ಕನ್ನಡ ವಾರ್ತೆಗಳು

ಶುಕ್ರವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆ 4 ರೂ.ಗೆ ಇಳಿಕೆ.

Pinterest LinkedIn Tumblr

petrol

ಮಂಗಳೂರು, ಜುಲೈ 31: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲದ ಬೆಲೆ ಗಣನೀಯವಾಗಿ ಕುಸಿದ ಪರಿಣಾಮ ಲೀಟರ್ ಪೆಟ್ರೋಲ್ 4.ರೂ  ಕಡಿತವಾಗಲಿದೆ. ತೈಲ ಕಂಪನಿಗಲು ಒಪ್ಪಿಕೊಂಡರೆ ಹೊಸ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇಳಿಕೆ ಅಧಿಕೃತವಾದರೆ ಜುಲೈ ತಿಂಗಳಿನಲ್ಲಿ ಮೂರನೇ ಬಾರಿಗೆ ದರ ಇಳಿಕೆಯಾದಂತಾಗುತ್ತದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಂಪನಿಗಳು ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿಯಿದೆ. ಜುಲೈ 16 ರಂದು ಪೆಟ್ರೋಲ್ ದರವನ್ನು 2 ರು. ಇಳಿಕೆ ಮಾಡಲಾಗಿತ್ತು.

ದರ ಇಳಿಕೆಕೆ ಕಾರಣಗಳೇನು : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗಣನೀಯ ಇಳಿಕೆ ಸಾಧಿಸಿದೆ. ಡೀಸೆಲ್ ಬ್ಯಾರಲ್ ಗೆ 62 ಡಾಲರ್ ಗೆ ಇಳಿದಿದ್ದರೆ ಪೆಟ್ರೋಲ್ ಬ್ಯಾರಲ್ ಗೆ 70 ಡಾಲರ್ ನೀಡಿದರೆ ಸಾಕು ಎಂಬಂತಾಗಿದೆ. ರುಪಾಯಿ ಮೌಲ್ಯ ಸ್ಥಿರತೆ ಕಾಯ್ದುಕೊಂಡಿದ್ದು ಡಾಲರ್ ಎದುರು 63 ರು. ನಲ್ಲಿ ವ್ಯವಹಾರ ನಡೆಸಿದೆ. ಇರಾನ್‌ನಲ್ಲಿನ ಪರಮಾಣು ಬಿಕ್ಕಟ್ಟು ಅಂತ್ಯಗೊಂಡಿರುವುದು ದರ ಇಳಿಕೆ ಮೇಲೆ ನೇರ ಪರಿಣಾಮ ಉಂಟುಮಾಡಿದೆ.

Write A Comment