ಕನ್ನಡ ವಾರ್ತೆಗಳು

ವಿದ್ಯಾರ್ಥಿಗಳೇ ನಿಮ್ಮ ಬಾಳಿಗೆ ನೀವೆ ಶಿಲ್ಪಿಗಳು; ನ್ಯಾಯವಾದಿ ರವಿಕಿರಣ ಮುರ್ಡೇಶ್ವರ

Pinterest LinkedIn Tumblr

ಕುಂದಾಪುರ: ನಿಮ್ಮ ಬಾಳಿಗೆ ನೀವೆ ಶಿಲ್ಪಿಗಳು, ಶಾಲೆಯಲ್ಲಿರುವ ಕುಂದು ಕೊರತೆಗಳನ್ನು ಪರಿಹರಿಸಲಿಕ್ಕಾಗಿ ಈ ವಿದ್ಯಾರ್ಥಿ ಮಂತ್ರಿ ಮಂಡಲವನ್ನು ರಚಿಸಲಾಗಿದೆ, ವಿದ್ಯಾರ್ಥಿಗಳು ಸಾಧನೆ ಹಾದಿಯಲ್ಲಿ ಸಾಗಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಅವರು ಹೇಳಿದರು.

ಕುಂದಾಪುರ ಸಂತ ಮೇರಿಸ್ ಜೂ. ಕಾಲೇಜು ವಿಧ್ಯಾರ್ಥಿ ಮಂತ್ರಿ ಮಂಡಳದ ಉದ್ಘಾಟನೆ ಕಾರ್ಯವನ್ನು ಉದ್ಘಾಟಿಸಿದ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

St meris_Collge_Programme St meris_Collge_Programme (2) St meris_Collge_Programme (1)

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ವಲಯ ಪ್ರಧಾನ ಧರ್ಮಗುರು ವ|ಅನೀಲ್ ಡಿಸೋಜಾ ಇವರು ಶಾಲಾ ವಿಧ್ಯಾರ್ಥಿ ಮಂಡಳಿಯಲ್ಲಿ ಆರಿಸಿ ಬಂದವರಿಗೆ ಪ್ರಮಾಣ ವಚನ ಬೋಧಿಸಿ, ಅಭಿನಂದಿಸುತ್ತಾ ನೀವು ಶಾಲಾ ನೀವು ವಿಧ್ಯಾರ್ಥಿ ಮುಖಂಡರಾಗಿ ಆರಿಸಿ ಬಂದಿದ್ದಿರಿ, ಹಾಗಾಗಿ ಇತರರಿಗೆ ನೀವು ಆದರ್ಶವಾಗಿರ ಬೇಕು, ಎಲ್ಲಾ ವಿಧ್ಯಾರ್ಥಿಗಳು ಶಿಸ್ತಿನ ಜೊತೆ ಉತ್ತಮ ವಿಧ್ಯಾಭಾಸ ಕಲಿತು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಸಂದೇಶ ನೀಡಿದರು.

ಕಾಲೇಜು ಪ್ರಿನ್ಸಿಪಾಲರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್, ಹೆತ್ತವರಿಗೆ ಮತ್ತು ವಿಧ್ಯಾರ್ಥಿಗಳಿಗೆ ಕೆಲವು ಸಲಹೆ ಸೂಚನೆ ನೀಡಿ ಹಿತನುಡಿದರು ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜು ವಿಧ್ಯಾರ್ಥಿನಿಯರ ಪ್ರಾರ್ಥನೆ ಮತ್ತು ಸ್ವಾಗತ ಗೀತೆಯ ಮೂಲಕ ಆರಂಭಿಸಲಾಯಿತು. ಕಾರ್ಯಕ್ರಮದ ಸಂಯೋಜಕಿ ಅಧ್ಯಾಪಕಿ ಉಷಾ ಸ್ವಾಗತತಿದರು.

ವಿಧ್ಯಾರ್ಥಿ ಮಂಡಳಿಯ ಅಧ್ಯಕ್ಷಾನಾಗಿ ಭರಾತ್ವಾಜ್, ಕ್ರಿಸ್ಸಾನ್ ಡಾಯಸ್, ವಿಕ್ಟರ್ ಡಿ’ಕೋಸ್ತಾ, ನಿಮಾಂತ್ ಶೇಖ್, ಪ್ರಸನ್ನಾ, ಪ್ರೀಮ ಆಲ್ಮೇಡಾ, ಜಿಸ್ಣು ಜಯಚಂದ್ರನ್, ಅನ್ನಿಕಾ ಡಿ’ಸೋಜ, ಜೊಯ್ಸನ್ ಕ್ವಾಡರ್ಸ್, ಕೆರೊಲ್ ಡಿಸಿಲ್ವಾ, ರಚಿತಾ ಪೈ, ಅಸ್ಮಿತಾ ಕೋತ್, ಶೀಫಾ, ಸಿಮ್ರಾನ್ ಮತ್ತು ಶ್ಯಾಬಿಯಾನ್ ಅಲಿಯಾಸ್ ಇವರು ಮಂಡಳಿಯಲ್ಲಿ ವಿವಿಧ ರೀತಿಯ ಸದಸ್ಯರಾಗಿ ಆರಿಸಿ ಬಂದರು.

ಕಾರ್ಯದರ್ಶಿಯಾಗಿ ಆರಿಸಿ ಬಂದ ಆಶಾ ನಾಯರ್ ಧನ್ಯವಾದವನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ವಿಧ್ಯಾರ್ಥಿನಿ ರೀಯಾ ನಿರ್ವಹಿಸಿದಳು

Write A Comment