ಕನ್ನಡ ವಾರ್ತೆಗಳು

ಭೂತ ಚೇಷ್ಠೆಯೆಂಬ ನಂಬಿಕೆ ನಡುವೆಯೇ ಅಮಾಸೆಬೈಲು ಹಾಸ್ಟೆಲಿನಲ್ಲಿ ನಡೆದ ಅಘೋರಾಸ್ತ್ರ ಹೋಮ

Pinterest LinkedIn Tumblr

ಕುಂದಾಪುರ: ಅದೊಂದು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಸುಸಜ್ಜಿತ ಹಾಸ್ಟೆಲ್.. ಇತ್ತೀಚೆಗೆ ಒಂದು ತಿಂಗಳ ಹಿಂದೆಯಷ್ಟೆ ಈ ಅಮಾಸೆಬೈಲು ಹಾಸ್ಟೆಲಿನಲ್ಲಿ ವಿದ್ಯಾರ್ಥಿನಿಯರು ಉಳಿಯೋಕು ಭಯಪಡ್ತಾ ಇದ್ರು, ಕತ್ತಲಾಯ್ತು ಅಂದ್ರೇ ನಡಗುತ್ತಿದ್ದ ವಿದ್ಯಾರ್ಥಿನಿಯರು ಬಳಿಕ ಯಾವುದೇ ಅಂಜಿಕೆಯಿಲ್ಲದೇ ಇದ್ದರು. ಆದ್ರೂ ಕೂಡ ನಿನ್ನೆ (ಶುಕ್ರವಾರ) ರಾತ್ರಿ ಈ ಅಮಾಸೆಬೈಲು ಹಾಸ್ಟೆಲಿನಲ್ಲಿ ಹೋಮ ಹವನ ಭರ್ಜರಿಯಾಗಿಯೇ ನಡಿತು.

ನಕ್ಸಲ್ ಪೀಡಿತ ಪ್ರದೇಶವೆಂದೇ ಹಣೆಪಟ್ಟಿ ಹೊತ್ತುಕೊಂಡ ಅಮಾಸೆಬೈಲು ಗ್ರಾಮದಲ್ಲಿರೋ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಸುಸಜ್ಜಿತ ಹಾಸ್ಟೆಲ್‌ನಲ್ಲಿ ನಡೆದ ಹೋಮ ಹವನದ ಪರಿಯಿದು. ಭೂತದ ಚೇಷ್ಟೆ ಇರುವ ಬಗ್ಗೆ ಒಂದೆರಡು ಬಾರೀ ಇಲ್ಲಿನ ವಿದ್ಯಾರ್ಥಿನಿಯರು ಸಮೂಹ ಸನ್ನಿ ರೀತಿಯಲ್ಲಿ ಆತಂಕಪಟ್ಟ ಹಿನ್ನೆಲೆ ವಿದ್ಯಾರ್ಥಿನಿಯರ ಕುಟುಂಬಿಕರು ತುಂಬಾನೇ ಭಯಪಟ್ಟಿದ್ದರು, ಈ ಹಿನ್ನೆಲೆ ವಿದ್ಯಾರ್ಥಿನಿಯರ ಪೋಷಕರೆಲ್ಲರು ಒಂದಾಗಿ ಮಕ್ಕಳ ಭಯ ನಿವಾರಿಸಲು ಹೋಮ ಮಾಡಿಸಿಯೇಬಿಟ್ಟರು.

Amasebailu_Hastel_Homa (4) Amasebailu_Hastel_Homa (2) Amasebailu_Hastel_Homa Amasebailu_Hastel_Homa (10) Amasebailu_Hastel_Homa (8) Amasebailu_Hastel_Homa (12) Amasebailu_Hastel_Homa (11) Amasebailu_Hastel_Homa (7) Amasebailu_Hastel_Homa (9) Amasebailu_Hastel_Homa (13) Amasebailu_Hastel_Homa (5) Amasebailu_Hastel_Homa (3) Amasebailu_Hastel_Homa (6) Amasebailu_Hastel_Homa (1)

ವಿದ್ಯಾರ್ಥಿನಿಯರ ಪೋಷಕರಿಂದ ಹಾಸಟ್ಟೆಲಿನಲ್ಲಿ ಆಯೋಜಿಸಲ್ಪಟ್ಟ ಹೋಮದಲ್ಲಿ ಎಲ್ಲಾ ಪೋಕರು ಹಾಜರಿದ್ದರು. ಸಂಹಜೆ 6 ಗಂಟೆ ಸುಮಾರಿಗೆ ಆರಂಭಗೊಂಡ ಈ ಹೋಮವು ರಾತ್ರಿ 9 ಗಂಟೆವರೆಗೂ ನಡೆಯಿತು. ಅಘೋರಾಸ್ತ್ರ ಹೋಮ ಅಂದ್ರೇ ಉಚ್ಚಾಟನಾ ಹೋಮ ಹಾಗೂ ರಕ್ಷಾ ಸುದರ್ಶನಾ ಹೋಮವು ಹಾಲಾಡಿ ಮೂಲದ ಜೋಯಿಷರ ಸಮ್ಮುಖದಲ್ಲಿ ಆರು ಮಂದಿ ನೇತೃತ್ವದಲ್ಲಿ ನಡೆಯಿತು.

ಈ ಹಿಂದೆ ಕೆಲವು ಘಟನೆಗಳು ನಡೆದಿದ್ದ ಅಮಾಸೆಬೈಲಿನ ಈ ಸುಸಜ್ಜಿತ ಹಾಸ್ಟೆಲಿನಲ್ಲಿ ಎಡಮೊಗೆ, ತೊಂಬಟ್ಟು, ಹೆಂಗವಳ್ಳಿ, ರಟ್ಟಾಡಿ, ಕೆಳಸುಂಕ, ಜಡ್ಡಿನಗದ್ದೆ, ಹಲವರಿಮಠ ಮೊದಲಾದ ಗ್ರಾಮೀಣ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಅಮಾಸೆಬೈಲಿನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಬರುವ ೩೪ ವಿದ್ಯಾರ್ಥಿನಿಯರು ಈ ಹಾಸ್ಟೆಲನ್ನು ಆಶ್ರಯಕಾಗಿ ಅವಲಂಭಿಸಿದ್ದಾರೆ.

ಅದೆನೇ ಇರಲಿ ಮಕ್ಕಳು ಇನ್ನಾದರೂ ಯಾವುದೇ ಭಯವಿಲ್ಲದೇ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿಯೆಂಬುದೇ ಈ ಹೋಮ ನಡೆಸಿದ್ವರ ಉದ್ದೇಶವಾಗಿದೆಯಾದರೂ ಇದು ಕೇವಲ ಮೂಡನಂಬಿಕೆಯಷ್ಟೇ ಎನ್ನುವುದು ಪ್ರಜ್ಞಾವಂತರು ಹೇಳುವ ಮಾತುಗಳಾಗಿದೆ.

Write A Comment