ಉಳ್ಳಾಲ,ಆಗಸ್ಟ್.11: ಮಸೀದಿ ಮದರಸಗಳು ಪ್ರಸಕ್ತ ಕಾಲದಲ್ಲಿ ಬೆಳೆಯುತ್ತಿದ್ದು, ಧಾರ್ಮಿಕ ವಿಶ್ವಾಸ ಮತ್ತು ನಂಬಿಕೆ ಇರುವವರಿಗೆ ಸಮೀಪದಲ್ಲೇ ಮಸೀದಿ ಇರಬೇಕೆಂಬುದನ್ನು ಬಯಸುತ್ತಿದ್ದಾರೆ. ಈ ಕಾರಣದಿಂದಲೇ ಮುಸ್ಲಿಮರು ಅಲ್ಲಲ್ಲಿ ಮಸೀದಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದರಿಂದ ಮುಸ್ಲಿಮರಿಗೆ ಧಾರ್ಮಿರ ಅರಿವು ಬೆಳೆಯುತ್ತದೆ ಎಂದು ಹುಸೈನ್ ಸಅದಿ ಕೆಸಿಕರೋಡ್ ಹೇಳಿದರು.
ಅವರು ಕಿನ್ಯಾ ಮೀಂಪ್ರಿ ಬದ್ರಿಯಾ ನಗರದಲ್ಲಿ ಸೋಮವಾರ ನಡೆದ ನೂತನ ಮಸೀದಿ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.ಮಸೀದಿ ಪ್ರಸಕ್ತ ಕಾಲದಲ್ಲಿ ಅಗತ್ಯವಾಗಿರುವುದರಿಂದ ತಾವೆಲ್ಲರೂ ಇದಕ್ಕೆಲ್ಲ ಸಹಕಾರ ನೀಡಬೇಕೆಂದು ಕರೆ ನೀಡಿದರು.
ಬದ್ರಿಯಾ ನಗರದ ನೂತನ ಮಸೀದಿಗೆ ಶಿಲಾನ್ಯಾಸವನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಯ್ಯದ್ ಜಲಾಲುದ್ದೀನ್ ಸಅದಿ ಅಲ್ ಅಲ್ ಬುಖಾರಿ ಪಸೋಟ್ ನೆರವೇರಿಸಿದರು. ಸಯ್ಯದ್ ಕೆ.ಎಸ್. ಆಲವಿ ತಂಙಳ್ ದುವಾ ನೆರವೇರಿಸಿದರು.
ಕೆಎಂಜೆಸಿ ದ.ಕ. ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ,ಕಿನ್ಯ ಜಮಾಅತ್ ಅಧ್ಯಕ್ಷ ಸಾಧುಕುಂಞಿ ಮಾಸ್ಟರ್, ಉಪಾಧ್ಯಕ್ಷ ಕೆ.ಎಸ್. ಅಹ್ಮದ್ ಕುಂಞಿ ಹಾಜಿ, ಎಂ.ಎ. ಬಶೀರ್ ಅಹ್ಮದ್ ಕಿನ್ಯ, ಕಾರ್ಯದರ್ಶೀ ಅಬೂಸಾಲಿ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ, ಅಶ್ರಫ್ ಕಿನ್ಯ, ಸಿದ್ದೀಕ್ ಕಲ್ಲಾಂಡ, ಹಮೀದ್ ಮೀಂಪ್ರಿ, ಪಂಚಾಯತ್ ಸದಸ್ಯರಾದ ಕುಂಞಿ ಬಾವ ಹಾಜಿ ಕಲ್ಕಟ್ಟ, ಅಬ್ದುಲ್ ಖಾದರ್, ಅಶ್ರಫ್ ಕೆ.ಪಿ., ಮುಹಮ್ಮದಲಿ ಸಖಾಫಿ, ಕೆ.ಎಸ್.ಹಾರೂನ್ ಅಹ್ಸನಿ, ಕೆ.ಎಂ.ಅಬೂಬಕರ್ ಸಿದ್ಧೀಕ್ ಮೋಂಟುಗೋಳಿ ಮೊದಲಾದವರು ಉಪಸ್ಥಿತರಿದ್ದರು.ಕೆ.ಎಸ್. ಇಸ್ಮಾಯಿಲ್ ಸಅದಿ ಕಿನ್ಯ ಅತಿಥಿಗಳನ್ನು ಸ್ವಾಗತಿಸಿದರು.