ಕನ್ನಡ ವಾರ್ತೆಗಳು

ಕಚೇರಿ ಹೊಂದಿರದೆ ಹಣಕಾಸು ವ್ಯವಹಾರ ನಡೆಸುವವರ ಪರವಾನಿಗೆ ರದ್ದುಪಡಿಸಲು ಡಿಸಿ ಸೂಚನೆ

Pinterest LinkedIn Tumblr

Dc_nonlicence_shop_1

ಮಂಗಳೂರು,ಆಗಸ್ಟ್.04: ದ.ಕ. ಜಿಲ್ಲೆಯಲ್ಲಿ ಕಚೇರಿಗಳನ್ನು ಹೊಂದಿರದ ಹಣಕಾಸು ಸಂಸ್ಥೆಗಳ ನೋಂದಣಿಯನ್ನು ಒಂದು ವಾರದೊಳಗೆ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಾಣಿಜ್ಯ ಬ್ಯಾಂಕ್‌ಗಳು, ಗ್ರಾಮೀಣ ಬ್ಯಾಂಕುಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಜತೆಗಿನ ಸಭೆಯಲ್ಲಿ ಈ ಸೂಚನೆ ನೀಡಿದರು.

ಬ್ಯಾಂಕಿಂಗ್ ನಿಯಮದ ಪ್ರಕಾರ ಶೇ.16ಕ್ಕಿಂತ ಹೆಚ್ಚಿನ ಬಡ್ಡಿಯಲ್ಲಿ ಸಾಲ ನೀಡುತ್ತಿರುವ ಹಣಕಾಸು ಸಂಸ್ಥೆಗಳು ಅಥವಾ ವ್ಯಕ್ತಿಗಳ ಕುರಿತಂತೆಯೂ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ಅವರು ಈ ಸಂದರ್ಭ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 320ರಷ್ಟು ಹಣಕಾಸು ಒದಗಿಸುವ ಸಂಸ್ಥೆಗಳಿದ್ದು, ನೋಂದಣಿಯಾಗದ ಸಂಸ್ಥೆಗಳ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಕ್ರಮ ಕೈಗ್ಳೊಲಾಗುತ್ತಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ಸಭೆಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ 1.20 ಲಕ್ಷದಷ್ಟು ರೈತರಿದ್ದು, ಸುಮಾರು 90,000ದಷ್ಟು ರೈತರು ಸಹಕಾರಿ ಸಂಘಗಳ ಮೂಲಕವೇ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಸಹಕಾರ ಸಂಘಗಳಲ್ಲಿ ಅರ್ಜಿ ಸಲ್ಲಿಸಿದ ರೈತ ರಲ್ಲಿ ಅಸಮರ್ಪಕ ದಾಖಲೆಗಳ ಹೊರತುಪಡಿಸಿ ಎಲ್ಲರಿಗೂ ಸಾಲ ಒದಗಿಸಲಾಗಿದೆ. ಒಂದು ವೇಳೆ ಅರ್ಜಿ ಸಲ್ಲಿಸಿಯೂ ಸಾಲ ದೊರಕದಿರುವ ರೈತರು ದೂರು ನೀಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಿ.ಕೆ. ಸಲೀಂ ತಿಳಿಸಿದರು.

Dc_nonlicence_shop_2

ಸಭೆಯಲ್ಲಿ ಮುತ್ತೋಟ್ ಪಿನ್‌ಕಾರ್ಪ್, ಮುತ್ತೋಟ್ ಫೈನಾನ್ಸ್, ಮಣಪ್ಪುರಂ ಮೊದಲಾದ ಸಂಸ್ಥೆಗಳ ಹಣಕಾಸು ವ್ಯವಹಾರಗಳ ಬಗ್ಗೆ ಸಂಸ್ಥೆಗಳ ಪ್ರತಿನಿಧಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದುಕೊಂಡರು. ಈ ಎಲ್ಲಾ ಹಣಕಾಸು ಸಂಸ್ಥೆ ಗಳು ರಿಸರ್ವ್ ಬ್ಯಾಂಕ್‌ನ ಮಾರ್ಗ ಸೂಚಿಯಂತೆ ಕಾರ್ಯನಿರ್ವಹಿಸುವುದಾಗಿ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರಲ್ಲದೆ, ಮುಖ್ಯವಾಗಿ ಚಿನ್ನದ ಅಡವಿನ ಮೇರೆಗೆ ವೈಯಕ್ತಿಕ ಸಾಲವನ್ನಷ್ಟೆ ನೀಡಲಾಗುತ್ತಿದ್ದು, ಯಾವುದೇ ಕೃಷಿ ಸಾಲವನ್ನು ನೀಡುತ್ತಿಲ್ಲ ಎಂದು ವಿವರಿಸಿದರು.

ತರಕಾರಿ, ಧವಸಧಾನ್ಯ ಹಾಗೂ ಇತರ ಆಹಾರ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಏರಿಳಿತಗಳ ಕುರಿತಂತೆ ಎಪಿಎಂಸಿ ಅಧಿಕಾರಿಗಳ ಜತೆ ಜಿಲ್ಲಾಧಿಕಾರಿ ಚರ್ಚಿಸಿದರು. ಮಾರುಕಟ್ಟೆ ದರಗಳ ಬಗ್ಗೆ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Dc_nonlicence_shop_3

ಸಹಕಾರಿ ಸಂಘಗಳಲ್ಲಿ ಸಿಬ್ಬಂದಿ ಕೊರತೆ
ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ದ.ಕ. ಜಿಲ್ಲಾ ಸಹಕಾರ ಸಂಘಗಳಿಗೆ ಮಂಜೂರಾಗಿರುವ ಒಟ್ಟು 57 ಹುದ್ದೆಗಳಲ್ಲಿ ಪ್ರಸ್ತುತ 13 ಹುದ್ದೆಗಳು ಮಾತ್ರವೇ ಭರ್ತಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 830 ಸಹಕಾರಿ ಸೊಸೈಟಿಗಳು ನೋಂದಾವಣೆಯಾಗಿದ್ದು, ಪ್ರಸ್ತುತ 790 ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಈ ಎಲ್ಲಾ ಸೊಸೈಟಿಗಳ ಮೇಲುಸ್ತುವಾರಿಯನ್ನು ವಹಿಸಬೇಕಾಗಿದೆ ಎಂದು ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಸಿಪಿ ಶಾಂತರಾಜು ಮತ್ತಿತರರು ಉಪಸ್ಥಿತರಿದ್ದರು.

Write A Comment