ಕನ್ನಡ ವಾರ್ತೆಗಳು

ಗಂಗೊಳ್ಳಿ ಅಳಿವೆಯಲ್ಲಿ ಮುಳುಗಿದ್ದ ಬೋಟು ದಡಕ್ಕೆ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಅಳಿವೆಯಲ್ಲಿ ಭಾನುವಾರ ಬೆಳಿಗ್ಗೆ ಮೀನುಗಾರಿಕೆಂದು ತೆರಳುವ ವೇಳೆ ಮುಳುಗಿದ್ದ ಮೀನುಗಾರಿಕಾ ಬೋಟನ್ನು ಸೋಮವಾರ ಮಧ್ಯಾಹ್ನದ ಸುಮಾರಿಗೆ ದಡಕ್ಕೆ ಎಳೆದು ತರಲಾಗಿದೆ.

Gangolli_Boat_Issue (4) Gangolli_Boat_Issue (5) Gangolli_Boat_Issue (2) Gangolli_Boat_Issue (1) Gangolli_Boat_Issue (3) Gangolli_Boat_Issue

ಘಟನೆ ವಿವರ: ಗಂಗೊಳ್ಳಿಯ ಸುಶೀಲಾ ರಾಘವೇಂದ್ರ ಖಾರ್ವಿ ಎನ್ನುವವರಿಗೆ ಸೇರಿದ ‘ಮಂಜುನಾಥ ಕೃಪಾ’ ಹೆಸರಿನ ಬೋಟು ಇದಾಗಿದ್ದು ಭಾನುವಾರ ಬೆಳಿಗ್ಗೆ ಮೀನುಗಾರಿಕೆಗೆಂದು ಗಂಗೊಳ್ಳಿಯಿಂದ ಹೊರಟ ಸಂದರ್ಭ ಗಂಗೊಳ್ಳಿಯ ಅಳಿವೆ ಸಮೀಪ ಬೋಟು ಮುಳುಗಿತ್ತು. ಇದೇ ವೇಳೆ ನೀರಿನಲ್ಲಿ ಬಿದ್ದ ಬೋಟು ಚಾಲಕ ಪಾಂಡುರಂಗ ಸೇರಿದಂತೆ ಪ್ರಭಾಕರ, ಈಶ್ವರ್ ಮತ್ತು ಮಂಜುನಾಥ ಎನ್ನುವವರನ್ನು ಹಿಂಬದಿಯಿಂದ ಬಂದ ಶ್ರೀ ಶಾರದಾ, ದುರ್ಗಾಂಜನೇಯ, ಚಕ್ರೇಶ್ವರಿ, ಗಜಲಕ್ಷ್ಮೀ, ಲಕ್ಷ್ಮೀ ಮಾರುತಿ ಬೋಟಿನವರೌ ರಕ್ಷಿಸಿದ್ದಾರೆ. ಬೋಟಿನಲ್ಲಿದ್ದ ನಾಲ್ವರನ್ನು ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಬೋಟು ಸಂಪೂರ್ಣ ಮುಳುಗಡೆಯಾಗಿದ್ದು ಅಂದಾಜು ಹತ್ತು ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಸ್ಥಳೀಯ ಮೀನುಗಾರರು ಈ ಬೋಟ್‌ನ್ನು ಮೇಲಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದರು.

Write A Comment