ಕನ್ನಡ ವಾರ್ತೆಗಳು

ಕುಂದಾಪುರದಲ್ಲಿ 69 ನೇ ಸ್ವಾತಂತ್ರ್ಯೋತ್ಸವ ಆಚರಣೆ; ಕೊಂಚ ವರುಣನ ಅಡ್ಡಿಯ ನಡುವೆ ಸಂಭ್ರಮದ ವಾತಾವರಣ

Pinterest LinkedIn Tumblr

ಕುಂದಾಪುರ: ದೇಶವಾಸಿಗಳ ಅಭಿವೃದ್ದಿಯ ಚಿಂತನೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳು ನಮ್ಮ ಸಮಾಜದ ಕಟ್ಟಕಡೆಯ ಜನರಿಗೂ ತಲುಪಬೇಕು ಎನ್ನುವುದೆ ಸ್ವಾತಂತ್ರ್ಯದ ಪರಮ ಗುರಿಯಾಗಿದೆ. ಸರ್ಕಾರದ ಜನಪರ ಯೋಜನೆಗಳನ್ನು ಜನರು ಸದುಪಯೋಗ ಪಡಿಸಿಕೊಂಡಾಗ ಮಾತ್ರ ಯೋಜನೆಯ ಜಾರಿಯ ಉದ್ದೇಶಗಳು ಸಾರ್ಥಕತೆ ಪಡೆಯಲು ಸಾಧ್ಯ ಎಂದು ಕುಂದಾಪುರದ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ 69 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿದ ಬಳಿಕ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

Independense Day_Celebration_Kndpr (11) Independense Day_Celebration_Kndpr (10) Independense Day_Celebration_Kndpr (12) Independense Day_Celebration_Kndpr (9)

Independense Day_Celebration_Kndpr (8) Independense Day_Celebration_Kndpr (7) Independense Day_Celebration_Kndpr (31) Independense Day_Celebration_Kndpr (30) Independense Day_Celebration_Kndpr (29) Independense Day_Celebration_Kndpr (28) Independense Day_Celebration_Kndpr (27) Independense Day_Celebration_Kndpr (26) Independense Day_Celebration_Kndpr (25) Independense Day_Celebration_Kndpr (24) Independense Day_Celebration_Kndpr (18) Independense Day_Celebration_Kndpr (17) Independense Day_Celebration_Kndpr (16) Independense Day_Celebration_Kndpr (15) Independense Day_Celebration_Kndpr (14) Independense Day_Celebration_Kndpr (13) Independense Day_Celebration_Kndpr (32) Independense Day_Celebration_Kndpr (33) Independense Day_Celebration_Kndpr (6) Independense Day_Celebration_Kndpr (5) Independense Day_Celebration_Kndpr (4) Independense Day_Celebration_Kndpr (1) Independense Day_Celebration_Kndpr Independense Day_Celebration_Kndpr (3) Independense Day_Celebration_Kndpr (2)

ದೇಶಕ್ಕೆ ಸ್ವಾತಂತ್ರ್ಯ ದೊರೆಕಿಸಿ ಕೊಡುವಲ್ಲಿ ಅನೇಕ ಹಿರಿಯರ ಶೃಮ, ಬಲಿದಾನ ಹಾಗೂ ತ್ಯಾಗಗಳಿವೆ. ನಮ್ಮ ಪೂರ್ವಿಕರ ತ್ಯಾಗ ಹಾಗೂ ಬಲಿದಾನಗಳು ನಮಗೆ ಪ್ರಾತ: ಸ್ಮರಣೀಯವಾಗಬೇಕು. ರಾಷ್ಟ್ರದ ಉಜ್ವಲ ಭವಿಷ್ಯವನ್ನು ಕಾಯುವ ಹಾಗೂ ಅಭಿವೃದ್ದಿ ಪಥದಲ್ಲಿ ಸಾಗುವ ಸಂಕಲ್ಪಗಳು ನಮ್ಮಲ್ಲಿ ಶಾಶ್ವತವಾಗಿರಬೇಕು ಎಂದು ಹೇಳಿದ ಅವರು ಜನರ ಅನೂಕೂಲಕ್ಕಾಗಿ ಕುಂದಾಪುರದಲ್ಲಿ ನಿರ್ಮಾಂಗೊಂಡಿರುವ ಮಿನಿ ವಿಧಾನಸೌಧದಲ್ಲಿ ಸರ್ಕಾರದ ಹೆಚ್ಚಿನ ಇಲಾಖೆಗಳು ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ಬಿಲ್ಲವ, ಪುರಸಭಾ ಅಧ್ಯಕ್ಷೆ ಕಲಾವತಿ ಯು.ಎಸ್, ಪೊಲೀಸ್ ಉಪವಿಭಾಗದ ಡಿವೈ‌ಎಸ್‌ಪಿ ಎಂ.ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಶ್ರೀಯಾನ್,

ಇದೆ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹಾಲಾಡಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸವಿತಾ ಕೊರಗ ಅವರನ್ನು ಗೌರವಿಸಿ ಲ್ಯಾಪ್ ಟಾಪ್ ವಿತರಿಸಲಾಯಿತು.

ಕುಂದಾಪುರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಾಸೀರ್ ಹುಸೇನ್ ನೇತ್ರತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಪೊಲೀಸ್, ಗೃಹ ರಕ್ಷಕ ದಳ, ಅಗ್ನಿ ಶಾಮಕ ಘಟಕ, ಎನ್‌ಸಿಸಿ, ಭಾರತ್ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು. ಪುರಸಭಾ ವ್ಯಾಪ್ತಿಯ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆಯ ಗಾಯನ ನಡೆಯಿತು.

ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯಕ್ ಸ್ವಾಗತಿಸಿದರು, ಪ್ರಭಾರ ವಲಯ ಶಿಕ್ಷಣಾಧಿಕಾರಿ ಶೋಭಾ ಎಸ್ ಶೆಟ್ಟಿ ವಂದನೆ ಸಲ್ಲಿಸಿದರು, ಕ್ರೀಡಾ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು.

Write A Comment