ಮೂಲ್ಕಿ,ಜುಲೈ.31 :ಸಾರ್ವಜನಿಕ ಜನಜೀವನದ ನೈಜ ಜೀವನಾಡಿ ಆಗಿರುವ ಮಾಧ್ಯಮವು ತನ್ನ ಜವಬ್ದಾರಿಯನ್ನು ಎಂದಿಗೂ ಮರೆಯಬಾರದು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರಕ್ಕೂ ಕಿವಿ ಹಿಂಡುವ ಕೆಲಸ ಮಾಡಲು ಅದಕ್ಕೆ ಅವಕಾಶ ಇದೆ. ಗ್ರಾಮೀಣ ಭಾಗದ ಪತ್ರಕರ್ತರು ಸಹ ತಮ್ಮ ವೃತ್ತಿ ನಿಷ್ಠೆಯಿಂದ ಪತ್ರಿಕೆಗಳು ಬೆಳಗಿದೆ ಎಂದು ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.ಅವರು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಶುಕ್ರವಾರ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮೂಲ್ಕಿ ಪ್ರೆಸ್ ಕ್ಲಬ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮೂಲ್ಕಿ ಪ್ರೆಸ್ ಕ್ಲಬ್‌ನ ನೂತನ ಅಧ್ಯಕ್ಷ ನರೇಂದ್ರ ಕೆರೆಕಾಡು ಅಧ್ಯಕ್ಷತೆಯನ್ನು ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಸಂಸ್ಥೆಯನ್ನು ಉದ್ಘಾಟಿಸಿ ಮೂಲ್ಕಿಯ ಅಭಿವೃದ್ಧಿಯಲ್ಲಿ ಪತ್ರಕರ್ತರ ಕೊಡುಗೆಯೂ ಅಪಾರವಾಗಿದೆ. ಸಂಘಟಿತರಾಗಿ ತಮ್ಮ ಸೇವೆಯನ್ನು ಕರ್ತವ್ಯ ಎಂದು ಭಾವಿಸಿದಲ್ಲಿ ಪರಿಸರದ ಸಹಕಾರ ಇನ್ನಷ್ಟು ಸಿಗುತ್ತದೆ ಎಂದು ಹೇಳಿದರು. ಪತ್ರಿಕಾ ಸಂಗ್ರಾಹಕ ಉಮೇಶ್ ರವ್ ಎಕ್ಕಾರುರವರನ್ನು ಸನ್ಮಾನಿಸಲಾಯಿತು.
ಮೂಲ್ಕಿಯ ಪ್ರತಿಕಾ ವಿತರಕ ಗಂಗಾಧರ ಶೆಟ್ಟಿಯವರಿಗೆ ಜಯಕಿರಣ ಪತ್ರಿಕಾ ಸಂಸ್ಥೆಯ ಪ್ರಕಾಶ್ ಪಾಂಡೇಶ್ವರ್ ಹಾಗೂ ಮೂಲ್ಕಿ ಪ್ರೆಸ್ ಕ್ಲಬ್ ವತಿಯಿಂದ ನಗದು ಸಹಿತ ಪಡಿತರವನ್ನು ನೀಡಲಾಯಿತು.
ಮೂಲ್ಕಿ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯ್ಕ್, ಮಂಗಳೂರು ಉತ್ತರ ವಲಯದ ಇನ್ಸ್‌ಪೆಕ್ಟರ್ ಮಂಜುನಾಥ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಜಿ.ಪಂ ಸದಸ್ಯರಾದ ಈಶ್ವರ ಕಟೀಲು, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ಚಂದ್ರ ಪಿ. ಸಾಲ್ಯಾನ್, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಎಚ್.ವಸಂತ ಬೆರ್ನಾಡ್, ಯುವವಾಹಿನಿಯ ಸತೀಶ್ ಕುಮಾರ್, ಪರಮಾನಂದ ಸಾಲ್ಯಾನ್, ಶಶೀಂದ್ರ ಎಮ್ ಸಾಲ್ಯಾನ್, ನವೀನ್ ಕುಮಾರ್ ಕಟೀಲು. ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪತ್ರಿಕಾ ಛಾಯಾಗ್ರಾಹಕರ ಛಾಯಾಚಿತ್ರ ಪ್ರದರ್ಶನ, ಉಮೇಶ್‌ರಾವ್ ಎಕ್ಕಾರುರವರ ಅಮೂಲ್ಯವಾದ ಪತ್ರಿಕಾ ಪ್ರದರ್ಶನ, ನಿಟ್ಟೆ ವಿದ್ಯಾ ಸಂಸ್ಥೆಯ ತೋಕೂರು ತಪೋವನ ಡಾ| ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾದ್ಯಮ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿಗಳಿಂದ ಬಾಲಕಾರ್ಮಿಕ ಪದ್ಥತಿ ನಿಷೇಧಿಸುವ ಜಾಗೃತಿಯ ನೃತ್ಯ ರೂಪಕ ಪ್ರದರ್ಶನ,
ಪತ್ರಕರ್ತ ಪ್ರಕಾಶ್ ಸುವರ್ಣ ಕಟಪಾಡಿ ನಿರ್ದೇಶನದ ಪ್ರಶಸ್ತಿ ವಿಜೇತ ಕಿರುಚಿತ್ರ ಪ್ರದರ್ಶನ ನಡೆಯಿತು. ಕಾರ್ಯದರ್ಶಿ ಭಾಗ್ಯವಾನ್‌ಸನಿಲ್ ವಂದಿಸಿದರು.
ನರೇಂದ್ರ ಕೆರೆಕಾಡು_