚಿತ್ರ. ಆದರೆ ಕನ್ನಡದಲ್ಲಿ ಇವರು ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಪ್ರಮುಖ ಪಾತ್ರದಲ್ಲಿ ನಟಿಸಿರುವಂತಹ “ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ” ಚಿತ್ರ ಈಗಾಗಲೇ ಮುಕ್ತಾಯಗೊಂಡಿದೆ. ಹಾಗೂ ಇವರು ನಟಿಸಿರುವ ಇನ್ನೊಂದು ಕನ್ನಡ ಚಿತ್ರ “ಶಿರಾಡಿ ಘಾಟ್”ನ ಚಿತ್ರೀಕರಣ ಈಗಾಗಲೇ ಮುಕ್ತಾಯ ಹಂತದಲ್ಲಿದ್ದು, ಈ ಎರಡೂ ಚಿತ್ರಗಳು ಸದ್ಯದಲ್ಲೇ ತೆರೆಗೆ ಬರಲು ರೆಡಿಯಾಗಿದೆ.
ವಿಶೇಷ ಪಾತ್ರದಲ್ಲಿ ದಿನೇಶ್ ಅತ್ತಾವರ ನಟಿಸಿದ್ದಾರೆ, ಇನ್ನುಳಿದಂತೆ ತುಳು ರಂಗಭೂಮಿ ಮತ್ತು ಚಿತ್ರರಂಗದ ಖ್ಯಾತ ಕಲಾವಿದರಾದ ಚೇತನ್ ರೈ ಮಾಣಿ, ರೋಹಿನಿ ಜಗರಾಂ ಮೊದಲಾದವರು ತಾರಗಣದಲ್ಲಿದ್ದಾರೆ ಎಂದು ವಿವರಿಸಿದರು.
ಚಿತ್ರದ ನಿರ್ಮಾಣ ನವಿತ ಜೈನ್ ಮತ್ತು ಪ್ರೀತಮ್ ಸಾಗರ್, ರಾಜೇಶ್ ಹಳೆಯಂಗಡಿ ಸಿನಿಮಾಕ್ಕೆ ಕ್ಯಾಮರೆ ಹಿಡಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತ ಚಿತ್ರಿಕರಿಸಲಾಗಿದೆ, ಮದನ್ -ಮೋಹನ್ ಸಂಗೀತ ಮತ್ತು ದಿವಾನ್ ಗಿರಿಧರ್ ಹಿನ್ನೆಲೆ ಸಂಗೀತ ನೀಡಿದ್ದಾರೆ .
ಚಿತ್ರದ ನಿರ್ದೇಶಕ ವೇಣುಗೋಪಾಲ ಶೆಟ್ಟಿ, ನಾಯಕ ನಟ ಆರ್.ಜೆ ರೂಪೇಶ್ ಶೆಟ್ಟಿ, ನಾಯಕಿ ಅನ್ವಿತ ರಾವ್ ಛಾಯಾಗ್ರಾಹಕ ರಾಜೇಶ್ ಹಳೆಯಂಗಡಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.