ಕನ್ನಡ ವಾರ್ತೆಗಳು

ಭೂತವಿಲ್ಲ..ಪಿಶಾಚಿಯಿಲ್ಲ… ಅಮಾಸೆಬೈಲು ಹಾಸ್ಟೆಲಿನಲ್ಲಿ ರಾತ್ರಿ ವೇಳೆ ಶಬ್ದ..ಕಿಟಕಿ ಮೇಲೆ ಕೈ ಆಕೃತಿ; ಕಿಡಿಗೇಡಿಗಳ ಕೃತ್ಯದ ಶಂಕೆ

Pinterest LinkedIn Tumblr

ಕಿಡಿಗೇಡಿಗಳ ಕೃತ್ಯದ ಶಂಕೆಯ ನಡುವೆ ವಿದ್ಯಾರ್ಥಿನಿಯರು ಕಂಗಾಲು

ಕುಂದಾಪುರ: ಅದೊಂದು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಸುಸಜ್ಜಿತ ಹಾಸ್ಟೆಲ್..ಇಷ್ಟರವರೆಗೂ ಇಲ್ಲೆಲ್ಲವೂ ಒಳ್ಳೆದಾಗಿಯೇ ಇತ್ತು. ಆದ್ರೇ ಒಂದೆರಡು ವಾರಗಳಿಂದ ಈ ಹಾಸ್ಟೆಲಿನಲ್ಲಿ ವಿದ್ಯಾರ್ಥಿನಿಯರು ಉಳಿಯೋಕು ಭಯಪಡ್ತಾ ಇದಾರೆ, ಕತ್ತಲಾಯ್ತು ಅಂದ್ರೇ ಇಲ್ಲಿನ ವಿದ್ಯರ್ಥಿಗಳಿಕೆ ನಡುಕ ಆರಂಭವಾಗುತ್ತಂತೆ. ಅಷ್ಟಕ್ಕೂ ಈ ಹಾಸ್ಟೆಲಿನಲ್ಲಿರೋ ಸಮಸ್ಯೆಯಾದ್ರೂ ಏನು ಎಂಬ ಕುರಿತ ವರದಿಯಿಲ್ಲಿದೆ.

ಇದು ನಕ್ಸಲ್ ಪೀಡಿತ ಪ್ರದೇಶವೆಂದೇ ಹಣೆಪಟ್ಟಿ ಹೊತ್ತುಕೊಂಡ ಅಮಾಸೆಬೈಲು ಗ್ರಾಮದಲ್ಲಿರೋ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಸುಸಜ್ಜಿತ ಹಾಸ್ಟೆಲ್. ಈ ಹಾಸ್ಟೆಲಿನಲ್ಲಿ ಎಡಮೊಗೆ, ತೊಂಬಟ್ಟು, ಹೆಂಗವಳ್ಳಿ, ರಟ್ಟಾಡಿ, ಕೆಳಸುಂಕ, ಜಡ್ಡಿನಗದ್ದೆ, ಹಲವರಿಮಠ ಮೊದಲಾದ ಗ್ರಾಮೀಣ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಅಮಾಸೆಬೈಲಿನ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಬರುವ ೩೪ ವಿದ್ಯಾರ್ಥಿನಿಯರು ಈ ಹಾಸ್ಟೆಲನ್ನು ಆಶ್ರಯಕಾಗಿ ಅವಲಂಭಿಸಿದ್ದಾರೆ. ಈ ಮೊದಲು ಅಮಾಸೆಬೈಲು ಪೇಟೆಯಲ್ಲಿಯೇ ಬಾಡಿಗೆ ಕಟ್ಟದಲ್ಲಿದ್ದ ಈ ಹಾಸ್ಟೇಲ್ ಮೊನ್ನೆಮೊನ್ನೆ ತಾನೇ ಅಂದರೇ ಇದೇ ಎಪ್ರಿಲ್ ತಿಂಗಳಿನಲ್ಲಿ ಉಸ್ತುವಾರಿ ಸಚಿವರ ಕೈಯಲ್ಲಿ ಉದ್ಘಾಟನೆಗೊಂಡು ಈ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ೩೪ ವಿದ್ಯಾರ್ಥಿನಿಯರಿರುವ ಈ ಹಾಸ್ಟೆಲಿನಲ್ಲಿ ಓರ್ವ ಅಡುಗೆಯವರು, ಓರ್ವ ಸಹಾಯಕಿ ಓರ್ವ ವಾಚಮನ್ ಇದ್ದಾರೆ. ಶಂಕರನಾರಾಯಣ ಹಾಸ್ಟೆಲಿನ ವಾರ್ಡನ್ ಈ ಹಾಸ್ಟೇಲಿಗೂ ವಾರ್ಡನ್ ಆಗಿದ್ದಾರೆ.

Amasebailu_Hostel_Issue (8) Amasebailu_Hostel_Issue (14) Amasebailu_Hostel_Issue (1) Amasebailu_Hostel_Issue (5) Amasebailu_Hostel_Issue (2) Amasebailu_Hostel_Issue (7) Amasebailu_Hostel_Issue (6) Amasebailu_Hostel_Issue (3) Amasebailu_Hostel_Issue (9) Amasebailu_Hostel_Issue (11) Amasebailu_Hostel_Issue (12) Amasebailu_Hostel_Issue (10) Amasebailu_Hostel_Issue (13) Amasebailu_Hostel_Issue (4) Amasebailu_Hostel_Issue (15)

ಅಷ್ಟಕ್ಕೂ ಇಲ್ಲಿ ವಿದ್ಯಾರ್ಥಿನಿಯರು ಭಯಪಡೋದ್ಯಾಕೆಂದರೇ ಕಳೆದ ಒಂದೆರಡು ವಾರಗಳಿಂದ ಹಾಸ್ಟೆಲಿನ ಕಿಟಕಿ ಗಾಜಿನ ಮೇಲೆ ಕೈಗಳ ಆಕೃತಿ ತೋರುವುದು, ಯಾರೋ ಓಡಾಡಿದ ಅನುಭವಗಳು, ಕಾಲಿಂಗ್ ಬೆಲ್ ಕೂಗುವುದು, ವಿದ್ಯುತ್ ಆನ್-ಆಫ್ ಆಗುವ ಅನುಭವಗಳು ಮಕ್ಕಳನ್ನು ಕಾಡುತ್ತಿದೆ. ಇದು ಕಿಡಿಗೇಡಿಗಳ ಕೃತ್ಯವೆಂಬ ಬಗ್ಗೆಯೂ ಮಕ್ಕಳಿಗೆ ಅನುಮಾನ ಹುಟ್ಟುತ್ತಿರುವಾಗಲೇ ಕಳೆದ ಗುರುವಾರ ರಾತ್ರಿ ಭಜನೆ ಬಳಿಕ ವಿದ್ಯಾರ್ಥಿಗಳು ಅಡುಗೆ ಸಹಾಯಕಿ ಸೇರಿದಂತೆ ಮೂರ್ನಾಲ್ಕು ಜನರು ಅಸ್ವಸ್ಥರಾಗಿ ಬಿದ್ದಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು.

ಸುತ್ತಲೂ ಕಾಡು ಪ್ರದೇಶದ ಮದ್ಯೆಯಿರುವ ಹಾಸ್ಟೆಲ್ ಸುತ್ತಮುತ್ತ ಬೇಲಿಯ ರಕ್ಷಣೆಯಿದ್ದರೂ ಕೂಡ ಕಿಡಿಗೇಡಿಗಳು ಯಾರದಾರೂ ದುಷ್ಕ್ರತ್ಯಕ್ಕಾಗಿ ಹಾಸ್ಟೆಲ್ ಸಮೀಪ ಬಂದು ರಾತ್ರಿ ವೇಳೆ ಸಮಸ್ಯೆ ನೀಡುತ್ತಿರಬಹುದೇ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಇನ್ನು ಇದೇ ಭಯದಲ್ಲಿದ್ದ ಮಕ್ಕಳು ಕಳೆದ ಗುರುವಾರ ಪ್ರಾರ್ಥನೆ ಬಳಿಕ ಅಸ್ವಸ್ಥರಾಗಿರಬಹುದೆಂಬ ಸಾಧ್ಯತೆಯ ಬಗ್ಗೆಯೂ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಉದಯ ಗಾಂವ್ಕರ್ ಅಭಿಪ್ರಾಯಪಡುತ್ತಾರೆ.

ಜೂನಿನಿಂದ ಈ ಹಾಸ್ಟೆಲಿನಲ್ಲಿ ವಿದ್ಯಾರ್ಥಿನಿಯರು ಆಶ್ರಯಿಸಲು ಆರಂಭಿಸಿದ್ದು ಜುಲಯಿ ಮೊದಲ ವಾರದಿಂದ ಕೆಲವು ಸಮಸ್ಯೆಗಳಾಗುತ್ತಲಿದೆ. ಇದಕ್ಕೆ ಜಾಗದ ಸಮಸ್ಯೆಯೋ ಅಥವಾ ಅಗೋಚರ ಶಕ್ತಿಯ ಸಮಸ್ಯೆಯಿದೆ ಅದನ್ನು ಫೋಷಕರೇ ಸೇರಿ ಹೋಮ-ಹವನ ಮಾಡಿಕೊಂಡು ಪರಿಹಾರ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ವಿದ್ಯಾರ್ಥಿನಿಯ ಫೋಷಕರೋರ್ವರು.

ಮೇಲ್ನೋಟಕ್ಕೆ ಇದು ಪೊಲೀಗಳ ಕಾಟವೆಂಬ ಮಾತುಗಳು ಪ್ರಜ್ಞಾವಂತ ನಾಗರಿಕರಿಂದ ಕೇಳಿಬರುತ್ತಲಿದೆ. ಮಂಗಳವಾರದಿಂದ ಶಾಲೆಗೆ ಮರಳಿ ಹಾಸ್ಟೆಲಿಗೂ ಮರಳಿದ ವಿದ್ಯಾರ್ಥಿಯರು ಭಯಮುಕ್ತರಾಗಿ ಧೈರ್ಯದಿಂದಲೇ ಇದ್ದಾರೆ. ಇವರ ಧೈರ್ಯ ಇಮ್ಮಡಿಗೊಳಿಸುವ ಕೆಲಸ ಶಿಕ್ಷಣ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ಆಗಬೇಕಿದೆ. ಪೊಲಿಸರು ಈ ಭಾಗದ ಕಿಡಿಗೇಡಿಗಳ ಮೇಲೆ ಕಣ್ಣಿಡಬೇಕಿದೆ. ಫೋಷಕರು ಕೂಡ ಮೂಡನಂಬಿಕೆಗಳನ್ನು ಬದಿಗೊತ್ತಿ ಮಕ್ಕಳಲ್ಲಿ ಸ್ಥೈರ್ಯ ತುಂಬಬೇಕಿದೆ.
ವರದಿ- ಯೋಗೀಶ್ ಕುಂಭಾಸಿ

Write A Comment