ಕನ್ನಡ ವಾರ್ತೆಗಳು

ಗಂಗೊಳ್ಳಿ: ಕಂದಾಯ ನೌಕರನ (ಉಗ್ರಾಣಿ) ವಿರುದ್ಧ ಲೈಂಗಿಕ ಕಿರುಕುಳ ಆರೋಪ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಗ್ರಾಮದ ಕಂದಾಯ ಇಲಾಖೆಯ ಗ್ರಾಮ ಸಹಾಯಕನ (ಉಗ್ರಾಣಿ) ವಿರುದ್ಧ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ.

ಉಮೇಶಕುಮಾರ್ (38) ಎಂಬ ವ್ಯಕ್ತಿ ಗ್ರಾಮ ಕರಣಿಕರ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಬರುವ ಮಹಿಳೆಯರಿಗೆ ಕಿರುಕುಳ ಕೊಡುತ್ತಿದ್ದ ಎಂದು ಕಿರುಕುಳಕ್ಕೊಳಗಾದ ಓರ್ವ ಮಹಿಳೆ ಸೋಮವಾರ ಗಂಗೊಳ್ಳಿ ಠಾಣೆಗೆ ದೂರು ನೀಡಿದರು.

Gangolli_Women_Case (1) Gangolli_Women_Case (3) Gangolli_Women_Case (4)

Gangolli_Women_Case (2) Gangolli_Women_Case Gangolli_Women_Case (7) Gangolli_Women_Case (9) Gangolli_Women_Case (6)

Gangolli_Women_Case (8) Gangolli_Women_Case (5)

ಘಟನೆ ವಿವರ: ಕಳೆದ ಕೆಲವು ತಿಂಗಳುಗಳಿಂದ ಕಂದಾಯ ಇಲಾಖೆಗೆ ಬರುವ ಮಹಿಳೆಯರು ಹಾಗೂ ಯುವತಿಯಯರೊಂದಿಗೆ ಉಮೇಶ್ ಅಶ್ಲೀಲವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಹೀಗೆಯೇ ವಾರಗಳ ಹಿಂದೆ ಗಂಗೊಳ್ಳಿಯ ಮಹಿಳೆಯೊಬ್ಬರು ಗ್ರಾಮಕರಣಿಕರ ಕಛೇರಿಗೆ ರೇಷನ್‌ಕಾರ್ಡ್ ಮತ್ತು ಜಾತಿ ಆಧಾಯ ಪ್ರಮಾಣ ಪತ್ರ ಮಾಡಿಸಲು ಬಂದಿದ್ದು ಇದೇ ವೇಳೆ ಗ್ರಾಮಕರಣಿಕರು (ವಿ.ಎ.) ಕಛೇರಿಯಲ್ಲಿ ಇಲ್ಲದ ಸಂದರ್ಭವನ್ನು ಉಪಯೋಗಿಸಿಕೊಂಡ ಈತ ಮಹಿಳೆಯ ಬಳಿ ಬಂದು ನಿನ್ನ ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಹೇಳುತ್ತಾ ಆಕೆಯನ್ನು ಎಳೆದಾಡಲು ಬಂದಿದ್ದಲ್ಲದೇ ಆಕೆಯ ಬಳಿ ಅಶ್ಲೀಲವಾಗಿ ವರ್ತಿಸಿ ಅಸಭ್ಯ ಮಾತುಗಳನ್ನು ಆಡಿದ್ದನು ಎನ್ನಲಾಗಿದೆ, ಇಷ್ಟೇ ಅಲ್ಲದೇ ಕಛೇರಿಯಲ್ಲಿ ಮಧ್ಯಾಹ್ನ ಮೂರು ಗಂಟೆ ಬಳಿಕ ಯಾರು ಇರುವುದಿಲ್ಲ, ನೀನು ಬಾ ಎನ್ನುತ್ತಾ ತನ್ನ ಮೊಬೈಲ್‌ನಲ್ಲಿದ್ದ ಅಶ್ಲೀಲ ಚಿತ್ರಗಳನ್ನು ತೋರಿಸಿದ್ದಾನೆ. ಅಲ್ಲದೇ ಆಕೆಯ ಮೊಬೈಲ್ ನಂಬರ್ ಕೇಳಿದ್ದು, ಮನೆಗೂ ಬರುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ನೀಡಲು ಮರ್‍ಯಾದೆ ವಿಚಾರದಲ್ಲಿ ಅಂಜಿದ ಆ ಮಹಿಳೆ ಭಾನುವಾರ ಮನೆಯವರ ಬಳಿ ನಡೆದ ಘಟನೆ ಬಗ್ಗೆ ತಿಳಿಸಿದ್ದು ಸಾರ್ವಜನಿಕರ ಸಹಕಾರದೊಂದಿಗೆ ಸೋಮವಾರ ಗಂಗೊಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಇದೇ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೊಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ ಅವರು, ಈ ವ್ಯಕ್ತಿಗೆ ಇಂತಹಾ ಅಸಭ್ಯಚಾದ ಚಾಳಿ ಹಲವು ಕಾಲದಿಂದ ಇದೆ. ಇಷ್ಟರ ತನಕ ಜನರು ಮರ್ಯಾದೆಗೆ ಅಂಜಿ ದೂರು ನೀಡಲು ಮುಂದೆ ಬಂದಿರಲಿಲ್ಲ. ಆದರೆ ಈಚೆಗೆ ಅವನ ವರ್ತನೆ ಮಿತಿಮೀರಿದ್ದು ಎಲ್ಲರೂ ಒಡಗೂಡಿ ಬಂದು ಆತನ ಬಗ್ಗೆ ದೂರು ನೀಡಿದ್ದೇವೆ ಎಂದರು.

ಆರೋಪಿ ಉಮೇಶಕುಮಾರ್ ಹೆಚ್ಚಾಗಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಯರಿಗೆ ಮತ್ತು ವಿಧವೆಯರಿಗೆ ಕೀಟಲೆ ನಡೆಸುತ್ತಿದ್ದ ಎಂದು ಕೂಡ ಗಂಗೊಳ್ಳಿ ಪರಿಸರದ ಜನರು ಆಕ್ರೋಷ ವ್ಯಕ್ತಪಡಿಸಿದ್ದು ಆರೋಪಿಯನ್ನು ಶೀಘ್ರವೇ ಬಂಧಿಸಿ ಆತನಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಉಮೇಶಕುಮಾರ ವಿವಾಹಿತನಾಗಿದ್ದು, ಪತ್ನಿಯನ್ನು ತ್ಯಜಿಸಿದ್ದಾನೆ. ಇವನಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಗಂಗೊಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸುಬ್ಬಣ್ಣ ಅವರು ಮಹಿಳೆಯ ದೂರು ಸ್ವೀಕರಿಸಿ ಇದು ಗಂಭೀರ ಪ್ರಕರಣವಾಗಿರುವುದರಿಂದ ಅವನ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ, ಸದಸ್ಯರಾದ ಎಡ್ವರ್ಡ್ ಕಾರ್ಡಿನ್, ಮುಜಾಹಿದ್, ರೋಸಿ ಫೇರ್ನಾಂಡೀಸ್ ಸೇರಿದಂತೆ ವಿವಿಧ ಸಮುದಾಯಗಳಿಗೆ ಮತ್ತು ಮಹಿಳಾ ಸಂಘಟನೆಗಳಿಗೆ ಸೇರಿದ ಸುಮಾರು ಎಂಬತ್ತು ಮಂದಿ ದೂರುದಾರರ ಜತೆ ಠಾಣೆಗೆ ಬಂದು ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

Write A Comment